Asianet Suvarna News Asianet Suvarna News

ಜಿಎಸ್ಟಿ ಅರ್ಥೈಸಿಕೊಳ್ಳೋಣ: ಹೋಟೆಲ್’ಗಳಲ್ಲಿ ನೀವೆಷ್ಟು ಪಾವತಿಸಬೇಕು?

ಕಳೆದ ಜು.1ರಂದು ದೇಶಾದ್ಯಂತ ಜಿಎಸ್ಟಿಯು ಜಾರಿಗೆ ಬಂದಿದೆ. ಹೊಸ ತೆರಿಗೆ ದರಗಳು ಹಾಗೂ ಸರಕು ಮತ್ತು ಸೇವೆಗಳ ಮೇಲೆ ಆಗುವ ಬದಲಾವಣೆಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಇನ್ನೂ ಮುಂದುವರೆದಿದೆ.  ಈ ನಡುವೆ ಬಹಳಷ್ಟು ಉದ್ಯಮಗಳು ಜಿಎಸ್ಟಿಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಸರ್ಕಾರದ ಸತತ ಎಚ್ಚರಿಕೆ ಬಳಿಕವೂ ಬಹಳಾರು ಉದ್ಯಮ ಸಂಸ್ಥೆಗಳು ತಮ್ಮ ಉತ್ಪನ್ನಗಳ ದರಗಳನ್ನು ಹೆಚ್ಚಿಸಿವೆ.

Decoding GST How much bill you will actually pay in restaurants

ಜಿಎಸ್ಟಿ ಹೆಸರಿನಲ್ಲಿ ಹೋಟೆಲ್’ಗಳು ಗ್ರಾಹಕರನ್ನು ಹೇಗೆ ವಂಚಿಸುತ್ತಿವೆ ಎಂದು ವಿಶ್ಲೇಷಿಸೋಣ.

ರೆಸ್ಟೋರೆಂಟ್’ಗಳು ವಿಧಿಸುವ ತೆರಿಗೆಗಳು:

ಜಿಎಸ್ಟಿ-ಪೂರ್ವ ವ್ಯವಸ್ಥೆಯಲ್ಲಿ ರೆಸ್ಟೋರೆಂಟ್ ಬಿಲ್’ಗಳು, ವ್ಯಾಟ್, ಸೇವಾ ತೆರಿಗೆ, ಸ್ವಚ್ಛ ಭಾರತ ಸೆಸ್, ಕೃಷಿ ಕಲ್ಯಾಣ ಸೆಸ್, ಹಾಗೂ ಸೇವಾ ಶುಲ್ಕಗಳನ್ನು (ಕೆಲವು ರೆಸ್ಟೋರೆಂಟ್’ಗಳಲ್ಲಿ)  ಒಳಗೊಂಡಿರುತ್ತಿತ್ತು. ಗ್ರಾಹಕರು ಸೇವಿಸಿದ ಆಹಾರಕ್ಕೆ ವ್ಯಾಟ್ ಅನ್ವಯವಾಗುತ್ತಿದರೆ, ರೆಸ್ಟೋರೆಂಟ್ ಒದಗಿಸಿದ ಸೇವೆಗೆ ಸೇವಾ ಶುಲ್ಕ ವಿಧಿಸಲಾಗುತ್ತಿತ್ತು; ಸೇವಾಶುಲ್ಕಕ್ಕೂ ಸರ್ಕಾರಕ್ಕೂ ಏನೂ ಸಂಬಂಧವಿರಲಿಲ್ಲ. ಈ ಕೆಳಗಿನ ಉದಾಹರಣೆಯೊಂದಿಗೆ ಅದನ್ನು ಅರ್ಥ ಮಾಡಿಕೊಳ್ಳೋಣ:

ರೆಸ್ಟೋರೆಂಟ್  ಬಿಲ್ ( ಜಿಎಸ್ಟಿ ಪೂರ್ವ ವ್ಯವಸ್ಥೆಯಲ್ಲಿ)

Decoding GST How much bill you will actually pay in restaurants

ಸೂಚನೆ: ವ್ಯಾಟ್ ದರ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.  

ಜಿಎಸ್ಟಿ ವ್ಯವಸ್ಥೆಯಲ್ಲಿ ಹೋಟೆಲ್’ಗಳನ್ನು ಈ ರೀತಿ ವಿಂಗಡಿಸಲಾಗಿದೆ.

Decoding GST How much bill you will actually pay in restaurants

ಹೋಟೆಲ್’ಗಳಿಗೆ ಶೇ.5ರಿಂದ ಶೆ.18ರವರೆಗೆ ಜಿಎಸ್ಟಿ ದರಗಳು ಅನ್ವಯವಾಗುತ್ತದೆ. ಇಲ್ಲಿ  ಸಣ್ಣ ಹೋಟೆಲ್’ಗಳಿಗೆ ಇನ್’ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವಿರುವುದಿಲ್ಲ. ಇತರ ಹೋಟೆಲ್’ಗಳಿಗೆ ಅದು ಅನ್ವಯವಾಗುತ್ತದೆ. ಮೇಲಿನ ಬಿಲ್’ಅನ್ನೇ ಜಿಎಸ್ಟಿ ವ್ಯವಸ್ಥೆಯಡಿಯಲ್ಲಿ ವಿಶ್ಲೇಷಿಸೋಣ:

Decoding GST How much bill you will actually pay in restaurants

ಮೇಲಿನ ಉದಾಹರಣೆಯಲ್ಲಿ, ಹಿಂದಿನ ವ್ಯವಸ್ಥೆಗೆ ಹೋಲಿಸಿದಾಗ ಹೊಸ ವ್ಯವಸ್ಥೆಯಲ್ಲಿ ಗ್ರಾಹಕರ ಮೇಲೆ ಕಡಿಮೆ ಹೊರೆ ಬೀಳುವುದು ಸ್ಪಷ್ಟವಾಗುತ್ತದೆ. ಆದರೆ, ನೀವು ಇದನ್ನೇ ಅಂತಿಮ ಮೊತ್ತವೆಂದು ಭಾವಿಸಿ ಪಾವತಿಸುವ ಮುನ್ನ ಸ್ವಲ್ಪ ತಾಳಿ, ಜಿಎಸ್ಟಿ ವ್ಯವಸ್ಥೆಯಲ್ಲಿ ನಿಮ್ಮ ಬಿಲ್ ಇನ್ನೂ ಕಡಿಮೆಯಾಗಿರಬಹುದು! ಹೇಗಂತಿರಾ? ಬನ್ನಿ ತಿಳಿಯೋಣ

ಹಳೇ ವ್ಯವಸ್ಥೆಯಲ್ಲಿ ಹೋಟೆಲ್’ಗಳು ಇನ್’ಪುಟ್ ಟ್ಯಾಕ್ಸ್ ಕ್ರೆಡಿಟನ್ನು ಕೇವಲ ವ್ಯಾಟ್ ಮೇಲೆಯೇ ವಿಧಿಸಬೇಕಿತ್ತು. ಆದರೆ ಜಿಎಸ್ಟಿಯಲ್ಲಿ ಸಂಪೂರ್ಣ ತೆರಿಗೆ ಮೊತ್ತದ ಮೇಲೆ ಇನ್’ಪುಟ್ ಟ್ಯಾಕ್ಸ್ ಕ್ರೆಡಿಟನ್ನು ಪಡೆಯಬಹುದಾಗಿದೆ.  ಎಣ್ಣೆ, ತುಪ್ಪ, ಬೆಣ್ಣೆ, ಸಕ್ಕರೆ ಮುಂತಾದ ವಸ್ತುಗಳ ಮೇಲೆ ಇನ್’ಪುಟ್ ಟ್ಯಾಕ್ಸ್ ಕ್ರೆಡಿಟನ್ನು ಹಾಕಿ, ಆಹಾರ ವಸ್ತುಗಳ ಬೆಲೆಗಳನ್ನು ಇಳಿಸಬಹುದಾಗಿದೆ. ಆ ಮೂಲಕ ಗ್ರಾಹಕರಿಗೆ ಜಿಎಸ್ಟಿ ಲಾಭವನ್ನು ವರ್ಗಾಯಿಸಬಹುದಾಗಿದೆ.

ಮದ್ಯ ಸೇವನೆ:

ಮದ್ಯವನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.  ಆದುದರಿಂದ ಅದಕ್ಕೆ ಆಯಾಯ ರಾಜ್ಯದ  ವ್ಯಾಟ್ ತೆರಿಗೆ ಅನ್ವಯಿಸುತ್ತದೆ. ಒಂದೇ ಹೋಟೆಲ್’ನಲ್ಲಿ  ಆಹಾರ ಹಾಗೂ ಮದ್ಯವನ್ನು ಸೇವಿಸಿದಲ್ಲಿ, ಹೋಟೆಲ್’ಗಳು  ತಿಂಡಿ-ತಿನಿಸುಗಳಿಗೆ ಜಿಎಸ್ಟಿ ಹಾಗೂ ಮದ್ಯಕ್ಕೆ ವ್ಯಾಟ್ ವಿಧಿಸಿ ಪ್ರತ್ಯೇಕ ಬಿಲ್’ನ್ನು ನೀಡಬೇಕು.

ಜಿಎಸ್ಟಿ ನೆಪವನ್ನು ಮುಂದಿಟ್ಟುಕೊಂಡು ಕೆಲವು ಹೋಟೆಲ್’ಗಳು ತಿಂಡಿಗಳ ದರವನ್ನು ಹೆಚ್ಚಿಸಿವೆ, ಆದರೆ ವಾಸ್ತವದಲ್ಲಿ, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯಿಂದ ದರಗಳು ಇನ್ನೂ ಕಡಿಮೆಯಾಗಬೇಕು. ರೆಸ್ಟೋರೆಂಟ್ ಮಾಲಕರು ಹೊಸ ದರವನ್ನು ಸಿದ್ಧಪಡಿಸಲಿದ್ದಾರೆ. ತೆರಿಗೆ ಸಂಬಂಧಪಟ್ಟ ಗೊಂದಲಗಳಿಗೆ ಶೀಘ್ರವೇ ತೆರೆಬೀಳಲಿದೆ.

ಗ್ರಾಹಕರು ಒಂದು ಮುಖ್ಯ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಅದೇನೆಂದರೆ, ಹೋಟೆಲ್’ಗಳಿಗೆ ಗರಿಷ್ಠ ಜಿಎಸ್ಟಿ ಮಿತಿ  ಶೇ.18 ಮಾತ್ರ.  ಒಂದು ವೇಳೆ ಯಾವುದೇ ಹೋಟೆಲ್’ನವರು ಅದಕ್ಕಿಂತ ಹೆಚ್ಚು ತೆರಿಗೆಯನ್ನು ವಿಧಿಸಿದ್ದಾರೆ ಎಂದಾದಲ್ಲಿ ಗ್ರಾಹಕರು ದೂರನ್ನು ಸಲ್ಲಿಸಬಹುದಾಗಿದೆ.

Decoding GST How much bill you will actually pay in restaurants

-ಆಧಿಲ್ ಶೆಟ್ಟಿ, ಸಿಇಓ, ಬ್ಯಾಂಕ್ ಬಝಾರ್.ಕಾಮ್

Follow Us:
Download App:
  • android
  • ios