ಝಾಕಿರ್ ನಾಯಕ್’ಗೆ ಸೇರಿದ 18 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
news
By Suvarna Web Desk | 02:50 PM March 20, 2017

ಝಾಕಿರ್ ನಾಯಕ್ ಸಂಸ್ಥೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್’ಎಫ್) ಸಂಸ್ಥೆಯ ಹೆಸರಿನಲ್ಲಿದ್ದ ಮ್ಯುಚುವಲ್ ಫಂಡ್, ರಿಯಲ್ ಎಸ್ಟೇಟ್ ಆಸ್ತಿ ಹಾಗೂ ಬ್ಯಾಂಕುಗಳಲ್ಲಿದ್ದ ಸುಮಾರು ರೂ.18.37 ಕೋಟಿ ಮೌಲ್ಯದ ಆಸ್ತಿಯನ್ನು ಮನಿ ಲಾಂಡರಿಂಗ್ ಆಕ್ಟ್-2002ರನ್ವಯ ಮುಟ್ಟುಗೋಲು ಹಾಕಲಾಗಿದೆ.

ಮುಂಬೈ (ಮಾ,20): ವಿವಾದಾತ್ಮಕ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯಕ್’ಗೆ ಸೇರಿದ 18 ಕೋಟಿ ಮೌಲ್ಯದ ಆಸ್ತಿಯನ್ನು ಇಂದು  ಜಾರಿ ನಿರ್ದೇಶನಾಲಯವು (ಈಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದೆ.

ಝಾಕಿರ್ ನಾಯಕ್ ಸಂಸ್ಥೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್’ಎಫ್) ಸಂಸ್ಥೆಯ ಹೆಸರಿನಲ್ಲಿದ್ದ ಮ್ಯುಚುವಲ್ ಫಂಡ್, ರಿಯಲ್ ಎಸ್ಟೇಟ್ ಆಸ್ತಿ ಹಾಗೂ ಬ್ಯಾಂಕುಗಳಲ್ಲಿದ್ದ ಸುಮಾರು ರೂ.18.37 ಕೋಟಿ ಮೌಲ್ಯದ ಆಸ್ತಿಯನ್ನು ಮನಿ ಲಾಂಡರಿಂಗ್ ಆಕ್ಟ್-2002ರನ್ವಯ ಮುಟ್ಟುಗೋಲು ಹಾಕಲಾಗಿದೆ.

ಐಆರ್’ಎಫ್ ಹೆಸರಿನಲ್ಲಿದ್ದ 5 ಬ್ಯಾಂಕು  ಖಾತೆಗಳಲಿದ್ದ ರೂ.1.23 ಕೋಟಿ ರೂ ಅಲ್ಲದೇ ಐಆರ್’ಎಫ್ ಹೆಸರಿನಲ್ಲಿ ರೂ.9.41 ಕೋಟಿ ಮ್ಯುಚುವಲ್ ಫಂಡ್, ಹಾರ್ಮನಿ ಮೀಡಿಯಾ ಲಿಮಿಟೆಡ್ ಹೆಸರಿನಲ್ಲಿದ್ದ 0.68 ಕೋಟಿ ಮೌಲ್ಯದ ಗೋದಾಮು, ಹಾಗೂ ಇಸ್ಲಾಮಿಕ್ ಎಡುಕೇಶನ್ ಟ್ರಸ್ಟ್ ಹೆಸರಿನಲ್ಲಿದ್ದ ರೂ.7.05 ಕೋಟಿ ಮೌಲ್ಯದ ಶಾಲಾ ಕಟ್ಟಡ ಇದರಲ್ಲಿ ಸೇರಿದೆ.

ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಆರೋಪದಲ್ಲಿ ಝಾಕಿರ್ ನಾಯಕ್ ಸಂಸ್ಥೆಗೆ ಕೇಂದ್ರ ಸರ್ಕಾರವು ನಿಷೇಧ ಹೇರಿದೆ.  

Show Full Article