ಬಿರುಕು ಬಿಟ್ಟಿದೆ ಬೌರಿಂಗ್ ಆಸ್ಪತ್ರೆ ಗೋಡೆ: ಆಸ್ಪತ್ರೆಗೆ ಬರಲು ಭಯಪಡ್ತಿದ್ದಾರೆ ರೋಗಿಗಳು
news
By Suvarna Web Desk | 08:11 AM Friday, 21 April 2017

ಮಂತ್ರಿ ಮಾಲ್ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿದ್ದು ಗೊತ್ತಿರುವ ವಿಚಾರವೇ. ಆದರೆ ಈ ಘಟನೆ ಮಾಸುವ ಮುನ್ನವೇ ಈಗ ಪ್ರತಿಷ್ಠಿತ ಬೌರಿಂಗ್ ಆಸ್ಪತ್ರೆ ಕುಸಿಯಲು ತಯಾರಾಗಿ ನಿಂತಿದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಒದಗಿಸೋ ಬೌರಿಂಗ್ ಆಸ್ಪತ್ರೆ ಈಗ ಜನರ ಪ್ರಾಣ ನುಂಗಲು ರೆಡಿಯಾಗಿದೆ. ಆ ಕುರಿತು ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

ಬೆಂಗಳೂರು(ಎ.21): ಮಂತ್ರಿ ಮಾಲ್ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿದ್ದು ಗೊತ್ತಿರುವ ವಿಚಾರವೇ. ಆದರೆ ಈ ಘಟನೆ ಮಾಸುವ ಮುನ್ನವೇ ಈಗ ಪ್ರತಿಷ್ಠಿತ ಬೌರಿಂಗ್ ಆಸ್ಪತ್ರೆ ಕುಸಿಯಲು ತಯಾರಾಗಿ ನಿಂತಿದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಒದಗಿಸೋ ಬೌರಿಂಗ್ ಆಸ್ಪತ್ರೆ ಈಗ ಜನರ ಪ್ರಾಣ ನುಂಗಲು ರೆಡಿಯಾಗಿದೆ. ಆ ಕುರಿತು ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

ಬೌರಿಂಗ್ ಆಸ್ಪತ್ರೆಗೆ ದಿನನಿತ್ಯ ನೂರಾರು ಜನ ಚಿಕಿತ್ಸೆಗಾಗಿ ಹೋಗುತ್ತಾರೆ. ಯಾವುದೇ ಅಪಘಾತಗಳಾದ್ರು ಬಡಜನರ ಮೊದಲ ಆಯ್ಕೆಯೇ ಬೌರಿಂಗ್ ಆಸ್ಪತ್ರೆ ಆಗಿರುತ್ತದೆ. ಆದರೆ ಇದೀಗ ರೋಗಿಗಳು ಬೌರಿಂಗ್ ಆಸ್ಪತ್ರೆಗೆ ಬರಲು ಭಯ ಬೀಳುತ್ತಿದ್ದಾರೆ. ಅದಕ್ಕೆ ಕಾರಣ  ಆಸ್ಪತ್ರೆ ಗೋಡೆಗಳು ಪೂರ್ತಿ ಬಿರುಕು ಬಿಟ್ಟಿರುವುದು. ಅದರಲ್ಲೂ  ತುರ್ತು ಚಿಕಿತ್ಸೆ ಹಾಗೂ ಮಕ್ಕಳ ವಾರ್ಡ್  ಇದಾಗಿದ್ದು  ರೋಗಿಗಳು ಇನ್ನೂ ಭಯಬೀಳುವಂತಾಗಿದೆ. ಆಸ್ಪತ್ರೆಗೆ ಫಿಲ್ಟರ್ ಮರಳು ಬಳಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಂದೆಡೆ ಗೋಡೆ ಬಿರುಕು ಬಿಟ್ಟಿದ್ದರೆ, ಇನ್ನೊಂದೆಡೆ ನೀರಿನ ಪೂರೈಕೆಗೆ ಅಳವಡಿಸಿರುವ ಪೈಪ್ ಸೋರಿಕೆಯಾಗುತ್ತಿದೆ. ಹೀಗಾಗಿ ಮೇಲಿನ ಅಂತಸ್ತಿಂದ ಕೆಳ ಮಹಡಿವರೆಗೂ ನೀರಿನ ಸೋರಿಕೆಯಾಗುತ್ತಿದ್ದು ಗೋಡೆ ಇನ್ನಷ್ಟು ಬಿರುಕು ಬಿಡುತ್ತಿದೆ. ಈ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಕೂಡ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡು ಬಡ ಜೀವಗಳು ಬಲಿಯಾಗುವುದನ್ನು ತಪ್ಪಿಸಬೇಕಿದೆ.

Show Full Article