Asianet Suvarna News Asianet Suvarna News

ದುಡ್ಡಿಲ್ಲದಿದ್ದರೇನಂತೆ ಡೆಬಿಟ್ ಕಾರ್ಡ್'ನಲ್ಲೇ ಪ್ರಯಾಣಿಸಿ

ಕೆಲವು ಕಡೆಗಳಲ್ಲಿ ಗ್ರಾಹಕರಿಗೆ ಸಮಸ್ಯೆಯಾಗದಂತೆ ಸ್ವೈಪಿಂಗ್ ಮೆಷಿನ್ ಇಡಲಾಗಿದೆ. ಇತ್ತ ಸಾರಿಗೆ ಇಲಾಖೆಯೂ ಕೆಎಸ್'ಆರ್'​ಟಿಸಿ ಟಿಕೆಟ್ ಬುಕಿಂಗ್ ಕೌಂಟರ್​ನಲ್ಲಿ ಸ್ವೈಪಿಂಗ್ ಮೆಷಿನ್ ಬಳಸ್ತಿದೆ.

Card swipe machine at KSRTC Stands

ನೀವೇನಾದ್ರೂ ದೂರ ಪ್ರಯಾಣ ಮಾಡ್ಬೇಕು ಆದ್ರೆ ಟಿಕೆಟ್ ಬುಕ್ ಮಾಡಿಸಲು ದುಡ್ಡಿಲ್ಲ ಅಂತಾ ಯೋಚ್ನೆ ಮಾಡ್ತೀದೀರಾ? ಹಾಗಂತಾ ಹಣಕ್ಕಾಗಿ ಬ್ಯಾಂಕ್, ಎಟಿಎಂ ಮುಂದೆ ಕ್ಯೂ ನಿಲ್ಬೇಡಿ. ನಿಮ್ ಬಳಿ ಕಾರ್ಡ್ ಇದ್ರೆ ಸಾಕು ನೀವು ಯಾವ ರಾಜ್ಯಕ್ಕೆ ಬೇಕಾದ್ರೂ ಪ್ರಯಾಣ ಬೆಳೆಸ್ಬಹುದು. ಹೌದು ಸಾರಿಗೆ ಇಲಾಖೆ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿದೆ.                              

500, 1000 ಮುಖಬೆಲೆಯ ನೋಟು ರದ್ದಾಗಿ ಒಂದು ತಿಂಗಳಾಯ್ತು. ಇಂದಿಗೂ ಜನ ಎಟಿಎಂ, ಬ್ಯಾಂಕ್ ಮುಂದೆ ಕ್ಯೂ ನಿಲ್ತಿದಾರೆ. ಕೆಲವು ಕಡೆಗಳಲ್ಲಿ ಗ್ರಾಹಕರಿಗೆ ಸಮಸ್ಯೆಯಾಗದಂತೆ ಸ್ವೈಪಿಂಗ್ ಮೆಷಿನ್ ಇಡಲಾಗಿದೆ. ಇತ್ತ ಸಾರಿಗೆ ಇಲಾಖೆಯೂ ಕೆಎಸ್'ಆರ್'​ಟಿಸಿ ಟಿಕೆಟ್ ಬುಕಿಂಗ್ ಕೌಂಟರ್​ನಲ್ಲಿ ಸ್ವೈಪಿಂಗ್ ಮೆಷಿನ್ ಬಳಸ್ತಿದೆ. ಕಳೆದ ಒಂದು ತಿಂಗಳಿಂದ ನೋಟ್ ಬ್ಯಾನ್ ಆಗಿದ್ದು ಕೆಎಸ್'ಆರ್'​ಟಿಸಿ'ಗೆ  ಸುಮಾರು 12 ಕೋಟಿ ನಷ್ಟವುಂಟಾಗಿದೆ. ಹಿಗಾಗಿ ಕೆಎಸ್'ಆರ್'​ಟಿಸಿ ಈ ನಷ್ಟವನ್ನ ತುಂಬಲು ಬೆಂಗಳೂರಿನ  ವಿವಿಧೆಡೆ ಸ್ವೈಪಿಂಗ್ ಮೆಷಿನ್ ಬಳಸುತ್ತಿದೆ.

ನಗರದ 10ಕ್ಕೂ ಹೆಚ್ಚು ಕೆಎಸ್ಸಾಆರ್​ಟಿಸಿ ಟಿಕೆಟ್ ಬುಕಿಂಗ್ ಕೌಂಟರ್​ಗಳಲ್ಲಿ ಸ್ವೈಪಿಂಗ್ ಕಳೆದ ಒಂದು ವಾರದಿಂದ ಚಾಲ್ತಿಯಲ್ಲಿದೆ. ದಿನಗಟ್ಟಲೆ ಬ್ಯಾಂಕ್, ಎಟಿಎಂ ಮುಂದೆ ಕ್ಯೂ ನಿಂತರೂ ದುಡ್ಡು ಸಿಗೋದಿಲ್ಲ. ಹೀಗಾಗಿ ಸ್ವೈಪಿಂಗ್ ಮೆಷಿನ್ ಇಟ್ಟಿರೋದು ಪ್ರಯಾಣಿಕರಿಗೆ ಖುಷಿ ತಂದಿದೆ. ಹೀಗೆ ಪ್ರತಿ ಕಡೆಯಲ್ಲೂ ಸ್ವೈಪಿಂಗ್ ಮೆಷಿನ್ ಬಳಸಿದ್ರೆ ಉತ್ತಮ ಅಂತಾರೆ ಜನ.

ದಿನನಿತ್ಯ ಬ್ಯಾಂಕ್ ಮುಂದೆ ಕ್ಯೂ ನಿಂತರೂ ಜನರಿಗೆ ಅಗತ್ಯದಷ್ಟು ದುಡ್ಡು ಸಿಗ್ತಿಲ್ಲ, ಇತ್ತ ಎಟಿಎಂಗಳು ಕೂಡ ಬಾಗಿಲು ಮುಚ್ಚಿವೆ. ಹೀಗಾಗಿ ಕೆಸ್ಸಾರ್​ಟಿಸಿಯಲ್ಲಿ ಈಗಾಗಲೆ ಸ್ವೈಪಿಂಗ್ ಮೆಷಿನ್ ಬಳಕೆಯಾಗ್ತಿದೆ. ಮುಂದಿನ ದಿನದಲ್ಲಿ ಸುಮಾರು ನೂರು ಕಡೆಗಳಲ್ಲಿ ಸ್ವೈಪಿಂಗ್ ಮೆಷಿನ್ ಬರಲಿದೆ. ಅಲ್ಲದೆ ,ಇ-ವ್ಯಾಲೆಟ್ ಎಂಬ ಕಾರ್ಡ್​ ಬಳಕೆ ಬಗ್ಗೆ ಚರ್ಚೆ ನಡೀತಿದ್ದು,

ವರದಿ: ಮಮತಾ ಮರ್ಧಾಳ, ಸುವರ್ಣನ್ಯೂಸ್ 

Follow Us:
Download App:
  • android
  • ios