Asianet Suvarna News Asianet Suvarna News

ಬೆಂಗಳೂರು ಮೆಟ್ರೋದಲ್ಲಿ ತಬ್ಬಿ ಮುದ್ದಾಡಿದ ಯುವ ಜೋಡಿ; ಸಹ ಪ್ರಯಾಣಿಕರ ಆಕ್ರೋಶ

ಬೆಂಗಳೂರು ಮೆಟ್ರೋದಲ್ಲಿ ಯುವ ಜೋಡಿಯೊಂದು ಎಲ್ಲ ಪ್ರಯಾಣಿಕರ ಎದುರೇ ಪರಸ್ಪರ ತಬ್ಬಿಕೊಂಡು ಮುದ್ದಾಡಿದ್ದಾರೆ. ಸಹ ಪ್ರಯಾಣಿಕರು ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

Bengaluru Metro inside young couple hugged and cuddled then fellow passengers Outraged sat
Author
First Published May 6, 2024, 1:47 PM IST

ಬೆಂಗಳೂರು (ಮೇ 06): ಬೆಂಗಳೂರಿನ ಟ್ರಾಫಿಕ್ ರಹಿತ ಸಂಚಾರಕ್ಕೆ ಅತ್ಯಂತ ಸೂಕ್ತ ಸಾರ್ವಜನಿಕ ಸಾರಿಗೆಯಾಗಿರುವ ನಮ್ಮ ಮೆಟ್ರೋದಲ್ಲಿ ಯುವ ಜೋಡಿಯೊಂದು ತಬ್ಬಿಕೊಂಡು ಮುದ್ದಾಡಿದ ಘಟನೆ ನಡೆದಿದೆ. ಈ ದೃಶ್ಯವನ್ನು ಮೆಟ್ರೋದ ಸಹ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಮೆಟ್ರೋ ಕೂಡ, ದೆಹಲಿ ಮೆಟ್ರೋದಂತೆ ಅಸಹ್ಯಕರ ಘಟನೆಗಳಿಗೆ ಸಾಕ್ಷಿ ಆಗುತ್ತಿದೆಯೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹೌದು, ಬೆಂಗಳೂರು ಮೆಟ್ರೋದಲ್ಲಿ ಯುವ ಜೋಡಿಯೊಂದು ಮೆಟ್ರೋ ರೈಲಿನಲ್ಲಿ ನಿಂತುಕೊಂಡಾಗ ಪರಸ್ಪರ ತಬ್ಬಿಕೊಂಡು ನಿಂತಿದ್ದಾರೆ. ಕೆಲವು ಸಂಪ್ರದಾಯಸ್ತ ವಯಸ್ಕರು ಇದನ್ನು ನೋಡಿ, ಚಿಕ್ಕ ಮಕ್ಕಳು ನೋಡಿದರೆ ಇದನ್ನು ಅನುಕರಿಸುವುದಿಲ್ಲವೇ ಎಂದು ಅಸಹ್ಯದಿಂದ ಬೇಸರಿಸಿಕೊಂಡಿದ್ದಾರೆ. ಎಲ್ಲರೂ ಬೇಸರಿಸಿಕೊಂಡು ಮುಖ ತಿರುಗಿಸಿಕೊಂಡಿದ್ದನ್ನು ನೋಡಿದ ಯುವ ಜೋಡಿ ಅದನ್ನೇ ಎನ್‌ಕ್ಯಾಶ್ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸಾರಿಗೆಯಾದ ಮೆಟ್ರೋದಲ್ಲಿ ತಬ್ಬಿಕೊಂಡು ನಿಂತರೂ ಯಾರೂ ಪ್ರಶ್ನೆ ಮಾಡದ ಹಿನ್ನೆಲೆಯಲ್ಲಿ ಯುವ ಜೋಡಿ ತಮ್ಮ ಆಪ್ತತೆಯನ್ನು ಮತ್ತಷ್ಟು ಮುಂದುವರೆಸಿದೆ. ಈ ವೇಳೆ ಮೈಮರೆತು ಇಬ್ಬರೂ ಪರಸ್ಪರ ಚುಂಬಿಸಿಕೊಂಡಿದ್ದಾರೆ.

ಗುಲಾಬಿ ನಮ್ಮ ಮೆಟ್ರೋ ಮಾರ್ಗ ಸುರಂಗ 95% ರೆಡಿ: ಬಿಎಂಆರ್‌ಸಿಎಲ್

ಯುವಜೋಡಿ ಎಲ್ಲರೆದುರೇ ಪರಸ್ಪರ ತಬ್ಬಿಕೊಂಡಿದ್ದನ್ನು ನೋಡಿಯೇ ಅಸಹ್ಯವೆಂದು ಮುಖ ತಿರುಗಿಸಿಕೊಂಡಿದ್ದರೂ, ಒಂದು ಹೆಜ್ಜೆ ಮುಂದೆ ಹೋಗು ಮುದ್ದಾಡುವುದನ್ನು ನೋಡಿ ಇನ್ನಷ್ಟು ಬೇಸರ ಮಾಡಿಕೊಂಡಿದ್ದಾರೆ. ಆದರೆ, ಆ ಜೋಡಿಗಳನ್ನು ಯಾರೊಬ್ಬರೂ ಪ್ರಶ್ನೆ ಮಾಡಲು ಹೋಗಿಲ್ಲ. ಆದರೆ, ಯುವ ಜೋಡಿಯ ರಂಗಿನಾಟವನ್ನು ನೋಡುತ್ತಿದ್ದ ಸಹ ಪ್ರಯಾಣಿಕರೊಬ್ಬರು ಅದನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಜೊತೆಗೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಸ್ಯಾಮ್‌ ಎನ್ನುವ ವ್ಯಕ್ತಿಯೊಬ್ಬರು ಕೆಪಿಎಸ್‌ಬಿ52 ಎಂಬ ಹೆಸರಿನ ಖಾತೆಯಿಂದ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದು, ನಮ್ಮ ಮೆಟ್ರೋದಲ್ಲಿ ಏನಾಗುತ್ತಿದೆ? ಬೆಂಗಳೂರು ಮೆಟ್ರೋ ನಿಧಾನವಾಗಿ ದೆಹಲಿ ಮೆಟ್ರೋ ಆಗಿ ಬದಲಾಗುತ್ತಿದೆ. ಅವರ ಮೇಲೆ ಸ್ವಲ್ಪ ಕ್ರಮ ಕೈಗೊಳ್ಳಿ. ಹುಡುಗಿ ಅಕ್ಷರಶಃ ಹುಡುಗನನ್ನು ಚುಂಬಿಸುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ. ಯುವ ಜೋಡಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರು ಮೆಟ್ರೋದಲ್ಲಿ ಸಂಪ್ರದಾಯಸ್ಥ ಪ್ರಯಾಣಿಕರು ಸಂಚಾರ ಮಾಡುವುದಕ್ಕೆ ಹಿಂದೇಟು ಹಾಕುವ ಸಾಧ್ಯತೆಯಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಈ 2 ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್‌ ಮಷಿನ್‌ ವ್ಯವಸ್ಥೆ, 4500 ಚೀಟಿ ಸೋಲ್ಡ್‌ ಔಟ್‌!

ಇನ್ನು ಟ್ವಿಟ್ಟರ್‌ನ ಪೋಸ್ಟ್ ಅನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (@officialBMRCL), ನಮ್ಮ ಮೆಟ್ರೋ (@NammaMetro_), ಮತ್ತು ಬೆಂಗಳೂರು ಸಿಟಿ ಪೊಲೀಸ್ (@BlrCityPolice) ಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ, ಕೂಡಲೇ ಸಂಬಂಧಪಟ್ಟ ಸಂಸ್ಥೆಯವರು ಯುವ ಜೋಡಿಯ ವರ್ತನೆಯ ಮೇಲೆ ಕೈ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು ಪ್ರಯಾಣಿಕರ ಸಂಪರ್ಕ ಸಂಖ್ಯೆಯನ್ನು ಕೇಳಿದ್ದಾರೆ.

Follow Us:
Download App:
  • android
  • ios