Asianet Suvarna News Asianet Suvarna News

ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ಟ್ರೈಲರ್ ಬಿಡುಗಡೆ

ಚಿತ್ರವು ಕುಸ್ತಿಪಟು ಮಹಾವೀರ್‌ ಸಿಂಗ್‌ ಪೋಗಟ್‌ ಅವರ ಜೀವನ ಆಧಾರಿತ ಕತೆಯಾಗಿದೆ. ಮಹಾವೀರ್‌ ತಮ್ಮ ಮಕ್ಕಳಾದ ಗೀತಾ ಪೋಗಟ್‌ ಮತ್ತು ಬಬಿತಾ ಕುಮಾರಿ ಅವರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತಾವೇ ಕೋಚ್ ಆಗಿದ್ದರು.ಕುಸ್ತಿ ಪಟುವಿನ ದೇಹಕ್ಕಾಗಿ ಅಮೀರ್ ಈಗಾಗಲೇ ವರ್ಕ್ ಔಟ್ ಮಾಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಮೀರ್, ಕಿರಣ್ ರಾವ್, ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಿಸುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಅಮಿರ್ ಖಾನ್ ಚಿತ್ರವನ್ನು ನೋಡಲು ಅಭಿಮಾನಿಗಳು ಡಿಸೆಂಬರ್'ವರೆಗೂ ಕಾಯಲೇಬೇಕು.

Dangal Movie Official trailer is released

ಪಿಕೆ ಬಳಿಕ ಬಾಲಿವುಡ್'ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್‍ ಅಭಿನಯದ ಬಹುನಿರೀಕ್ಷಿತ ಚಿತ್ರ ದಂಗಲ್ ಚಿತ್ರದ ಆಫೀಶಿಯಲ್ ಟ್ರೈಲರ್ ರಿಲೀಸ್ ಆಗಿದೆ. ಅಮೀರ್ ಖಾನ್ ಸಿನಿಮಾ ಅಂದರೆ ನಿರೀಕ್ಷೆಯೂ ಹೆಚ್ಚಿರುತ್ತದೆ. ಚಿತ್ರದಿಂದ ಚಿತ್ರಕ್ಕೆ ಹೊಸ ಹೊಸ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೀರ್ ಖಾನ್ ಈಗ ದಂಗಲ್'ನಲ್ಲೂ ಅದೇ ಎನರ್ಜಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಫಸ್ಟ್ ಲುಕ್ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲವನ್ನು ಜಾಸ್ತಿ ಮಾಡಿದೆ.

ಚಿತ್ರವು ಕುಸ್ತಿಪಟು ಮಹಾವೀರ್‌ ಸಿಂಗ್‌ ಪೋಗಟ್‌ ಅವರ ಜೀವನ ಆಧಾರಿತ ಕತೆಯಾಗಿದೆ. ಮಹಾವೀರ್‌ ತಮ್ಮ ಮಕ್ಕಳಾದ ಗೀತಾ ಪೋಗಟ್‌ ಮತ್ತು ಬಬಿತಾ ಕುಮಾರಿ ಅವರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತಾವೇ ಕೋಚ್ ಆಗಿದ್ದರು.ಕುಸ್ತಿ ಪಟುವಿನ ದೇಹಕ್ಕಾಗಿ ಅಮೀರ್ ಈಗಾಗಲೇ ವರ್ಕ್ ಔಟ್ ಮಾಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಮೀರ್, ಕಿರಣ್ ರಾವ್, ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಿಸುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಅಮಿರ್ ಖಾನ್ ಚಿತ್ರವನ್ನು ನೋಡಲು ಅಭಿಮಾನಿಗಳು ಡಿಸೆಂಬರ್'ವರೆಗೂ ಕಾಯಲೇಬೇಕು.

 

Follow Us:
Download App:
  • android
  • ios