Asianet Suvarna News Asianet Suvarna News

ಮತ್ತೆ ಮತ್ತೆ ಅಳುವುದೂ ಒಂದು ಮನೋರೋಗ

ಮನಸ್ಸಿಗೆ ಉಂಟಾದ ತೀವ್ರ ತರಹದ ಭಾವನಾತ್ಮಕ ಉದ್ವೇಗದ ಸಂದರ್ಭದಲ್ಲಿ ಮೆದುಳಿನಿಂದ ನರವಾಹಕಗಳ ಮೂಲಕ ಸಂಜ್ಞೆಗಳು ಕಣ್ಣಿಗೆ ರವಾನೆಯಾಗಿ ಭಾವನಾತ್ಮಕ ಕಣ್ಣೀರು ಬರುತ್ತದೆ ಎನ್ನುತ್ತದೆ ಅಳುವಿನ ಬಗೆಗಿರುವ ಹಲವಾರು ಸಿದ್ಧಾಂತಗಳಲ್ಲಿ ಒಂದು. 6 ತಿಂಗಳ ಒಳಗಿನ ಶಿಶುವಿನಲ್ಲಿ ಅಳುವುದು ಸಂವಹನದ ಸಂಕೇತವಾದರೂ, ಕೋಪದ ಅಳು, ನೋವಿನ ಅಳುವನ್ನು ಬೇರೆಯಾಗಿ ಗುರುತಿಸಬಹುದು. ಮಕ್ಕಳು ಬೆಳೆದಂತೆ, ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ವ್ಯಕ್ತಿತ್ವದ ಗುಣಲಕ್ಷಣಗಳ ಮೇಲೆ ಅವಲಂಬಿಸಿ, ಕೆಲವರು ಹೆಚ್ಚು ಅಳುವುದನ್ನೂ, ಕೆಲವರು ಕಡಿಮೆ ಅಥವಾ ಅಳದೇ ಇರುವುದನ್ನು ಕಾಣುತ್ತೇವೆ. ಹೆಣ್ಮಕ್ಕಳು ಭಾವನಾತ್ಮಕವಾಗುವುದು ಹೆಚ್ಚು, ಅಳುವುದು ಹೆಚ್ಚು. ಸಂತಸಗೊಂಡಾಗ ಬರುವಂಥದು ಆನಂದಭಾಷ್ಪಗಳು, ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗುತ್ತವೆ. ಅದೇ ದುಃಖಗೊಂಡಾಗ ಬರುವ ಕಣ್ಣೀರು ಗಂಗೆ- ಯಮುನೆಯಾಗಿ ಹರಿಯುತ್ತಲೇ ಇರುತ್ತದೆ.

crying again and again is mental illnes

ಮನೋವೈದ್ಯೆಯಾದ ನಂತರ ‘ಅಳು’ವಿನ ಬಗೆಗಿನ ನನ್ನ ನಿಲುವು ಬದಲಾಗಿದೆ. ಎಂಟು ವರ್ಷಗಳ ಹಿಂದೆ ಎಂಬಿಬಿಎಸ್ ಪದವಿ ಪಡೆದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮನೋವೈದ್ಯಕೀಯ ಎಂ.ಡಿ. ಕೋರ್ಸ್ ಸೇರಿದ ಮೊದಲ ಒಂದು ತಿಂಗಳಿನಲ್ಲೇ ಪ್ರೊೆಸರ್ ಒಬ್ಬರು ಆಪ್ತ ಸಮಾಲೋಚನೆ (ಸೈಕೋಥೆರಪಿ) ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಆಪ್ತ ಸಮಾಲೋಚನೆ ನಡೆಯುವಾಗ, ರೋಗಿ ಅಳತೊಡಗಿದರೆ, ವೈದ್ಯೆಯಾಗಿ ನಾವೇನು ಮಾಡಬೇಕು ಎಂಬುದೇ ಆ ಕ್ಲಾಸಿನ ವಿಷಯವಾಗಿತ್ತು. ನಾವೆಲ್ಲ ವಿದ್ಯಾರ್ಥಿಗಳೂ ಒಂದೊಂದು ಉತ್ತರ ಕೊಟ್ಟಿದ್ದೆವು. ‘ಅಳಬೇಡ’ ಎಂದು ಸಮಾಧಾನ ಹೇಳುತ್ತೇವೆ, ಅವತ್ತಿನ ಅವಯನ್ನೇ ಕ್ಯಾನ್ಸಲ್ ಮಾಡುತ್ತೇವೆ ಇತ್ಯಾದಿ ಉತ್ತರಗಳು. ನಮ್ಮ ಉತ್ತರಗಳನ್ನು ಕೇಳಿ ನಕ್ಕಿದ್ದರು ಪ್ರೊೆಸರ್. ಆಪ್ತಸಮಾಲೋಚನೆ ಮಾಡಲು ನೀವು ಇನ್ನೂ ತಯಾರಾಗಿಲ್ಲ ಎಂದಿದ್ದರು. ಆ ವ್ಯಕ್ತಿಗೆ ಸಮಾಧಾನ ಆಗುವಷ್ಟು ಹೊತ್ತು ಅಳಲು ಬಿಡಿ, ನೀವು ಕೇವಲ ಅನುಭೂತಿ ಉಳ್ಳ ವ್ಯಕ್ತಿಯಾಗಿ ಎದುರಿಗಿರಿ, ಬೇಕಾದಲ್ಲಿ ಒಂದು ಟಿಶ್ಯೂ ಪೇಪರ್ ಕೊಡಿ ಎಂದಿದ್ದರು. ಆಗ ಅಷ್ಟು ಅರ್ಥವಾಗದ ವಿಷಯವನ್ನು ನಂತರದ ಎಂ.ಡಿ. ಅಧ್ಯಯನ, 8 ವರ್ಷಗಳ ರೋಗಿಗಳೊಂದಿಗಿನ ಒಡನಾಟ ಸಾಕಷ್ಟು ಕಲಿಸಿದೆ.

ಕಣ್ಣೀರು, ಕಣ್ಣಿನ ಪಾಪೆಪೊರೆನಲ್ಲಿ ಲ್ಯಾಕ್ರಿಮಲ್ ಗ್ರಂಥಿಗಳಿಂದ ಉತ್ಪಾದಿಸಲ್ಪಡುತ್ತದೆ. ಮೂರು ತರಹದ ಕಣ್ಣೀರುಂಟು; ತಳದ ಕಣ್ಣೀರು, ಪ್ರತಿಲಿತ ಕಣ್ಣೀರು ಮತ್ತು ಭಾವನಾತ್ಮಕ ಕಣ್ಣೀರು. ನಾವೀಗ ಮಾತನಾಡ ಹೊರಟಿರುವುದು ಈ ಭಾವನಾತ್ಮಕ ಕಣ್ಣೀರು ಕುರಿತೇ.

ಮನಸ್ಸಿಗೆ ಉಂಟಾದ ತೀವ್ರ ತರಹದ ಭಾವನಾತ್ಮಕ ಉದ್ವೇಗದ ಸಂದರ್ಭದಲ್ಲಿ ಮೆದುಳಿನಿಂದ ನರವಾಹಕಗಳ ಮೂಲಕ ಸಂಜ್ಞೆಗಳು ಕಣ್ಣಿಗೆ ರವಾನೆಯಾಗಿ ಭಾವನಾತ್ಮಕ ಕಣ್ಣೀರು ಬರುತ್ತದೆ ಎನ್ನುತ್ತದೆ ಅಳುವಿನ ಬಗೆಗಿರುವ ಹಲವಾರು ಸಿದ್ಧಾಂತಗಳಲ್ಲಿ ಒಂದು. 6 ತಿಂಗಳ ಒಳಗಿನ ಶಿಶುವಿನಲ್ಲಿ ಅಳುವುದು ಸಂವಹನದ ಸಂಕೇತವಾದರೂ, ಕೋಪದ ಅಳು, ನೋವಿನ ಅಳುವನ್ನು ಬೇರೆಯಾಗಿ ಗುರುತಿಸಬಹುದು. ಮಕ್ಕಳು ಬೆಳೆದಂತೆ, ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ವ್ಯಕ್ತಿತ್ವದ ಗುಣಲಕ್ಷಣಗಳ ಮೇಲೆ ಅವಲಂಬಿಸಿ, ಕೆಲವರು ಹೆಚ್ಚು ಅಳುವುದನ್ನೂ, ಕೆಲವರು ಕಡಿಮೆ ಅಥವಾ ಅಳದೇ ಇರುವುದನ್ನು ಕಾಣುತ್ತೇವೆ. ಹೆಣ್ಮಕ್ಕಳು ಭಾವನಾತ್ಮಕವಾಗುವುದು ಹೆಚ್ಚು, ಅಳುವುದು ಹೆಚ್ಚು. ಸಂತಸಗೊಂಡಾಗ ಬರುವಂಥದು ಆನಂದಭಾಷ್ಪಗಳು, ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗುತ್ತವೆ. ಅದೇ ದುಃಖಗೊಂಡಾಗ ಬರುವ ಕಣ್ಣೀರು ಗಂಗೆ- ಯಮುನೆಯಾಗಿ ಹರಿಯುತ್ತಲೇ ಇರುತ್ತದೆ.

ಮನೋವೈದ್ಯಕೀಯ ಶಾಸದ ಪ್ರಕಾರ, ಅಳುವ ಪ್ರಕ್ರಿಯೆ ಭಾವನಾತ್ಮಕ ವಿರೇಚನದ (ಉಞಟಠಿಜಿಟ್ಞಚ್ಝ ಇಠಿಜಿ) ಒಂದು ಭಾಗ. ಅಂದರೆ ಸುಪ್ತವಾದ ಮನಸ್ಸಿನ ಭಾವನೆಗಳನ್ನು ಹೊರಹಾಕುವ ವಿಧಾನ. ಎಷ್ಟೋ ಬಾರಿ ಮನಃಪೂರ್ತಿಯಾಗಿ ಅತ್ತಾಗ, ನಮಗೇ ಸಮಾಧಾನವಾಗಿ, ದುಃಖದಿಂದ ಹೊರಬರುತ್ತೇವೆ. ಇನ್ನೂ ಕೆಲವು ಬಾರಿ ಅತ್ತು ಸಮಾಧಾನವಾದಾಗ, ಸಮಸ್ಯೆಗೆ ಪರಿಹಾರವೂ ಹೊಳೆಯುತ್ತದೆ. ಈ ಸಮಯ ಆತ್ಮಾವಲೋಕನಕ್ಕೂ ಅವಕಾಶ ಮಾಡುತ್ತದೆ. ಆದರೆ ನೆನಪಿಡಿ; ಮತ್ತೆ ಮತ್ತೆ ಅಳುವುದು, ತಾಸುಗಟ್ಟಲೆ ಅಳುವುದು, ಕಾರಣವಿಲ್ಲದೆ ಅಳುವುದು, ಮನೋರೋಗದ ಲಕ್ಷಣ. ಆಗ ಮನೋವೈದ್ಯರ ಸಲಹೆಯ ಅಗತ್ಯವಿದೆ.

ಇನ್ನೊಮ್ಮೆ ನಿಮ್ಮ ಆಪ್ತರು ನಿಮ್ಮ ಬಳಿ ದುಃಖದಿಂದ ಅತ್ತಾಗ, ‘ಅಳಬೇಡ’ ಎನ್ನದೇ ಸಮಾಧಾನವಾಗಿ ಕುಳಿತು ಆಲಿಸಿ, ಸಾಕಷ್ಟು ಸಮಯ ನೀಡಿ, ಅನುಭೂತಿ ತೋರಿ. ಅದಕ್ಕೇ ಮನೋವೈದ್ಯಕೀಯ ಶಾಸ ಓದಿಲ್ಲದಿದ್ದರೂ, ವರಕವಿ ಡಾ. ದ.ರಾ. ಬೇಂದ್ರೆಯವರು ತಮ್ಮ ಕವನ ‘ನೀ ಹೀಂಗ ನೋಡಬ್ಯಾಡ ನನ್ನ’ದಲ್ಲಿ ಹೇಳಿರುವುದು, ‘ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಯಾಕೆ ಮರೆಸುತಿ ದುಃಖ’.

- ಡಾ. ಶುಭ್ರತಾ ಕೆಎಸ್