Asianet Suvarna News Asianet Suvarna News

ಚಳಿಯ ಹೊಡೆತ ಪ್ರಾಣಕ್ಕೆ ಎರವಾಗುತ್ತದೆ

ಇಂತಹವರಿಗೇ ಸ್ಟ್ರೋಕ್ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಜೀವನ ಶೈಲಿಯಲ್ಲಿನ ಬದಲಾವಣೆ ಕೂಡಾ ಇದಕ್ಕೆ ಕಾರಣವಿರಹುದು. ಒಮ್ಮೆ ಮೆದುಳಿನಲ್ಲಿನ ಜೀವಕೋಶಗಳು ನಿಶ್ಕ್ರಿಯಗೊಂಡರೆ ಅದು ಶಾಶ್ವತವಾಗುತ್ತದೆ.

Wellness Column Cold effects

-ಶ್ಯಾಮಲಾ ಎಸ್‌. ಎನ್‌.
ಚಳಿಗಾಲ ನಮ್ಮ ಕೈಕಾಲುಗಳನ್ನು ಕಟ್ಟಿಹಾಕಿ ಬಿಡುತ್ತದೆ. ದೈಹಿಕ ಚಟುವಟಿಕೆಗಳು ಇದ್ದಕ್ಕಿದ್ದಂತೆ ಕಡಿಮೆಯಾಗಿ ಬಿಡುತ್ತವೆ. ಬೆಚ್ಚಗಿರಬೇಕೆಂದು ಬಯಸುವ ನಾವು ಸಾಮಾನ್ಯವಾಗಿ ಮಾಡುವ ಕೆಲಸಗಳನ್ನು ಕೈಬಿಟ್ಟುಬಿಡುತ್ತೇವೆ. ದೈಹಿಕ ಕ್ರಿಯಾಶೀಲತೆ ಕಡಿಮೆಯಾಗುತ್ತಿದ್ದಂತೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಚಳಿಗಾಲವೇ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ತಂದೊಡ್ಡುವ ಕಾಲ. ಚರ್ಮದ ಸಮಸ್ಯೆ, ಅಸ್ತಮಾ ಮತ್ತು ಧೂಳಿನ ಅಲರ್ಜಿ ಇರುವವರಿಗೆ ಕೆಲವು ತೊಂದರೆಗಳು ಎದುರಾಗುತ್ತವೆ. ಹಾಗೆಯೇ ಅತಿಯಾದ ಚಳಿಯಿಂದ ಸ್ಟ್ರೋಕ್ ಕೂಡ ಆಗುತ್ತದೆ.

ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಸ್ಟ್ರೋಕ್'ಗೆ ತುತ್ತಾಗಬಹುದು. ಇಂತಹವರಿಗೇ ಸ್ಟ್ರೋಕ್ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಜೀವನ ಶೈಲಿಯಲ್ಲಿನ ಬದಲಾವಣೆ ಕೂಡಾ ಇದಕ್ಕೆ ಕಾರಣವಿರಹುದು. ಒಮ್ಮೆ ಮೆದುಳಿನಲ್ಲಿನ ಜೀವಕೋಶಗಳು ನಿಶ್ಕ್ರಿಯಗೊಂಡರೆ ಅದು ಶಾಶ್ವತವಾಗುತ್ತದೆ. ಮೂರು, ನಾಲ್ಕು ಗಂಟೆಗಳ ಚಿಕಿತ್ಸೆಗೆ ಸ್ಪಂದಿಸಿದರೆ ಗುಣಮುಖರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗೆ ಒಮ್ಮೆ ಸ್ಟ್ರೋಕ್ ಗೆ ಗುರಿಯಾಗಿ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾದವರಿಗೆ ಮತ್ತೆ ಸ್ಟ್ರೋಕ್ ಆಗುವುದಿಲ್ಲ ಎಂದು ತಿಳಿಸಬೇಕಿಲ್ಲ.

ಜೀವನ ಪೂರ್ತಿ ಆ ವ್ಯಕ್ತಿ ವೈದ್ಯರ ಸಲಹೆಯಂತೆ ಜೀವನ ಶೈಲಿಗೆ ಹೊಂದಿಕೊಂಡು ವೈದ್ಯರು ಸೂಚಿಸುವ ಔಷಧಿಗಳನ್ನು ಸೇವಿಸುತ್ತಿರಬೇಕು. ಅಲ್ಲದೆ ಮದ್ಯಪಾನ, ಧೂಮಪಾನ ಸೇವನೆ ಮಾಡುವವರು ಸಂಪೂರ್ಣವಾಗಿ ಇವುಗಳಿಂದ ದೂರಾಗಬೇಕಾಗುತ್ತದೆ. ದೇಹದ ಯಾವ ಭಾಗಕ್ಕೆ ಸ್ಟ್ರೋಕ್ ಆಗಿದೆ ಎಂಬುದನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತದೆ.

ಕಾರಣಗಳು: ಅತಿಯಾದ ಶೀತ ಗಾಳಿಗೆ ದೇಹ ತೆರೆದುಕೊಂಡಿದ್ದರೆ, ರಕ್ತ ನಾಳಗಳ ಮೇಲೆ ಒತ್ತಡ ಉಂಟಾಗಿ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಾಗುತ್ತದೆ. ಇದು ಸ್ನಾಯುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಸ್ಟ್ರೋಕ್ ಸಂಭವಿಸುತ್ತದೆ. ಅಲ್ಲದೆ ಅತಿಯಾದ ಚಳಿಗಾಳಿ ಪಾಶ್ರ್ವವಾಯುವಿಗೂ ಕಾರಣವಾಗುತ್ತದೆ. ದೇಹದ ಯಾವುದಾದರೂ ಒಂದು ಭಾಗಕ್ಕೆ ಪಾಶ್ರ್ವವಾಯು ಆಗುವುದು ಅಥವಾ ಸ್ನಾಯುಗಳ ಚಲನೆ ಮೇಲೆ ಹಿಡಿತ ಇಲ್ಲದಂತಾಗುವುದು. ಅದು ಮುಖದ ಎಡಭಾಗ ಅಥವಾ ಬಲಭಾಗ, ಹಾಗೆ ತೋಳುಗಳಲ್ಲೂ ಆಗಬಹುದು. ನಡೆಯುವುದು, ಆಹಾರ ಸೇವನೆ ಮೊದಲಾದ ಫಿಲಿಕಲ್‌ ಥೆರಪಿಗಳ ಸಹಾಯದಿಂದ ಸ್ನಾಯುಗಳ ಚಲನೆಯನ್ನು ಮತ್ತೆ ಕ್ರಿಯಾಶೀಲವಾಗಿಬಹುದು.


ಸ್ಟ್ರೋಕ್'ನಿಂದಾಗಿ ಮಾತನಾಡುವಾಗ ಬಾಯಿಯಲ್ಲಿನ ಸ್ನಾಯುಗಳ ಮೇಲೆ ಸಂಪೂರ್ಣ ಹಿಡಿತ ಇಲ್ಲದಂತಾಗುತ್ತದೆ. ಇದರಿಂದಾಗಿ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದಿರುವುದು, ಆಹಾರ ಸೇವೆಸಲು ಆಗದೆ, ಓದಲು, ಬರೆಯಲು ಕಷ್ಟವಾಗುವುದು. ಇಂತಹ ಸಂದರ್ಭದಲ್ಲಿ ಸ್ಪೀಚ್‌ ಅಂಡ್‌ ಲ್ಯಾಂಗ್ವೇಜ್‌ ಪ್ಯಾಥೋಲಜಿಸ್ಟ್‌ರ ನೆರವು ಪಡೆಯುವುದು ಉತ್ತಮ.
ಸ್ಟ್ರೋಕ್'ಗೆ ತುತ್ತಾದ ಕೆಲವರಲ್ಲಿ ನೆನಪಿನ ಶಕ್ತಿ ಕಳೆದುಕೊಳ್ಳು­ವುದು, ಕೆಲವೊಮ್ಮೆ ತಮ್ಮ ಆಲೋಚನೆಗಳಿಗೆ ವಿರುದ್ಧವಾಗಿ ಯೋಚಿಸುವುದು. ತಮ್ಮ ಭಾವನೆಗಳ ಮೇಲೆ ಹಿಡಿತ ಇಲ್ಲದಂತಾಗಿ ಹತಾಶೆಗೆ ಒಳಗಾಗುತ್ತಾರೆ.
ಸ್ಟ್ರೋಕ್ ಲಕ್ಷಣಗಳು
1) ಮಾತನಾಡಲು ತೊಂದರೆ ಆಗುವುದು. ಸ್ಟೊ್ರೕಕ್‌ಗೆ ತುತ್ತಾದ ವ್ಯಕ್ತಿಗಳು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
2) ಪಾಶ್ರ್ವವಾಯು ಅಥವಾ ಮುಖ, ತೋಳು, ಕಾಲುಗಳಲ್ಲಿ ಜೋಮು ಹಿಡಿದಂತೆ ಆಗುವುದು. ಮುಖ್ಯವಾಗಿ ದೇಹದ ಯಾವುದಾದರೂ ಒಂದು ಭಾಗಕ್ಕೆ ಈ ರೀತಿಯಾಗಿ ಪ್ರಭಾವ ಬೀರುವುದು. ಇಂತಹ ಸಂದರ್ಭದಲ್ಲಿ ಎರಡು ತೋಳುಗಳನ್ನು ತಲೆಗೆ ನೇರವಾಗಿರುವಂತೆ ಸಮಾನವಾಗಿ ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕು. ಈ ವೇಳೆ ಯಾವುದಾದರೂ ಒಂದು ಭಾಗದ ತೋಳು ಮೇಲೆತ್ತಲು ಸಾಧ್ಯವಾಗದೆ ಇದ್ದಾಗ, ನಗುವಾಗ ಬಾಯಿ ಚಲನೆಯಲ್ಲಿ ಬದಲಾವಣೆ ಕಂಡು ಬಂದರೆ ಆಗ ಸ್ಟ್ರೋಕ್'ಗೆ ತುತ್ತಾಗಿರುವುದು ಖಚಿತವಾಗುತ್ತದೆ.
3) ಒಂದು ಅಥವಾ ಎರಡೂ ಕಣ್ಣುಗಳಿಂದ ನೋಡಲು ಕಷ್ಟವಾಗುವುದು, ಸ್ಟ್ರೋಕ್'ಗೆ ಗುರಿಯಾದ ವ್ಯಕ್ತಿಗೆ ದೃಷ್ಟಿಸ್ಪಷ್ಟವಾಗಿ ಕಾಣದಿರುವುದು ಅಥವಾ ಎರೆಡರಡಾಗಿ ಕಾಣುವುದು.

4) ತಲೆನೋವು: ಸಹಿಸಲಾಗದಷ್ಟು ತಲೆನೋವು ಕಾಣಿಸಿಕೊಳ್ಳುವುದು. ವಾಂತಿ ಆಗುವುದು ತಲೆ ತಿರುಗಿದಂತೆ ಆಗುವುದು.
ನಡೆಯಲು ಕಷ್ಟವಾಗುವುದು: ಎಡವಿ ಬೀಳುವುದು, ತಲೆ ತಿರುಗಿದಂತಾಗಿ, ಸಮತೋಲನ ಕಳೆದುಕೊಳ್ಳುವುದು.

ಪ್ರಾಥಮಿಕ ಸಲಹೆ

ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಆಲಸ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸ್ಟ್ರೋಕ್'ಗೆ ಕಾಲಕಾಲಕ್ಕೆ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸಿದರೆ ಕೊನೆ ಹಂತದಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನ ಇರುವುದಿಲ್ಲ. ಮೆದುಳಿಗೆ ಆಘಾತವಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಸ್ಟ್ರೋಕ್ ಉಂಟಾದಾಗ ಮೆದುಳಿನಲ್ಲಿ ರಕ್ತ ಪ್ರಸರಣಕ್ಕೆ ಅಡ್ಡಿ ಉಂಟಾಗಬಹುದು. ಇದರಿಂದ ಆಮ್ಲಜನಕ ಹಾಗೂ ಪೌಷ್ಟಿಕಾಂಶದಲ್ಲಿ ಸಮತೋಲನೆ ಉಂಟಾಗದೆ ಇರಬಹುದು. ಇದರಿಂದ ಮೆದುಳಿನಲ್ಲಿ ಜೀವಕೋಶಗಳು ನಿಶ್ಕ್ರಿಯಗೊಳ್ಳುತ್ತವೆ.
1) ಮುಖದ ಯಾವ ಭಾಗದಲ್ಲಿ ಸ್ಟ್ರೋಕ್'ಗೆ ಉಂಟಾಗಿದೆಯೇ ಅದೇ ಕಡೆಯಿಂದ ನಗುವಂತೆ ಹೇಳುವುದು.
2) ಸ್ವಾಧೀನ ಕಳೆದುಕೊಂಡ ತೋಳನ್ನು ಮತ್ತೊಂದು ತೋಳಿನ ಸಮವಾಗಿ ಮೇಲಕ್ಕೆ ಎತ್ತಲು ಪ್ರಯತ್ನಿಸುವಂತೆ ಮಾಡುವುದು.
3) ಆ ವ್ಯಕ್ತಿಯನ್ನು ಪದೇ ಪದೆ ನಗುವಂತೆ, ಮಾತು ತೊದಲದಂತೆ ಸ್ಪಷ್ಟವಾಗಿ ಮಾತನಾಡುವುದಕ್ಕೆ ಪ್ರಯತ್ನಿಸುವಂತೆ ಹೇಳುವುದು.

(ಕನ್ನಡ ಪ್ರಭ)

Follow Us:
Download App:
  • android
  • ios