Asianet Suvarna News Asianet Suvarna News

ನೆಹರು ಮೀಸಲು ವಿರೋಧಿ: ಹಳೆ ಸುದ್ದಿ ತುಣಕು ಉಲ್ಲೇಖಿಸಿ ಕಾಂಗ್ರೆಸ್‌ಗೆ ಬಿಜೆಪಿ ನಾಯಕರ ಟಾಂಗ್

ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅವಿನಾಶ್ ಮಾಳವೀಯ ಸುದ್ದಿ ಪತ್ರಿಕೆಯ ಹಳೆ ತುಣುಕನ್ನು ಇಟ್ಟುಕೊಂಡು ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Nehru against reservation of jobs for SC STs Amit Malviya refers to old newspaper clipping gvd
Author
First Published May 10, 2024, 1:58 PM IST

ನವದೆಹಲಿ (ಮೇ.10): ಲೋಕಸಭಾ ಚುನಾವಣೆ ಕಾವೇರಿರುವ ನಡುವೆ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಟಾಪಟಿ ಮುಂದುವರೆದಿದೆ. ಇತ್ತೀಚಿಗಷ್ಟೇ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಮೀಸಲಾತಿಯನ್ನು ಶೇ.50 ಕ್ಕೆ ಹೆಚ್ಚಿಸುವ ಬಗ್ಗೆ ಹೇಳಿದ ಹೇಳಿಕೆಗೆ ನೆಹರೂ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದಕ್ಕೆ ವಿರೋಧಿಸಿದ್ದರೆಂದು ಆಂಗ್ಲ ದಿನಪತ್ರಿಕೆಯೊಂದರ ಹಳೆಯ ಸುದ್ದಿ ಉಲ್ಲೇಖಿಸಿ ಬಿಜೆಪಿ ಟಾಂಗ್ ನೀಡಿದೆ.

ಈ ಬಗ್ಗೆ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅವಿನಾಶ್ ಮಾಳವೀಯ ಸುದ್ದಿ ಪತ್ರಿಕೆಯ ಹಳೆ ತುಣುಕನ್ನು ಇಟ್ಟುಕೊಂಡು ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.‘ನೆಹರೂ ಉದ್ಯೋಗದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ವಿರೋಧಿಸಿದ್ದರು. ಅದು ಕೀಳರಿಮೆ ಉಂಟು ಮಾಡುತ್ತದೆ’ ಎಂದು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.

ಅದಾನಿ ವಿರುದ್ಧ ರಾಹುಲ್‌ ಟೀಕೆ: ಚುನಾವಣೆ ಘೋಷಣೆಯಾದ ಬಳಿಕ ಶೆಹಜಾದಾ (ರಾಹುಲ್‌) ಅಂಬಾನಿ- ಅದಾನಿ ನಿಂದನೆ ನಿಲ್ಲಿಸಿದ್ದಾರೆ. ಅವರಿಗೆ ಟೆಂಪೋ ತುಂಬಾ ಮಾಲ್‌ ಬಂದಿರಬೇಕು ಎಂದು ಪ್ರಧಾನಿ ಮೋದಿ ಟಾಂಗ್‌ ನೀಡಿದ ಬೆನ್ನಲ್ಲೇ, ಅದಾನಿ- ಮೋದಿ ವಿರುದ್ಧ ರಾಹುಲ್‌ ಮತ್ತೆ ಟೀಕಾ ಪ್ರಹಾರ ನಡೆಸಿದ್ದಾರೆ. ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್‌ ‘ಪ್ರಧಾನಿ ಮೋದಿ 10 ವರ್ಷದಲ್ಲಿ ಹಲವು ಯೋಜನೆಗಳನ್ನು ಅದಾನಿ ಕೈಗೊಪ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ 10 ವರ್ಷದ ಅವಧಿಯಲ್ಲಿ ದೇಶದ ಕೇವಲ 20-22 ಜನರಿಗೆ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಕೋಟ್ಯಧಿಪತಿಗಳಾಗಿದ್ದಾರೆ. 

ಪ್ರಧಾನಿ ಮೋದಿ- ರಾಹುಲ್ ಗಾಂಧಿ ಮುಖಾಮುಖಿ ಚರ್ಚೆಗೆ ಸಲಹೆ

ಬಿಜೆಪಿಯ ಕೆಲ ನಾಯಕರು ಭಾರತದ ಸಂವಿಧಾನವನ್ನೇ ಬದಲಿಸಲು ಇಚ್ಛಿಸಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೀಸಲು ರದ್ದುಗೊಳಿಸಲೆಂದೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದೆ. ಬಿಜೆಪಿ ಮೀಸಲಾತಿಯನ್ನು ಸಂಪೂರ್ಣ ರದ್ದುಗೊಳಿಸಲಿದೆ ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೀಸಲು ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ವಿಸ್ತರಿಸಲಿದೆ. ದೇಶದಲ್ಲಿ ಜಾತಿ ಗಣತಿಯನ್ನು ಮಾಡಿ ಶೋಷಿತರಿಗೆ ನ್ಯಾಯ ಒದಗಿದಲಿದೆ ಎಂದು ಭರವಸೆ ನೀಡಿದರು.

Follow Us:
Download App:
  • android
  • ios