Asianet Suvarna News Asianet Suvarna News

VVPAT ಅರ್ಜಿ ವಿಚಾರಣೆ, ಬ್ಯಾಲೆಟ್ ಮತದಾನದಲ್ಲಿ ಏನಾಗಿದೆ ಅನ್ನೋದು ಮರೆತಿಲ್ಲ ಎಂದ ಸುಪ್ರೀಂ ಕೋರ್ಟ್!

ಬಿಜೆಪಿ ಇವಿಎಂ ಕಾರಣದಿಂದ ಗೆಲ್ಲುತ್ತಿದೆ ಅನ್ನೋ ಆರೋಪ ವಿಪಕ್ಷಗಳು ಪದೇ ಪದೇ ಮಾಡಿದೆ. ಇದೀಗ ಇವಿಎಂ ಬೇಡ ಪೇಪರ್ ಬ್ಯಾಲೆಟ್ ಮತದಾನ ಸಾಕು,VVPAT ಸ್ಲಿಪ್ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಸುಪ್ರೀಂ ಕೋರ್ಟ್ ಜಡ್ಜ್ ಹೇಳಿದ ಖಡಕ್ ಮಾತು ಇವಿಎಂ ಪ್ರಶ್ನಿಸಿದವರಿಗೆ ಖಡಕ್ ಉತ್ತರ ನೀಡಿದಂತಿದೆ.
 

We know what happened when there were ballot papers Supreme court on VVPAT Plea discussion ckm
Author
First Published Apr 16, 2024, 5:08 PM IST

ನವದೆಹಲಿ(ಏ.16) ಕಳೆದ 10 ವರ್ಷಗಳಲ್ಲಿ ಚುನಾವಣೆ ವೇಳೆ ಪದೇ ಪದೇ ಇವಿಎಂ ವಿರುದ್ಧ ಆರೋಪ, ಪೇಪರ್ ಬ್ಯಾಲೆಟ್ ಚುನಾವಣೆಯೇ ಸೂಕ್ತ ಅನ್ನೋ ಆರೋಪಗಳು, ಆಗ್ರಹಗಳನ್ನು ವಿಪಕ್ಷಗಳು ಮಾಡುತ್ತಲೇ ಬಂದಿದೆ. ಈ ಕುರಿತು ಕೋರ್ಟ್‌ನಲ್ಲೂ ವಾದ ವಿವಾದಗಳಾಗಿದೆ. ಇದೀಗ ವಿವಿಪ್ಯಾಟ್ ಸ್ಲಿಪ್ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಈ ವೇಳೆ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್‌ಗೆ ಜಸ್ಟೀಸ್ ಸಂಜೀವ್ ಖನ್ನ ಖಡಕ್ ಉತ್ತರ ನೀಡಿದ್ದಾರೆ. ನಾವೀಗ 60ರ ವಯಸ್ಸಿನಲ್ಲಿದ್ದೇವೆ. ಪೇಪರ್ ಬ್ಯಾಲೆಟ್ ಚುನಾವಣೆಯಲ್ಲಿ ಏನೆಲ್ಲಾ ಆಗಿದೆ ಅನ್ನೋದು ಮರೆತಿಲ್ಲ. ಬಹುಷ ನೀವು ಮರೆತಿರಬಹುದು ಎಂದಿದ್ದಾರೆ.

ಇವಿಎಂ ಬೇಡ, ಪೇಪರ್ ಬ್ಯಾಲೆಟ್ ಮತದಾನ ಸಾಕು ಎಂದು ವಾದಿಸುತ್ತಿರುವ ವಿಪಕ್ಷಗಳು ಇದೀಗ ಇವಿಎಂ ಮತದಾನ ವೇಳೆ ವಿವಿಪ್ಯಾಟ್ ಸ್ಲಿಪ್ ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿದೆ. ಕಾರಣ ತಾವು ಹಾಕಿದ ಮತ ಸರಿಯಾಗಿ, ಸರಿಯಾದ ಪಕ್ಷದ ನಾಯಕನಿಗೆ ಬಿದ್ದಿದೆ ಅನ್ನೋದು ಖಾತ್ರಿಪಡಿಸಿಕೊಳ್ಳಲು ವಿವಿಪ್ಯಾಟ್ ಅತೀ ಅಗತ್ಯವಾಗಿದೆ. ಇಲ್ಲವಾದಲ್ಲಿ ಇವಿಎಂ ಮೂಲಕ ಮತಗಳನ್ನು ತಿರುಚಲಾಗುತ್ತಿದೆ ಎಂದು ಪ್ರಶಾಂತ್ ಭೂಷಣ ವಾದ ಮಂಡಿಸಿದ್ದಾರೆ.

Election Special: ಮೊದಲ ಬಾರಿಗೆ ಇವಿಎಂ ಬಳಕೆ ಮಾಡಿದ್ದು ಯಾವಾಗ? ಅಸಿಂಧು ಮತಗಳ ಸಮಸ್ಯೆ ತಪ್ಪಿದ್ದು ಹೇಗೆ?

ಯೂರೋಪ್ ರಾಷ್ಟ್ರಗಳು ಇವಿಎಂ ಪರಿಚಯ ಮಾಡಿತ್ತು. ಕೆಲವೇ ವರ್ಷಗಳಲ್ಲಿ ಇದರ ಪರಿಣಾಮ ಅರಿತು ಮತ್ತೆ ಪೇಪರ್ ಬ್ಯಾಲೆಟ್ ಮತಕ್ಕೆ ಹಿಂತಿರುಗಿದೆ.  ಹೀಗಾಗಿ ಭಾರತ ಕೂಡ ಪೇಪರ್ ಬ್ಯಾಲೆಟ್ ಮತದಾನಕ್ಕೆ ಹಿಂತಿರುಗಿದರೆ ನ್ಯಾಯ ಸಮ್ಮತ ಚುನಾವಣೆ ನಡೆಯಲಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಜಸ್ಟೀಸ್ ಸಂಜೀವ್ ಖನ್ನ, ನಮಗೆ 60ರ ಆಸುಪಾಸು, ನಾವು ಪೇಪರ್ ಬ್ಯಾಲೆಟ್ ಮತದಾನವನ್ನೂ ನೋಡಿದ್ದೇವೆ. ಈ ವೇಳೆ ಏನೆಲ್ಲಾ ಆಗಿದೆ ಅನ್ನೋದು ನೀವು ಮರೆತಿರಬಹುದು. ಆದರೆ ನಾವು ಮರೆತಿಲ್ಲ ಎಂದಿದ್ದಾರೆ.  ಸದ್ಯ ಇರುವ ಸಿಸ್ಟಮ್ ನಿರ್ನಾಮ ಮಾಡಲು ಯತ್ನಿಸಬೇಡಿ, ಸುಧಾರಣೆಗೆ ಸಲಹೆ ನೀಡಿ ಎಂದು ಸುಪ್ರೀಂ ಕೋರ್ಟ್ ಖಡಕ್ ಉತ್ತರ ನೀಡಿದೆ. 

ಸದ್ಯ ವಿವಿಪ್ಯಾಟ್ ಸ್ಲಿಪ್ ಪ್ರತಿ ಕ್ಷೇತ್ರದ 5 ಇವಿಎಂನಲ್ಲಿ ಮಾತ್ರ ಲಭ್ಯವಿದೆ.ಇದು ಎಲ್ಲಾ ಇವಿಎಂ ಮಶೀನ್‌ನಲ್ಲಿ ಲಭ್ಯವಾಗಬೇಕು. ಪ್ರತಿಯೊಬ್ಬರ ಮತ ಸರಿಯಾಗಿ ತಲುಪಿದೆ ಅನ್ನೋದು ಖಾತ್ರಿಯಾಗಬೇಕು ಎಂದು ಪ್ರಶಾಂತ್ ಭೂಷಣ ವಾದ ಮಂಡಿಸಿದ್ದಾರೆ. ಕ್ರಾಸ್ ವೇರಿಫಿಕೇಶನ್ ಮಾಡಲು ಅವಕಾಶವಿರಬೇಕು ಎಂದಿದ್ದಾರೆ.

ಒಂದು ದೇಶ ಒಂದು ಚುನಾವಣೆ: ಪ್ರತಿ 15 ವರ್ಷಕ್ಕೊಮ್ಮೆ ಇವಿಎಂ ಕೊಳ್ಳಲು ಬೇಕು ₹10000 ಕೋಟಿ

ಇವಿಎಂ, ವಿವಿಪ್ಯಾಟ್ ವ್ಯವಸ್ಥೆಯು ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿಲ್ಲ. ಈ ಪದ್ಧತಿಯಲ್ಲಿ ಮತದಾರನಿಗೆ ತನ್ನ ಮತ ಚಲಾವಣೆಗೆ ಮುಂಚೆ ಚೀಟಿಯನ್ನು ಪರಿಶೀಲಿಸಲು ಅವಕಾಶ ನೀಡುವುದಿಲ್ಲ. ಕದಿಯುವುದು, ತಿರುಚುವುದು ಮತ್ತು ನಕಲಿ ಮತದಾನ ಸಾಧ್ಯತೆಗಳ ವಿರುದ್ಧ ಇದು ಯಾವುದೇ ಖಾತರಿ ನೀಡುವುದಿಲ್ಲ ಅನ್ನೋದು ವಿಪಕ್ಷಗಳ ವಾದವಾಗಿದೆ.
 

Follow Us:
Download App:
  • android
  • ios