Asianet Suvarna News Asianet Suvarna News

ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಗೆ ಲೈವ್'ನಲ್ಲೇ ಕಪಾಳಮೋಕ್ಷವಾದಾಗ...!

ಸೈಮಾ ಕರಾಚಿಯ ನದ್ರಾ ನೋಂದಣಿ ಕಚೇರಿಯ ಸಿಬ್ಬಂದಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಮಾಡಲು ತೆರಳಿದ್ದರು. ಈ ವೇಳೆ ಓರ್ವ ಪೇದೆಯನ್ನು ಮಾತನಾಡಿಸಲು ಯತ್ನಿಸಿದಾಗ ಆತ ಕುಪಿತಗೊಂಡಿದ್ದಾನೆ. ಮೊದಲು ರಿಪೋರ್ಟ್‌ ಮಾಡುವುದನ್ನು ನಿಲ್ಲಿಸಲು ಪೊಲೀಸ್‌ ಹೇಳಿದ್ದಾನೆ. ಬಳಿಕ ಕ್ಯಾಮರಾಮನ್‌ ಶೂಟ್ ಮಾಡುವುದನ್ನು ತಡೆಯಲು ಯತ್ನಿಸಿದ್ದಾನೆ. ಈ ವೇಳೆ ವರದಿಗಾರ್ತಿ ಸೈಮಾ ಮಾಧ್ಯಮದ ಮೇಲೆ ಹಲ್ಲೆ ನಡೆಯುವುದನ್ನು ರೆಕಾರ್ಡ್‌ ಮಾಡುವಂತೆ ಕ್ಯಾಮರಾಮೆನ್‌'ಗೆ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಪೇದೆ ಎಲ್ಲರ ಎದುರು ಆಕೆಯ ಕೆನ್ನೆಗೆ ಬಾರಿಸಿದ್ದಾನೆ.

Female News Anchor slapped by Policeman

ಇಸ್ಲಮಾಬಾದ್(ಅ.21): ನ್ಯೂಸ್ ಚಾನಲ್‌'ನ ಮಹಿಳಾ ರಿಪೋರ್ಟರ್‌ವೊಬ್ಬರಿಗೆ ಪೊಲೀಸನೋರ್ವ ಸಾರ್ವಜನಿಕ ಸ್ಥಳದಲ್ಲೇ ಕಪಾಳ ಮೋಕ್ಷ ಮಾಡಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಕೆ-21 ನ್ಯೂಸ್‌ ಚಾನಲ್‌'ನ ಸೈಮಾ ಕನ್ವಾಲ್‌ ಎಂಬಾಕೆಯೇ ಪೊಲೀಸ್‌'ನಿಂದ ಹೊಡೆಸಿಕೊಂಡ ರಿಪೋರ್ಟರ್‌.

ಸೈಮಾ ಕರಾಚಿಯ ನದ್ರಾ ನೋಂದಣಿ ಕಚೇರಿಯ ಸಿಬ್ಬಂದಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಮಾಡಲು ತೆರಳಿದ್ದರು. ಈ ವೇಳೆ ಓರ್ವ ಪೇದೆಯನ್ನು ಮಾತನಾಡಿಸಲು ಯತ್ನಿಸಿದಾಗ ಆತ ಕುಪಿತಗೊಂಡಿದ್ದಾನೆ. ಮೊದಲು ರಿಪೋರ್ಟ್‌ ಮಾಡುವುದನ್ನು ನಿಲ್ಲಿಸಲು ಪೊಲೀಸ್‌ ಹೇಳಿದ್ದಾನೆ. ಬಳಿಕ ಕ್ಯಾಮರಾಮನ್‌ ಶೂಟ್ ಮಾಡುವುದನ್ನು ತಡೆಯಲು ಯತ್ನಿಸಿದ್ದಾನೆ. ಈ ವೇಳೆ ವರದಿಗಾರ್ತಿ ಸೈಮಾ ಮಾಧ್ಯಮದ ಮೇಲೆ ಹಲ್ಲೆ ನಡೆಯುವುದನ್ನು ರೆಕಾರ್ಡ್‌ ಮಾಡುವಂತೆ ಕ್ಯಾಮರಾಮೆನ್‌'ಗೆ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಪೇದೆ ಎಲ್ಲರ ಎದುರು ಆಕೆಯ ಕೆನ್ನೆಗೆ ಬಾರಿಸಿದ್ದಾನೆ.

ಈ ವಿಡಿಯೋ ವೈರಲ್‌ ಆಗಿದ್ದು, ವರದಿಗಾರ್ತಿ ಮೇಲೆ ಹಲ್ಲೆ ಮಾಡಿರುವ ಕುರಿತು ಗುಲ್‌ಬಾಹರ್‌ ಪೊಲೀಸರು ಪೇದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಕಚೇರಿ ಕೆಲಸಕ್ಕೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ನೋಂದಣಿ ಕಚೇರಿ ಟಿವಿ ಚಾನೆಲ್‌ ರಿಪೋರ್ಟರ್‌, ಕ್ಯಾಮೆರಾಮನ್ ವಿರುದ್ಧ ದೂರು ದಾಖಲಿಸಿದೆ.

 

Follow Us:
Download App:
  • android
  • ios