Asianet Suvarna News Asianet Suvarna News

ಕೇರಳ: ಒಂದೇ ಒಂದು ವೋಟಿಗಾಗಿ ದಟ್ಟ ಕಾನನದಲ್ಲಿ 18 ಕಿಲೋ ಮೀಟರ್ ನಡೆದ ಚುನಾವಣಾ ಸಿಬ್ಬಂದಿ

92 ವರ್ಷದ ವೃದ್ದರೊಬ್ಬರ ಒಂದೇ ಒಂದು ವೋಟಿನ ಚಲಾವಣೆಗಾಗಿ ಚುನಾವಣಾ ಸಿಬ್ಬಂದಿ 18 ಕಿಲೋ ಮೀಟರ್ ದಟ್ಟ ಕಾನನದಲ್ಲಿ ಕಾಲ್ನಡಿಗೆಯಲ್ಲಿ ಪಯಣಿಸಿದ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.

Kerala Election staff traveled 18 km for single vote in dense forest area of Idukki by foot to ensure voting right by 92 year old man akb
Author
First Published Apr 19, 2024, 4:19 PM IST

ಇಡುಕ್ಕಿ: ಈ ಬಾರಿ ಚುನಾವಣಾ ಆಯೋಗವೂ ಕೆಲ ವೃದ್ಧ, ಅಸಕ್ತ, ನಡೆಯಲು ಬಾರದ ಮತದಾರರಿಗೆ ಮನೆಯಿಂದಲೇ ವೋಟು ಹಾಕುವ ಅವಕಾಶವನ್ನು ಕಲ್ಪಿಸಿದ್ದು, ಈ ಸೌಲಭ್ಯವನ್ನು ಮನೆಯಿಂದ ಹೊರಬಂದು ವೋಟು ಹಾಕಲಾಗದ ಅನೇಕರು ಪಡೆದುಕೊಂಡಿದ್ದಾರೆ. ಈ ವೋಟು ಪ್ರಮ್ ಹೋಮ್‌ಗಾಗಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿ ವೃದ್ಧರ ಮನೆ ಬಾಗಿಲಿಗೆ ಬರುತ್ತಾರೆ. ಹಾಗೆಯೇ ಕೇರಳದಲ್ಲಿ 92 ವರ್ಷದ ವೃದ್ಧರೊಬ್ಬರ ವೋಟಿನ ಹಕ್ಕನ್ನು ಸಾಬೀತುಪಡಿಸುವುದಕ್ಕಾಗಿ ಚುನಾವಣಾ ಸಿಬ್ಬಂದಿ ಕಲ್ಲು ಮುಳ್ಳುಗಳಿಂದ ಕೂಡಿದ ನಿರ್ಜನವಾದ ದಟ್ಟ ಕಾಡಿನಲ್ಲಿ ಸುಮಾರು 18 ಕಿಲೋ ಮೀಟರ್ ಪ್ರಯಾಣಿಸಿದ ಘಟನೆ ನಡೆದಿದೆ.

ಇಡುಕ್ಕಿ ಲೋಕಸಭಾ ಕ್ಷೇತ್ರದ ಹಿರಿಯ ನಾಗರಿಕ ಮತದಾರರಾದ ಶಿವಲಿಂಗಂ ಅವರು ಹಾಸಿಗೆ ಹಿಡಿದಿದ್ದು, ಅವರು  ಇಡುಕ್ಕಿಯ ಗುಡ್ಡಗಾಡು ಪ್ರದೇಶದಲ್ಲಿರುವ ಆದಿವಾಸಿ ಗ್ರಾಮವಾಗಿರುವ ದಟ್ಟ ಕಾಡಿನ ನಡುವೆ ಇರುವ ಇಡಮಲಕ್ಕುಡಿ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ವಾಸ ಮಾಡುತ್ತಿದ್ದರು. ತಮಗೆ ವಯಸ್ಸಾಗಿ ಹಾಸಿಗೆ ಹಿಡಿದಿದ್ದರು ಅವರಿಗೆ ಮತ ಹಾಕಬೇಕೆನ್ನುವ ಆಸೆ ಇತ್ತು. ಹೀಗಾಗಿ  ಈ ಬಾರಿಯ ವೋಟ್ ಫ್ರಮ್ ಹೋಮ್ ಅವರ ಕುಟುಂಬದವರ ಗಮನಕ್ಕೆ ಬಂದಿದ್ದು, ಅದರಂತೆ ಸ್ಥಳೀಯ ಬೂತ್ ಅಧಿಕಾರಿಯ ಸಹಾಯದಿಂದ ವೋಟ್ ಫ್ರಮ್ ಹೋಮ್‌ಗೆ ಅರ್ಜಿ ಸಲ್ಲಿಸಿ ಅವಕಾಶ ಪಡೆದಿದ್ದರು. ಅದರಂತೆ ಚುನಾವಣಾ ಸಿಬ್ಬಂದಿಯ ತಂಡವನ್ನು ಇವರ ಒಂದು ವೋಟಿಗಾಗಿ ಚುನಾವಣಾ ಇಲಾಖೆ ನೇಮಿಸಿತ್ತು. 

ಕೇರಳ ಚರ್ಚ್‌ಗಳಲ್ಲಿ 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನ; ಕಾಂಗ್ರೆಸ್ ಸಿಪಿಎಂ ಕಿಡಿ

ಅದರಂತೆ ಮೂವರು ಮಹಿಳೆಯರು ಸೇರಿದಂತೆ 9 ಜನರಿದ್ದ ಚುನಾವಣಾ ಸಿಬ್ಬಂದಿಯ ತಂಡ ಬುಧವಾರ ಶಿವಲಿಂಗಮ್ ಅವರ ಮನೆಗೆ ಬಂದಿದೆ. ಇದಕ್ಕಾಗಿ ಚುನಾವಣಾ ಸಿಬ್ಬಂದಿ ಮುಂಜಾನೆ 6 ಗಂಟೆ ಸುಮಾರಿಗೆ ಮುನ್ನಾರ್‌ ಬಿಟ್ಟು ಅಲ್ಲಿಂದ ವಾಹನದಲ್ಲಿ ಪಯಣಿಸಿ ಇರ್ವಿಕುಲಂ ರಾಷ್ಟ್ರೀಯ ಉದ್ಯಾನವನದ ನಡುವೆ ಸಾಗಿ  ಇಡಮಲಕ್ಕುಡಿಯ ಪ್ರವೇಶ ದ್ವಾರವಾದ ಪೆಟ್ಟಿಮುಡಿಯಲ್ಲಿರುವ ಕೆಪ್ಪಕಾಡು ಪ್ರದೇಶವನ್ನು ತಲುಪಿದರು. 

ಅಲ್ಲಿಂದ ನಂತರ ಅವರ ಪ್ರಯಾಣ ಬಹಳ ದುಸ್ತರವಾಗಿತ್ತು. ಕಾಡು ಪ್ರಾಣಿಗಳು ಆರಾಮವಾಗಿ ಓಡಾಡುವಂತಹ ಕಡಿದಾದ ನಿರ್ಜನ ರಸ್ತೆಯ ಮೂಲಕ ಅವರು ಮತ್ತೆ 18 ಕಿಲೋ ಮೀಟರ್‌ ಪ್ರಯಾಣ ಬೆಳೆಸಿದರು. ದಟ್ಟ ಅರಣ್ಯದಲ್ಲಿ ಕಾಲ್ನಡಿಗೆ ಮೂಲಕ ಪ್ರಯಾಣಿಸಿದ ಅವರು  ಕೊನೆಯದಾಗಿ ಮಧ್ಯಾಹ್ನ 1.15ರ ಸುಮಾರಿಗೆ ಶಿವಲಿಂಗಂ ಅವರ ಮನೆ ತಲುಪಿದರು. 

ಮಗನ ಸೋಲಿನ ಭವಿಷ್ಯ ನುಡಿದ ಅಪ್ಪ, ಅನಿಲ್ ಆ್ಯಂಟೋನಿ ವಿರುದ್ದ ಗೆಲುವು ನಮ್ಮದೆಂದ ಎಕೆ!

ಅಲ್ಲಿ 10 ಮನೆಗಳಿದ್ದವು. ಆದರೆ ಯಾರೊಬ್ಬರು ಮನೆಯಲ್ಲಿ ಇರಲಿಲ್ಲ, ಹೀಗಾಗಿ ಶಿವಲಿಂಗ ಅವರ ಮನೆಯನ್ನು ಗುರುತಿಸುವುದು ಚುನಾವಣಾ ಸಿಬ್ಬಂದಿಗೆ ಕಷ್ಟವಾಗಿತ್ತು. ನಾವು ಅಲ್ಲಿಗೆ ತಲುಪಿದಾಗ ಶಿವಲಿಂಗಂ ಅವರು ಮಾತನಾಡುವುದಕ್ಕೆ ಎದ್ದು ನಿಲ್ಲುವುದಕ್ಕೂ ಕಷ್ಟ ಪಡುತ್ತಿದ್ದರು. ಮಣ್ಣಿನ ಗೋಡೆ ಇದ್ದ ಗುಡಿಸಲಿನ ಮನೆ ಅದಾಗಿತ್ತು. ಅವರು ನೂರಡಿ ಪಂಚಾಯತ್‌ನ  ಬೂತ್ ನಂಬರ್ 31ರ 246ನೇ ವೋಟರ್ ಆಗಿದ್ದರು. 

ಅಲ್ಲಿಗೆ ತಲುಪಿದ ನಂತರ ನಾವು ಅವರ ಮನೆಯಲ್ಲೇ ವೋಟಿಂಗ್ ಬೂತ್ ಸಿದ್ಧಪಡಿಸಿ ಅವರ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಟ್ಟೆವು, ಅವರು ವೋಟ್ ಹಾಕುವುದಕ್ಕೆ ತಮ್ಮ ಮೊಮ್ಮಗನ ಸಹಾಯ ಪಡೆಯಲು ಬಯಸಿದ್ದರು. ಆದರೆ ನಂತರ ಅವರು ಮತ ಚಲಾಯಿಸಿದ್ದು, ತುಂಬಿದ ಕಣ್ಣುಗಳಿಂದ ಚುನಾವಣಾ ಸಿಬ್ಬಂದಿಯನ್ನು ಬಿಳ್ಕೊಟ್ಟರು.  ಮಳೆ ಬರುವ ಸಾಧ್ಯತೆ ಇದ್ದಿದ್ದರಿಂದ ನಾವು ಆದಷ್ಟು ಬೇಗ ಅಲ್ಲಿಂದ ಹೊರಡಬೇಕಿತ್ತು. ಇಷ್ಟೊಂದು ದೂರ ಪ್ರಯಾಣದಿಂದ ಕಾಲುಗಳು ನೋಯುತ್ತಿದ್ದರೂ ಚುನಾವಣಾ ಕರ್ತವ್ಯಕ್ಕೆ ಬಂದ ಎಲ್ಲರ ಮೊಗದಲ್ಲೂ  ತಮಗೆ ನೀಡಿದ ಟಾಸ್ಕ್ ಪೂರ್ಣಗೊಳಿಸಿದ ಖುಷಿ ಇತ್ತು ಎಂದು ಚುನಾವಣಾ ಸಿಬ್ಬಂದಿಯೊಬ್ಬರು ಈ ಅಪರೂಪದ ಕ್ಷಣವನ್ನು ವರ್ಣಿಸಿದ್ದಾರೆ.

ಇದು ಪ್ರತಿಯೊಬ್ಬರು ಮತದಾನ ಚಲಾಯಿಸುವುದಕ್ಕೆ ಚುನಾವಣಾ ಆಯೋಗ ನೀಡುತ್ತಿರುವ ಪ್ರಧಾನ್ಯತೆಯಾಗಿದೆ. ವಿಶೇಷವಾಗಿ ಇಡಮಲಕುಡಿಯಂತಹ ಪ್ರದೇಶದಲ್ಲಿ ಪ್ರತಿಯೊಬ್ಬರ ಧ್ವನಿಯೂ ಕೇಳಬೇಕು ಪ್ರತಿಯೊಬ್ಬರು ಮತ ಚಲಾಯಿಸಬೇಕು  ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಶೀಬಾ ಜಾರ್ಜ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಶೇಕಡಾ 100 ಮತದಾನದ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ.

Follow Us:
Download App:
  • android
  • ios