Asianet Suvarna News Asianet Suvarna News

ಪೊಲೀಸರನ್ನು ಸ್ಲಿಮ್ ಮಾಡೋದು ಹೇಗೆ? ಚಿಕ್ಕಮಗಳೂರಿನಲ್ಲಿ ಯಶಸ್ವಿಯಾಯ್ತು ಹೊಸ ತಂತ್ರ..!

ತೂಕ ಇಳಿಸಿಕೊಳ್ಳುವ ಯೋಜನೆಗೆ 34 ಮಂದಿ ಹೆಸರು ನೋಂದಾಯಿಸಿದ್ದರು. ಆ ಪೈಕಿ 16 ಮಂದಿ ತೂಕ ಇಳಿಸಿಕೊಂ ಡಿದ್ದಾರೆ. ಅಂಥವರಿಗೆ ಅವರು ಕೇಳಿದ ಕಡೆಗೆ ವರ್ಗಾವಣೆ ಮಾಡಲಾಗಿದೆ.

chikmagaluru police were offered optional transfer if they become slim

ಚಿಕ್ಕಮಗಳೂರು: ‘ನಿಮಗೆ ವರ್ಗಾವಣೆ ಬೇಕೆ? ಹಾಗಿದ್ದರೆ ನಿಮ್ಮ ದೇಹದ ತೂಕ ಇಳಿಸಿಕೊಂಡು ಬನ್ನಿ. ತೂಕ ಕಡಿಮೆಯಾದರೆ ನೀವು ಕೇಳುವ ಸ್ಥಳಕ್ಕೆ ವರ್ಗಾವಣೆ ನೀಡಲಾ ಗುವುದು' ಎಂದು ಜಿಲ್ಲಾರಕ್ಷಣಾಧಿಕಾರಿ ಕೆ. ಅಣ್ಣಾಮಲೈ ಜಾರಿಗೆ ತಂದಿದ್ದ ಯೋಜನೆ ಯಶಸ್ವಿಯಾಗಿದೆ.

ಪೊಲೀಸ್‌ ಸಿಬ್ಬಂದಿ ತಮ್ಮ ದೇಹದ ತೂಕವನ್ನು ಹಾಲಿ ಇರುವ ತೂಕಕ್ಕಿಂತ ಕನಿಷ್ಠ 5 ಕೆ.ಜಿ. ಕಡಿಮೆ ಮಾಡಿಕೊಂಡರೆ ಅಂತಹವರಿಗೆ ಅವರು ಕೇಳುವ ಠಾಣೆಗೆ ವರ್ಗಾವಣೆ ಮಾಡಿಕೊಡಲಾಗುವುದೆಂದು ಜ.13 ರಂದು ಎಸ್ಪಿ ಅಣ್ಣಾಮಲೈ ಘೋಷಿಸಿದ್ದರು. ತೂಕ ಇಳಿಸಿಕೊಳ್ಳುವ ಯೋಜನೆಗೆ 34 ಮಂದಿ ಹೆಸರು ನೋಂದಾಯಿಸಿದ್ದರು. ಆ ಪೈಕಿ 16 ಮಂದಿ ತೂಕ ಇಳಿಸಿಕೊಂ ಡಿದ್ದಾರೆ. ಅಂಥವರಿಗೆ ಅವರು ಕೇಳಿದ ಕಡೆಗೆ ವರ್ಗಾವಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios