Asianet Suvarna News Asianet Suvarna News

ರುಚಿ ರುಚಿಯ ಪೈನಾಪಲ್ ಜಾಮ್

ದೋಸೆ, ಚಪಾತಿ ಮಾಡಿದಾಗ ಪಲ್ಯ, ಸಾಂಬಾರು ಅಥವಾ ಚಟ್ನಿ ಮಾಡಬೇಕಾಗುತ್ತದೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದು ದೊಡ್ಡ ತಲೆ ನೋವಿನ ಕೆಲಸವೇ ಆಗಿಬಿಡುತ್ತದೆ.

Pineapple Jam

ದೋಸೆ, ಚಪಾತಿ ಮಾಡಿದಾಗ ಪಲ್ಯ, ಸಾಂಬಾರು ಅಥವಾ ಚಟ್ನಿ ಮಾಡಬೇಕಾಗುತ್ತದೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದು ದೊಡ್ಡ ತಲೆ ನೋವಿನ ಕೆಲಸವೇ ಆಗಿಬಿಡುತ್ತದೆ. ಈಗ ರುಚಿ ರುಚಿಯ ಪೈನಾಪಲ್ ಜಾಮ್ ಮಾಡಿ. ಸಮಯ ಕಡಿಮೆ ಇದ್ದಾಗ ದೋಸೆ, ಚಪಾತಿ ಜೊತೆ ಇದನ್ನು ಸೇವಿಸಿ. ಇದು ರುಚಿಯೂ ಹೌದು, ಆರೋಗ್ಯಕ್ಕೆ ಒಳ್ಳೆಯದೂ ಹೌದು.

ಪೈನಾಪಲ್ ಜಾಮ್ ಮಾಡಲು ಬೇಕಾಗುವ ಪದಾರ್ಥಗಳು

ಪೈನಾಪಲ್ ಹೋಳುಗಳು 5 ಕಪ್, ಸಕ್ಕರೆ 5 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು.
ಪೈನಾಪಲ್ ಜಾಮ್ ಮಾಡುವ ವಿಧಾನ

ಮೊದಲಿಗೆ ಪೈನಾಪಲ್ ಹೋಳುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ, ನಂತರ ಅದನ್ನು ಒಂದು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ನಿಧಾನವಾಗಿ ಬೇಯಿಸಿ, ಅಗತ್ಯ ಇದ್ದರೆ ನೀರು ಸೇರಿಸಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ ಸೇರಿಸಿ ಚನ್ನಾಗಿ ಕಲಕಿ, ಸಕ್ಕರೆ ಕರಗಿದ ಮೇಲೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 10 ನಿಮಿಷ ಹಾಗೇ ಕಲಕುತ್ತಿರಿ ಇದು ಸ್ವಲ್ಪ ಗಟ್ಟಿಯಾಗಿ ಬಾಣಲೆಯ ತಳ ಬಿಟ್ಟ ನಂತರ ಅದು ತಣ್ಣಗಾಗಲು ಬಿಡಿ. ನಂತರ ಅದನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಿ, ಬ್ರೆಡ್ ಜೊತೆ, ಚಪಾತಿ, ದೋಸೆ ಜೊತೆ ಇದನ್ನು ಸವಿಯಬಹುದು