Asianet Suvarna News Asianet Suvarna News

ನಿಮ್ಮ ಪ್ರೀತಿಯ ಸಹೋದರಿಗೆ ನೀಡಬಹುದಾದ 5 ಅದ್ಭುತ ರಕ್ಷಾ ಬಂಧನ ಉಡುಗೊರೆಗಳಿವು

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರಬಲ ಬೆಸುಗೆಯ ಸಂಕೇತ.  ಸಹೋದರಿಯ ಸುರಕ್ಷತೆಯ ಹೊಣೆಯನ್ನು ಸಹೋದರನು ಪುನರ್ನವೀಕರಿಸುವ ಸಂದರ್ಭವಿದು. ಸಹೋದರನ ಕೈಗೆ ರಾಖಿಯನ್ನು ಸಾಂಕೇತಿಕವಾಗಿ ಕಟ್ಟುವ ಮೂಲಕ ಸಹೋದರಿಯು ಇದನ್ನು  ಆಚರಿಸುತ್ತಾರೆ.  ಪ್ರತಿಯಾಗಿ ಸಹೋದರನು ಆಕೆಗೆ ವಿಶಿಷ್ಟವಾದ ಉಡುಗೊರೆಗಳನ್ನು ನೀಡುತ್ತಾನೆ. ಈ ರಕ್ಷಾ ಬಂಧನ ಸಂದರ್ಭದಲ್ಲಿ ನಿಮ್ಮ ಪ್ರೀತಿಯ ಸಹೋದರಿಯ ಆರ್ಥಿಕ ಸಬಲೀಕರಣಕ್ಕೆ ನೀವು ನೀಡಬಹುದಾದ 5 ಉಡುಗೊರೆಗಳು ಇಲ್ಲಿವೆ.

Five Fabulous Financial Gifts This Raksha Bandhan For Your Sister

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರಬಲ ಬೆಸುಗೆಯ ಸಂಕೇತ.  ಸಹೋದರಿಯ ಸುರಕ್ಷತೆಯ ಹೊಣೆಯನ್ನು ಸಹೋದರನು ಪುನರ್ನವೀಕರಿಸುವ ಸಂದರ್ಭವಿದು. ಸಹೋದರನ ಕೈಗೆ ರಾಖಿಯನ್ನು ಸಾಂಕೇತಿಕವಾಗಿ ಕಟ್ಟುವ ಮೂಲಕ ಸಹೋದರಿಯು ಇದನ್ನು  ಆಚರಿಸುತ್ತಾರೆ.  ಪ್ರತಿಯಾಗಿ ಸಹೋದರನು ಆಕೆಗೆ ವಿಶಿಷ್ಟವಾದ ಉಡುಗೊರೆಗಳನ್ನು ನೀಡುತ್ತಾನೆ.

ಸಹೋದರರು, ರಾಖಿ ಕಟ್ಟುವ ಸಹೋದರಿಗೆ ನಿಜಾರ್ಥದಲ್ಲಿ ‘ಸುರಕ್ಷಿತ’ವಾಗಿರುವ ಉಡುಗೊರೆಯನ್ನೇಕೆ ನೀಡಬಾರದು? ಆಕೆಗೆ ‘ಆರ್ಥಿಕ ಸುರಕ್ಷತೆ’ ಒದಗಿಸಬಲ್ಲ, ಹಾಗೂ ದಿನಗಳೆದಂತೆ ಅದರ ಮೌಲ್ಯ ವೃದ್ಧಿಯಾಗುವಂತಹ ಉಡುಗೊರೆಯನ್ನು ನೀಡಿದರೆ ಹೇಗೆ? ಈ ಉಡುಗೊರೆಗಳು ಮೇಲ್ನೋಟಕ್ಕೆ ಆಕರ್ಷಣೀಯವಲ್ಲದಿರಬಹುದು ಅಥವಾ ಸುಂದರ ಗಿಫ್ಟ್ ಪೇಪರ್’ನಲ್ಲಿ ಪ್ಯಾಕ್ ಆಗಿಲ್ಲದಿರಬಹುದು, ಆದರೆ ಸಹೋದರಿಯ ಭವಿಷ್ಯದ ಆರ್ಥಿಕ ಸುರಕ್ಷತೆ ದೃಷ್ಟಿಯಿಂದ, ಉಳಿತಾಯ/ಹೂಡಿಕೆಯ ಉತ್ತಮ ಕೊಡುಗೆಯಾಗಬಹುದು.

ಜೀವನಾದ್ಯಂತ ನಿಮ್ಮ ಸಹೋದರಿಗೆ ಉಪಯೋಗವಾಗುವಂತಹ 5 ಹಣಕಾಸು ಉಡುಗೊರೆಗಳು ಏನೇನಿವೆ ಎಂದು ನಾವು ನೋಡೋಣ ಬನ್ನಿ.

ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan –SIP)

ಎಸ್’ಐಪಿಗಳನ್ನು ಬಹಳ ಹಿಂದಿನಿಂದಲೂ ಸುರಕ್ಷಿತವಾದ ಹೂಡಿಕೆಯ ಆಯ್ಕೆಯೆಂದೇ ಪರಿಗಣಿಸಲಾಗುತ್ತಿದೆ.  ಎಸ್’ಐಪಿಯಲ್ಲಿ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಹೂಡಬೇಕಾಗುತ್ತದೆ. ಮ್ಯೂಚುವಲ್ ಫಂಡ್’ನಲ್ಲಿ ಈ ನಿರ್ದಿಷ್ಟ ಮೊತ್ತವನ್ನು ಹೂಡಲಾಗುತ್ತದೆ.

ಉದಾಹರೆಣೆಗೆ, ನೀವು ರೂ. 5000 ಹೂಡುವ ಮೂಲಕ ನಿಮ್ಮ ಸಹೋದರಿಗಾಗಿ ಈ ಯೋಜನೆಯನ್ನು ಆರಂಭಿಸಿದರೆ, ಪ್ರತಿ ತಿಂಗಳು ಆಕೆ ಅದನ್ನು ಮುಂದುವರಿಸುವುದನ್ನು ರೂಢಿಸಿಕೊಳ್ಳಬೇಕು. ನೀವು ಅದಕ್ಕಾಗಿ ನಿಮ್ಮ ಸಹೋದರಿಯನ್ನು ಮುಂಚಿತವಾಗಿ ಸಜ್ಜುಗೊಳಿಸಬೇಕು.  ಹೂಡಿದ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದಾದರೂ, ದೀರ್ಘಕಾಲ ಮುಂದುವರೆಸಿದರೆ ಹೆಚ್ಚು ಫಲಪ್ರದವಾಗಿರುತ್ತದೆ.  ಯೋಜನೆಯಲ್ಲಿ ಕನಿಷ್ಠವೆಂದರೆ ಪ್ರತಿ ತಿಂಗಳು ರೂ.500ನ್ನು ಹೂಡಬೇಕು. ಇದು ನಿಮ್ಮ ಸಹೋದರಿಗೆ ನೀಡುವ ಉತ್ತಮ ರಾಖಿ ಉಡುಗೊರೆಯಾಗಬಹುದು.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ( Monthly Income Scheme-MIS)

ಭಾರತದಲ್ಲಿ ಅಂಚೆ ಕಚೇರಿಗಳು ಕೇವಲ ರಾಖಿಯನ್ನು ಬಟವಾಡೆ ಮಾಡುವುದಷ್ಟೇ ಅಲ್ಲ, ಮಾಸಿಕ ಆದಾಯ ಬರುವ  ‘ಮಾಸಿಕ ಆದಾಯ ಯೋಜನೆ’ಯಂತಹ  ಆಕರ್ಷಕ ಹೂಡಿಕೆಯ ಆಯ್ಕೆಗಳನ್ನೂ ಅವು ಒದಗಿಸುತ್ತವೆ. ಓಬ್ಬ ವ್ಯಕ್ತಿಯು ಈ ಯೋಜನೆಯಲ್ಲಿ ಕನಿಷ್ಠ ರೂ. 1500 ರಿಂದ ಆರಂಭಿಸಿ ರೂ. 4,5 ಲಕ್ಷದವೆರೆಗೂ ಹಣವನ್ನು ಹೂಡಬಹುದಾಗಿದೆ. ನಿಮಗೆ ಕಾಲೇಜುಗಳಲಲ್ಲಿ ಓದುತ್ತಿರುವ ಸಹೋದರಿಯರಿದ್ದರೆ ಇದು ನಿಮಗೆ ಸೂಕ್ತವಾದ ಆಯ್ಕೆಯಾಗಬಹುದು. ಅವರ ಶಾಲಾ/ಕಾಲೇಜು ಶುಲ್ಕ, ಟ್ಯೂಷನ್ ಫೀ, ಪುಸ್ತಕಗಳು ಮುಂತಾದ  ತಿಂಗಳ ಹಣಕಾಸು ಅವಶ್ಯಕತೆಗಳನ್ನು ಈ ಮೂಲಕ ನಿಭಾಯಿಸಬಹುದಾಗಿದೆ.

ಆರೋಗ್ಯ ವಿಮೆ:

ರಕ್ಷಾ ಬಂಧನ ಸಂದರ್ಭದಲ್ಲಿ ನಿಮ್ಮ ಸಹೋದರಿಗೆ ನೀಡಬಹುದಾದ ಇನ್ನೊಂದು ಅತ್ಯಮೂಲ್ಯ ಉಡುಗೊರೆಯೆಂದರೆ ಅದು ‘ ಆರೋಗ್ಯ ವಿಮೆ’. ಈ ಮೂಲಕ ನೀವು ಅವಳಿಗೆ ನಿಜಾರ್ಥದಲ್ಲಿ ಸುರಕ್ಷತೆಯನ್ನು ಒದಗಿಸಬಹುದು. ಸೂಕ್ತವಾದ ವಿಮಾ ಮೊತ್ತವನ್ನು ಹೊಂದಿರುವ ವಿಮಾ ಯೋಜನೆಯನ್ನು ನೀವು ಅವಳ ಹೆಸರಿನಲ್ಲಿ ಖರೀದಿಸಬಹುದು. ವೈದ್ಯಕೀಯ ಸೇವೆಗಳು ಬಹಳ ದುಬಾರಿಯಾಗುತ್ತಿರುವ ಈ ಸಂದರ್ಭದಲ್ಲಿ,  ಅನಾರೋಗ್ಯ ಕಾರಣಗಳಿಂದ ಆಸ್ಪತ್ರೆಯಲ್ಲಿ ದಾಖಲಾದಾಗ ಇದು ಆಕೆಯೆ ಸಹಾಯಕ್ಕೆ ಬರುವುದು.  

ಈಕ್ವಿಟಿ ಸಂಯೋಜಿತ ಉಳಿತಾಯ ಯೋಜನೆಗಳು (ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್- ELSS)

ಈಎಲ್ಎಸ್ಎಸ್ ರಕ್ಷಾ ಬಂಧನ ಸಂದರ್ಭದಲ್ಲಿ ನಿಮ್ಮ ಸಹೋದರಿಗೆ ನೀಡುವ ಅದ್ಭುತ ‘ಉಳಿತಾಯ’ ಉಡುಗೊರೆಯಾಗಬಹುದು. ಈ ಯೋಜನೆಯಲ್ಲಿ ನಿಮ್ಮ ಹಣವನ್ನು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಲಾಗುತ್ತದೆ. 3 ವರ್ಷಗಳ ಲಾಕ್ ಅವಧಿ ಹೊಂದಿರುವ ಈ ಯೋಜನೆಯಲ್ಲಿ ಕನಿಷ್ಠವೆಂದರೆ ರೂ.500ನ್ನು ಹೂಡಬಹುದಾಗಿದೆ.  ಈ ಯೋಜನೆಯಲ್ಲಿ ಹಣ ಹೂಡುವುದರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅನ್ವಯ ತೆರಿಗೆ ವಿನಾಯಿತಿಯೂ ಇರುವುದಲ್ಲದೇ, ಮುಂದಿನ ದಿನಗಳಲ್ಲಿ ಆಕರ್ಷಕ ಲಾಭವನ್ನು ಪಡೆಯಬಹುದಾಗಿದೆ. 

ಕಡಿಮೆ ಮೌಲ್ಯದ  ಯುನಿಟ್ ಸಂಯೋಜಿತ ವಿಮಾ ಯೋಜನೆಗಳು (ULIPS)

ಯುಎಲ್ಐಪಿಎಸ್’ಗಳು ಕೂಡಾ ನೀವು ನಿಮ್ಮ ಸಹೋದರಿಗೆ ನೀಡುವ ಸುಂದರವಾದ ಉಡುಗೊರೆಯಾಗಬಹುದು. ಈ ಯೋಜನೆಯ ವಿಶೇಷತೆಯೆಂದರೆ, ಅದು ಹೂಡಿಕೆಯೂ ಹೌದು, ಜತೆಗೆ ವಿಮೆಯೂ ಕೂಡಾ!. 2010 ಬಳಿಕ ಪ್ರೀಮಿಯಂ ಮೊತ್ತದಲ್ಲಿ ಬಹಳ ಕಡಿತವಾಗಿರುವುದರಿಂದ,  ನಿಮ್ಮ ಹಣಕ್ಕೆ ಉತ್ತಮ ಮೌಲ್ಯ ಸಿಗುವುದು. ಈಕ್ವಿಟಿ ಹಾಗೂ ಬಾಂಡ್’ನಲ್ಲಿ ಮಿಶ್ರವಾಗಿ ನಿಮ್ಮ ಹಣವನ್ನು ಹೂಡಲಾಗುವುದರಿಂದ, ಹಣವನ್ನು ಹೂಡಿ ನೀವು ನಿಶ್ಚಿಂತರಾಗಬಹುದು.

ರಾಖಿ ಉಡುಗೊರೆಯಾಗಿ ಪ್ರೀತಿಯ ಸಹೋದರಿಗೆ ನೀಡಬಹುದಾದ ಹೂಡಿಕೆಯ ರೂಪದ ಇನ್ನೂ ಬಹಳಷ್ಟು ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳನ್ನು ತಿಳಿದುಕೊಂಡು ನೀವು ಮುಂದುವರೆಯಬಹುದು.   

Five Fabulous Financial Gifts This Raksha Bandhan For Your Sister

-ಆಧಿಲ್ ಶೆಟ್ಟಿ

ಸಿಇಓ, ಬ್ಯಾಂಕ್ ಬಝಾರ್.ಕಾಂ

 

Follow Us:
Download App:
  • android
  • ios