ದಿಟ್ಟ ವರದಿ, ಸತ್ಯ ಶೋಧನೆಯ ಕವರ್ ಸ್ಟೋರಿ'ಗೆ 300ರ ಸಂಭ್ರಮ
news
By Suvarna Web Desk | 03:41 PM February 17, 2017

ಕನ್ನಡ ನ್ಯೂಸ್ ಚಾನೆಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿರೋ ಕವರ್ ಸ್ಟೋರಿಯ ತನಿಖಾ ವರದಿಗಾರಿಕೆಗೆ ಗಣ್ಯಾತಿಗಣ್ಯರು ಭೇಷ್ ಅಂದಿದ್ದಾರೆ.

ಸುವರ್ಣನ್ಯೂಸ್'ನ  ಹೆಮ್ಮೆಯ ಕಾರ್ಯಕ್ರಮ ಕವರ್ ಸ್ಟೋರಿ ಮತ್ತೊಂದು ಮೈಲುಗಲ್ಲು ದಾಟಿದೆ. 300 ಸಾಹಸಮಯ ಎಪಿಸೋಡನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಾಧನೆಗೆ ಕರುನಾಡಿನ ಮಂದಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2011 ರಿಂದ 2017ದ 6 ವರ್ಷದಲ್ಲಿ ಕವರ್ ಸ್ಟೋರಿ ತಂಡ  ನೂರಾರು ಸವಾಲುಗಳನ್ನು ಎದುರಿಸಿ 300 ಸಾಹಸಭರಿತ ಸಂಚಿಕೆ ಮುಗಿಸಿದೆ. ಸುವರ್ಣ ನ್ಯೂಸ್'ನ ಕವರ್ ಸ್ಟೋರಿ. ಈ ಶುಭ ಸಂದರ್ಭಕ್ಕೆ ನಾಡಿನ ಅನೇಕ ಹಿರಿಯರು, ಗಣ್ಯರು ಶುಭ ಹಾರೈಸಿದ್ದಾರೆ. ಕನ್ನಡ ನ್ಯೂಸ್ ಚಾನೆಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿರೋ ಕವರ್ ಸ್ಟೋರಿಯ ತನಿಖಾ ವರದಿಗಾರಿಕೆಗೆ ಗಣ್ಯಾತಿಗಣ್ಯರು ಭೇಷ್ ಅಂದಿದ್ದಾರೆ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರೋ ಕವರ್ ಸ್ಟೋರಿ ಇನ್ನಷ್ಟು ಸಾಧನೆ ಮಾಡಲಿ ಎಲ್ಲ ಹಿರಿಯರ ಆರೈಕೆ. ಸಮಾಜದ ಏಳಿಗೆಗಾಗಿ ಪಣ ತೊಟ್ಟಿರುವ ನಮ್ಮ ತಂಡ ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲಿದೆ.

Show Full Article