Asianet Suvarna News Asianet Suvarna News

ಚುನಾವಣಾ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಹಣ ಜಪ್ತಿ ಮಾಡಿದ ಎಲೆಕ್ಷನ್ ಕಮಿಷನ್!

ದೇಶದಲ್ಲಿ 7 ಹಂತಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ವೇಳೆ ನಡೆಯುವ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದೆ. ಹೀಗಾಗಿ ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ದೇಶದಲ್ಲಿ ಬರೋಬ್ಬರಿ 4,650 ಕೋಟಿ ರು. ಮೌಲ್ಯದ ವಸ್ತುಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ದೇಶದ 75 ವರ್ಷದ ಚುಣಾವಣಾ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ಆಯೋಗ ಸೋಮವಾರ ಹೇಳಿದೆ.

Lok sabha polls Election Commission seized 4650 crores valueable things rav
Author
First Published Apr 16, 2024, 4:59 AM IST

ನವದೆಹಲಿ (ಏ.16): ದೇಶದಲ್ಲಿ 7 ಹಂತಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ವೇಳೆ ನಡೆಯುವ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದೆ. ಹೀಗಾಗಿ ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ದೇಶದಲ್ಲಿ ಬರೋಬ್ಬರಿ 4,650 ಕೋಟಿ ರು. ಮೌಲ್ಯದ ವಸ್ತುಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ದೇಶದ 75 ವರ್ಷದ ಚುಣಾವಣಾ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ಆಯೋಗ ಸೋಮವಾರ ಹೇಳಿದೆ.

ಗಮನಿಸಬೇಕಾದ ಅಂಶವೆಂದರೆ ಈ ಒಟ್ಟು ಅಕ್ರಮದಲ್ಲಿ 2069 ಕೋಟಿ ರು. ಮೌಲ್ಯದ ಮಾದಕ ವಸ್ತುಗಳು (ಡ್ರಗ್ಸ್‌) ಕೂಡ ಸೇರಿವೆ ಎಂದು ಅದು ಹೇಳಿದೆ.

 

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2.90 ಕೋಟಿ ರೂ. ದಾಖಲೆಗಳಿಲ್ಲದ ಹಣ ಜಪ್ತಿ

2019ರ ಚುನಾವಣೆಯಲ್ಲಿ ಆಯೋಗ ಮಾ.1ರಿಂದ ಇಡೀ ಚುನಾವಣಾ ಪ್ರಕ್ರಿಯೆ ಮುಗಿವತನಕ 3,475 ಕೋಟಿ ರು. ವಶಪಡಿಸಿಕೊಂಡಿತ್ತು. ಆದರೆ ಈ ಬಾರಿ ಅದಕ್ಕಿಂತಲೂ ಜಾಸ್ತಿ ಅಕ್ರಮವು (ಸುಮಾರು 1200 ಕೋಟಿ ರು. ಮೌಲ್ಯ) ಜಪ್ತಿ ಆಗಿದೆ. ಮಾರ್ಚ್ 1 ರಿಂದ ಇಲ್ಲಿಯ ತನಕ ನಿತ್ಯ ಸರಾಸರಿ 100 ಕೋಟಿ ರು.ನಷ್ಟು ಅಕ್ರಮ ಸಂಪತ್ತನ್ನು ಸಿಬ್ಬಂದಿಗಳು ದೇಶದಲ್ಲಿ ಪಡಿಸಿಕೊಂಡಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.

ಏನೇನು ವಶ?395 ಕೋಟಿ ರು. ನಗದು489 ಕೋಟಿ ರು. ಮದ್ಯ2069 ಕೋಟಿ ರು. ಡ್ರಗ್ಸ್‌

ಸಿನಿಮೀಯ ರೀತಿ 1.4 ಕೋಟಿ ನಗದು ಜಪ್ತಿ: ಕಾಂಗ್ರೆಸ್‌ಗೆ ಹಣ ಕೊಟ್ಟವರಿಂದಲೇ ಕರೆ ಎಂದ ತೇಜಸ್ವಿ ಸೂರ್ಯ..!

Follow Us:
Download App:
  • android
  • ios