Asianet Suvarna News Asianet Suvarna News

ಡೈರಿ ಬಿಡುಗಡೆ ಹಿಂದೆ ನರೇಂದ್ರ ಮೋದಿ ಷಡ್ಯಂತ್ರ ಕೆಪಿಸಿಸಿ ಆರೋಪ

ಹೈಕಮಾಂಡ್​'ಗೆ ಕಪ್ಪ ನೀಡಿರುವ ಡೈರಿಯ ಅಂಶಗಳು ಬಹಿರಂಗವಾಗಿದ್ದರೂ ಅದನ್ನು ಸುಲಭವಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್​ ಸಿದ್ಧವಿಲ್ಲ. ಬದಲಾಗಿ ಇದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದೆ. ಈ ಮಧ್ಯೆ ಎಂಎಲ್​ಸಿ ಗೋವಿಂದರಾಜ್​ ವಿರುದ್ಧ ಎಫ್​ಐಆರ್​ ದಾಖಲಾಗುವವರೆಗೂ ಕ್ರಮ ಇಲ್ಲ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.

Dairy Release Is A Conspracy Of Modi Says KPCC

ನವದೆಹಲಿ(ಫೆ.24): ಹೈಕಮಾಂಡ್​'ಗೆ ಕಪ್ಪ ನೀಡಿರುವ ಡೈರಿಯ ಅಂಶಗಳು ಬಹಿರಂಗವಾಗಿದ್ದರೂ ಅದನ್ನು ಸುಲಭವಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್​ ಸಿದ್ಧವಿಲ್ಲ. ಬದಲಾಗಿ ಇದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದೆ. ಈ ಮಧ್ಯೆ ಎಂಎಲ್​ಸಿ ಗೋವಿಂದರಾಜ್​ ವಿರುದ್ಧ ಎಫ್​ಐಆರ್​ ದಾಖಲಾಗುವವರೆಗೂ ಕ್ರಮ ಇಲ್ಲ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪ ಮಾಡಿ ವಾರದ ಬಳಿಕ ಹೈಕಮಾಂಡ್​ಗೆ ಕಪ್ಪ ನೀಡಲ್ಪಟ್ಟಿದ್ದು ಎಂದು ಹೇಳಲಾದ ಡೈರಿಯ ಅಂಶಗಳು ಬಹಿರಂಗವಾಗಿವೆ. ಆದರೆ ಈಗ ಇದನ್ನು ಅಷ್ಟು ಸುಲಭವಾಗಿ ಒಪ್ಪಲು ಸಿದ್ಧವಿಲ್ಲದ ರಾಜ್ಯ ಕಾಂಗ್ರೆಸ್​  ಬಿಜೆಪಿ ವಿರುದ್ಧ ಆರೋಪ ಮಾಡಿದೆ. ಡೈರಿ ಬಿಡುಗಡೆ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅರುಣ್​ ಜೇಟ್ಲಿ, ಅನಂತಕುಮಾರ್ ಅವರ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​, ಇದರ ಹಿಂದೆ ಬಿಜೆಪಿ ವರಿಷ್ಠರ ನೇರ ಕೈವಾಡದ ಬಗ್ಗೆ ಆರೋಪ ಮಾಡಿದ್ದಾರೆ.

ಇನ್ನು ಡೈರಿ ಬರೆದಿರುವವರು ಎನ್ನಲಾಗಿರುವ ಕಾಂಗ್ರೆಸ್​ ಎಂಎಲ್​ ಸಿ ಹಾಗೂ ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್​ ವಿರುದ್ಧ ದೂರು ಅಥವಾ ಎಫ್​ಐಆರ್​ ದಾಖಲಾಗುವವರೆಗೂ ಕೆಪಿಸಿಸಿಯಿಂದ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ಕೇವಲ ಆರೋಪಕ್ಕಷ್ಟೇ  ಸೀಮಿತವಾಗಿ ಹೋಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಪ್ರಕರಣ ಮತ್ತೊಂದು ಮಗ್ಗಲು ಬದಲಾಯಿಸಿದೆ. ಹೀಗಾಗಿ ಇದು ಮತ್ತೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆಗೆ ಕಾರಣವಾದರೂ ಅಚ್ಚರಿಯಿಲ್ಲ.

 

 

Follow Us:
Download App:
  • android
  • ios