Asianet Suvarna News Asianet Suvarna News

ಐಫೋನ್‌-15 ವಿತರಣೆ ತಡ: ಗ್ರಾಹಕರಿಂದ ಐಫೋನ್ ಸ್ಟೋರ್ ಸಿಬ್ಬಂದಿಗೆ ಥಳಿತ!

ಐಫೋನ್‌-15 ಮೊಬೈಲ್‌ ವಿತರಣೆ ತಡವಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರಿಬ್ಬರು ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.

iPhone 15 delivery delay delhi iphone store Staff beaten by customers akb
Author
First Published Sep 24, 2023, 9:42 AM IST

ನವದೆಹಲಿ: ಐಫೋನ್‌-15 ಮೊಬೈಲ್‌ ವಿತರಣೆ ತಡವಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರಿಬ್ಬರು ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ (delhi) ಕಮಲಾ ನಗರದಲ್ಲಿರುವ (kamalanagara) ಅಂಗಡಿಯಲ್ಲಿ ಯುವಕರಿಬ್ಬರು ಸಿಬ್ಬಂದಿಗಳ ಬಟ್ಟೆ ಹರಿದು ಅವರನ್ನು ಹೊಡೆಯುತ್ತಿರುವ ವಿಡಿಯೋ ಇದೀಗ ಭಾರೀ ವೈರಲ್‌ (Viral Video) ಆಗಿದ್ದು ಇಬ್ಬರು ಆರೋಪಿಗಳಾದ ಜಸ್ಕೀರತ್‌ ಸಿಂಗ್‌ ಮತ್ತು ಮನ್‌ದೀಪ್‌ ಸಿಂಗ್‌ರನ್ನು (Mandeep singh) ಪೊಲೀಸರು ಬಂಧಿಸಿದ್ದಾರೆ. ಭಾರತದಲ್ಲಿ ಶುಕ್ರವಾರಷ್ಟೇ ಬಿಡುಗಡೆಯಾದ ಆ್ಯಪಲ್ ಕಂಪನಿಯ ಐಫೋನ್‌-15 ಅನ್ನು ಶುಕ್ರವಾರವೇ ನೀಡುವುದಾಗಿ ಸಿಬ್ಬಂದಿಗಳು ಯುವಕರಿಗೆ ಹೇಳಿದ್ದರು. ಆದರೆ ಶುಕ್ರವಾರ ಅವರು ಅಂಗಡಿಗೆ ಬಂದಾಗ, ಅನಿವಾರ್ಯವಾಗಿ ಮೊಬೈಲ್‌ಗಳನ್ನು ಹೊಂದಿಸಲು ಸಾಧ್ಯವಾಗಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರು ಯುವಕರು ಇಬ್ಬರು ಸಿಬ್ಬಂದಿಗಳನ್ನು ತೀವ್ರವಾಗಿ ಥಳಿಸಿದ್ದಾರೆ.

 

ಪಾಕ್‌ನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ನಿಜ್ಜರ್

ಖಲಿಸ್ತಾನಿ ಉಗ್ರಗಾಮಿ (Khalistani militant) ಹರ್ದೀಪ್ ಸಿಂಗ್‌ ನಿಜ್ಜರ್ ಹತ್ಯೆ ಪ್ರಕರಣ ಭಾರತ ಹಾಗೂ ಕೆನಡಾ (Canada) ನಡುವೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿರುವಾಗಲೇ, ನಿಜ್ಜರ್‌ನ ಇಂಚಿಂಚೂ ಪಾತಕ ಇತಿಹಾಸ ತಿಳಿಸುವ ಸವಿಸ್ತಾರ ದಾಖಲೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.

ಆ ದಾಖಲೆಯ ಪ್ರಕಾರ, 1980ರಿಂದಲೂ ನಿಜ್ಜರ್‌ ಭಾರತದಲ್ಲಿ ಅಪರಾಧ ಹಿನ್ನೆಲೆ ಹೊಂದಿದ್ದ. ಅಲ್ಲದೆ ಪಾಕಿಸ್ತಾನಕ್ಕೆ ಹೋಗಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ. ಕೆನಡಾ ನೆಲದಲ್ಲಿದ್ದುಕೊಂಡೇ ಭಾರತದಲ್ಲಿ ಭಯೋತ್ಪಾದನೆ ಮಾಡಿದ್ದ ಎಂದು ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರದ (central government) ಈ ದಾಖಲೆ ತನಗೆ ಲಭಿಸಿದೆ ಎಂದು ಎನ್‌ಡಿಟೀವಿ ವರದಿ ಮಾಡಿದೆ.

ನಕಲಿ ವೀಸಾ ಮೂಲಕ ಬಂದಿದ್ದವನಿಗೆ ಕೆನಡಾ ಪೌರತ್ವ : ಜಿ-20 ವೇಳೆ ಪ್ರೆಸಿಡೆಂಟ್‌ ಸೂಟ್‌ ತಿರಸ್ಕರಿಸಿದ್ದ ಟ್ರಡೋ

ಯಾರು ಈ ನಿಜ್ಜರ್‌?:

ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಭಾರ್‌ ಸಿಂಗ್‌ ಪುರ (Bhar Singh Pura) ಗ್ರಾಮದವನು. ಗುರ್ನೆಕ್‌ ಸಿಂಗ್‌ (Gurnek Singh) ಅಲಿಯಾಸ್ ನೇಕಾ ಎಂಬಾತನ ಮೂಲಕ ಪಾತಕ ಲೋಕಕ್ಕೆ ಪ್ರವೇಶಿಸಿದ್ದ. 1980, 90ರ ದಶಕದಲ್ಲಿ ಖಲಿಸ್ತಾನ್‌ ಕಮ್ಯಾಂಡೋ ಫೋರ್ಸ್‌ (ಕೆಸಿಎಫ್‌) ಉಗ್ರರ ಜತೆ ನಂಟು ಹೊಂದಿದ್ದ. ಹಲವು ಭಯೋತ್ಪಾದನೆ ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬಂದಿತ್ತು. ಬಳಿಕ 1996ರಲ್ಲಿ ಆತ ಕೆನಡಾಕ್ಕೆ ಪರಾರಿಯಾದ ಎಂದು ದಾಖಲೆಗಳು ಹೇಳುತ್ತವೆ.

ಟ್ರಕ್‌ ಚಾಲಕನ (truck driver) ಸೋಗಿನಲ್ಲಿ ಕೆನಡಾ ಸೇರಿಕೊಂಡಿದ್ದ ಆತ, ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್‌) ಮುಖ್ಯಸ್ಥ ಜಗ್ತಾರ್ ಸಿಂಗ್‌ ತಾರಾನ (Jagtar Singh Tara) ಸಂಪರ್ಕಕ್ಕೆ ಬಂದಿದ್ದ. 2012ರ ಏಪ್ರಿಲ್‌ನಲ್ಲಿ ಬೈಸಾಖಿ ಜಾಥಾದ ನೆಪದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಅಲ್ಲಿ 15 ದಿನಗಳ ಕಾಲ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ. ಬಳಿಕ ಕೆನಡಾಕ್ಕೆ ಮರಳಿ ಡ್ರಗ್ಸ್‌ ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಣೆಯ ಮೂಲಕ ಭಯೋತ್ಪಾದನಾ ಚಟುವಟಿಕೆಗೆ ಹಣ ಹೊಂದಿಸಿದ್ದ. ಬಳಿಕ ಪಂಜಾಬ್‌ನಲ್ಲಿ ಹಲವು ದಾಳಿ ಹಾಗೂ ಹತ್ಯೆಗಳನ್ನು ಮಾಡಿಸಿ, ಭಾರತದಲ್ಲಿ ಭಯೋತ್ಪಾದನೆ ಸೃಷ್ಟಿಸಿದ್ದ ಎಂದು ದಾಖಲೆ ವಿವರಿಸುತ್ತದೆ.

ಜಿ20ಯಲ್ಲಿ ಭಾರತವನ್ನು ಟೀಕಿಸಲು ಮಿತ್ರ ದೇಶಗಳಿಗೆ ಮನವಿ ಮಾಡಿದ್ದ ಕೆನಡಾ

ಈತ ಧಾರ್ಮಿಕ ಮತಾಂಧನೇನೂ ಆಗಿರಲಿಲ್ಲ. ಆದರೆ ಉಗ್ರವಾದದ ಕಡೆ ಆತನ ಸೆಳೆತವಿತ್ತು ಎಂದೂ ದಾಖಲೆ ವಿವರಿಸುತ್ತದೆ.

ಕಣ್ಣರಿಯದಿದ್ದರೆ ಕರುಳರಿಯದೇ... 3 ವರ್ಷದ ನಂತರ ವೇಷ ಮರೆಸಿ ಬಂದ ಮಗ

ಮಲಗೋದು ಭಾರತದಲ್ಲಿ ತಿನ್ನೋದು ಫಾರಿನ್‌ನಲ್ಲಿ: ಬಾರ್ಡರ್‌ನಲ್ಲಿರುವ ವಿಶೇಷ ಮನೆ ಇದು...!

Follow Us:
Download App:
  • android
  • ios