Asianet Suvarna News Asianet Suvarna News

ಸ್ವಂತ ಹಣದಲ್ಲಿ ಕೆರೆಗೆ ನೀರು ತುಂಬಿಸಿದ ರೈತರು

ಗ್ರಾಮದ ರೈತರೆಲ್ಲ ಸೇರಿ ಸುಮಾರು 5 ಲಕ್ಷ ರೂಪಾಯಿ ಸಂಗ್ರಹ ಮಾಡಿ, ಆ ನಂತರ ಕಾಲುವೆಯಲ್ಲಿ ಹರಿಯುವ ನೀರನ್ನು ಪೈಪ್​ಗಳ ಮೂಲಕ ಹರಿಸಿ ಕೆರೆ ತುಂಬಿಸಿದ್ದಾರೆ.

Farmers refill the pond with their own money

ಹಾವೇರಿ (ಅ.19): ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಬೆನಕನಕೊಂಡ ಗ್ರಾಮ ಪ್ರತಿ ವರ್ಷ ಬರಗಾಲದಿಂದಾಗಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಆದರೆ ಈ ವರ್ಷ ರೈತರು ನೀರಿನ ಸಮಸ್ಯೆ ದೂರ ಮಾಡಲು ಪಣತೊಟ್ಟು ಗ್ರಾಮದ ರೈತರೆಲ್ಲ ಸೇರಿ ಸುಮಾರು 5 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ.ಆ ನಂತರ ಕಾಲುವೆಯಲ್ಲಿ ಹರಿಯುವ ನೀರನ್ನು ಪೈಪ್​ಗಳ ಮೂಲಕ ಕೆರೆ ತುಂಬಿಸಿದ್ದಾರೆ.

ಕೆರೆ ತುಂಬಿದ್ದರಿಂದ ಗ್ರಾಮದ ಜಾನುವಾರುಗಳಿಗೆ ನೀರು ಸಿಗುವುದರ ಜೊತೆಗೆ ಅಂತರ್ಜಲ ಹೆಚ್ಚಾಗಿದ್ದು, ಬೋರವೆಲ್ ಗಳಲ್ಲಿ ನೀರು ಬರತೊಡಗಿದೆ.

Follow Us:
Download App:
  • android
  • ios