Asianet Suvarna News Asianet Suvarna News

ಕರ್ನಾಟಕಕ್ಕೆ ಇನ್ನೂ ನಾಲ್ಕು ದಿನ ಉಷ್ಣಮಾರುತ: ಹವಾಮಾನ ಇಲಾಖೆ

ಮಿತಿ ಮೀರಿದ ತಾಪಮಾನ ಹಾಗೂ ಬಿಸಿ ಗಾಳಿಯಿಂದಾಗಿ ಜನರು ಬವಣೆ ಪಡುತ್ತಿರುವಾಗಲೇ ಕರ್ನಾಟಕದಲ್ಲಿ ಮೇ 3ರವರೆಗೂ ಉಷ್ಣಮಾರುತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಿಸಿಯ ವಾತಾವರಣದಿಂದ ಸದ್ಯಕ್ಕೆ ಮುಕ್ತಿಯಂತೂ ಇಲ್ಲ ಎಂದೂ ತಿಳಿಸಿದೆ.

Four more days of tropical Temperature for Karnataka Says Meteorological Department gvd
Author
First Published Apr 30, 2024, 8:03 AM IST

ನವದೆಹಲಿ (ಏ.30): ಮಿತಿ ಮೀರಿದ ತಾಪಮಾನ ಹಾಗೂ ಬಿಸಿ ಗಾಳಿಯಿಂದಾಗಿ ಜನರು ಬವಣೆ ಪಡುತ್ತಿರುವಾಗಲೇ ಕರ್ನಾಟಕದಲ್ಲಿ ಮೇ 3ರವರೆಗೂ ಉಷ್ಣಮಾರುತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಿಸಿಯ ವಾತಾವರಣದಿಂದ ಸದ್ಯಕ್ಕೆ ಮುಕ್ತಿಯಂತೂ ಇಲ್ಲ ಎಂದೂ ತಿಳಿಸಿದೆ.

ದೇಶದ ಹಲವಾರು ರಾಜ್ಯಗಳಲ್ಲಿ ಉಷ್ಣ ಮಾರುತ ಕಂಡುಬಂದಿದೆ. ಈಗಾಗಲೇ ಹಲವು ಕಡೆಗಳಲ್ಲಿ ತಾಪಮಾನ 45.6 ಡಿಗ್ರಿ ಸೆಲ್ಶಿಯಸ್‌ಗೆ ಮುಟ್ಟಿದೆ. ಪೂರ್ವ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಇನ್ನೂ ಐದು ದಿನಗಳ ಉಷ್ಣ ಮಾರುತ ಕಂಡುಬರಲಿದೆ. ಕರ್ನಾಟಕದ ಜತೆಗೆ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 43 ಡಿಗ್ರಿ ತಲುಪಿದ ಉಷ್ಣಾಂಶ: ಇಬ್ಬರು ವೃದ್ಧೆಯರು ಬಲಿ

ಭಾನುವಾರ ದೇಶದ 155 ಹವಾಮಾನ ಇಲಾಖೆಯ ಕೇಂದ್ರಗಳಲ್ಲಿ 40 ಡಿಗ್ರಿಗಿಂತ ಅಧಿಕ ತಾಪ ವರದಿಯಾಗಿದೆ. ಪೂರ್ವ, ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಉಷ್ಣ ಮಾರುತದ ಅಬ್ಬರ ಹೆಚ್ಚಾಗಿದೆ. ಆಂಧ್ರದ ರಾಯಲಸೀಮೆ ಪ್ರಾಂತ್ಯದ ನಂದ್ಯಾಲದಲ್ಲಿ 45.6 ಡಿಗ್ರಿ ತಾಪ ದಾಖಲಾಗಿದೆ.  ಕರ್ನಾಟಕದ ಒಳನಾಡಿನ ಬಹುತೇಕ ಕಡೆಗಳಲ್ಲಿ ಬಿಸಿ ಹಾಗೂ ಆರ್ದ್ರ ವಾತಾವರಣ ಕಂಡುಬಂದಿದೆ. ರಾಯಚೂರಿನಲ್ಲಿ 43 ಹಾಗೂ ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಶಿಯಸ್‌ ಕಂಡುಬಂದಿದೆ ಎಂದು ತಿಳಿಸಿದೆ.

ಕಾಂಬೋಡಿಯಾದಲ್ಲಿ 170 ವರ್ಷಗಳಲ್ಲೇ ಅಧಿಕ ಉಷ್ಣಾಂಶ: ಕಳೆದೊಂದು ತಿಂಗಳಿನಿಂದ ಭಾರತವನ್ನು ಆವರಿಸಿಕೊಂಡಿರುವ ಉಷ್ಣ ಮಾರುತಗಳು ಏಷ್ಯಾದ ಇತರೆ ಹಲವು ದೇಶಗಳಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಗ್ನೇಯಾ ಏಷ್ಯಾದ ದೇಶಗಳಲ್ಲಿ ಉಷ್ಣಹವೆ ಅಧಿಕವಾಗಿದ್ದು, ಈ ದೇಶಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಸಮೀಪ ತಲುಪಿದೆ. ಕಾಂಬೋಡಿಯಾದಲ್ಲಿ 170 ವರ್ಷಗಳಲ್ಲಿಯೇ ಈ ವರ್ಷ ಅತ್ಯಧಿಕ ತಾಪಮಾನ ದಾಖಲಾಗಿದ್ದು, 43 ಡಿ. ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. 

ಪ್ರಜ್ವಲ್ ಪರ ಪ್ರಚಾರ ಮಾಡಿದ್ದ ಮೋದಿ ಈಗೇನು ಹೇಳುತ್ತಾರೆ: ಪ್ರಿಯಾಂಕಾ ಗಾಂಧಿ

ಮ್ಯಾನ್ಮಾರ್‌ನ ಚೌಕ ಟೌನ್ಶಿಪ್‌ ನಲ್ಲಿ ಉಷ್ಣಾಂಶ 48.2 ಡಿ.ಸೆ.ಗೆ ಉಷ್ಣಾಂಶ ತಲುಪಿದೆ. ಇನ್ನು ಥಾಯ್ಲೆಂಡ್‌ನ ಹಲವು ನಗರಗಳಲ್ಲಿ ಉಷ್ಣಾಂಶ 44 ಡಿ.ಸೆ. ದಾಖಲಾಗಿದೆ. ಉಷ್ಣಹವೆ ಪರಿಣಾಮದಿಂದಾಗಿ ಜನ ಪರದಾಡುತ್ತಿದ್ದಾರೆ. ಪಿಲಿಪ್ಪೀನ್ಸ್‌ನಲ್ಲಿ 50ಕ್ಕೂ ಹೆಚ್ಚು ಜನರು ಹವಾಮಾನ ಸಮಸ್ಯೆಗೆ ತುತ್ತಾಗಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ . ಇನ್ನು ವರದಿ ಪ್ರಕಾರ ಬಾಂಗ್ಲಾದೇಶದಲ್ಲಿ ಹೀಟ್ ಸ್ಟ್ರೋಕ್‌ ನಿಂದ ತಿಂಗಳ ಆರಂಭದಲ್ಲಿ 5 ದಿನಗಳ ಅಂತರದಲ್ಲಿ 20 ಜನ ಬಲಿಯಾಗಿದ್ದಾರೆ.

Follow Us:
Download App:
  • android
  • ios