Asianet Suvarna News Asianet Suvarna News

ಪ್ರಧಾನಿ ಮೋದಿ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಶಾಕ್, ಏ.29ಕ್ಕೆ ಡೆಡ್‌ಲೈನ್!

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ದ್ವೇಷ ಭಾಷಣ, ವಿಭಜನೆ ಹೇಳಿಕೆಗೆ ಆಯೋಗ ನೋಟಿಸ್ ನೀಡಿದ್ದು ಏಪ್ರಿಲ್ 29ರೊಳಗೆ ಉತ್ತರಿಸುವಂತೆ ಡೆಡ್‌ಲೈನ್ ನೀಡಿದೆ.
 

Election Commission issue notice to PM Modi and Rahul Gandhi on ask response by april 29th ckm
Author
First Published Apr 25, 2024, 1:57 PM IST

ನವದೆಹಲಿ(ಏ.25)  ಲೋಕಸಭಾ ಚುನಾವಣಾ ಸಮರದಲ್ಲಿ ನಾಯಕರ ಭಾಷಣ ಇದೀಗ ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ. ಈ ಕುರಿತು ದೂರುಗಳು, ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಇದೀಗ ಭಾಷಣದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ನೀತಿ ಸಂಹಿತಿ ಉಲ್ಲಂಘಿಸಿದ ಆರೋಪಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ಕೆಲ ನಾಯಕರು ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಏಪ್ರಿಲ್ 29, ಬೆಳಗ್ಗೆ 11 ಗಂಟೆಗೆ ಚುನಾವಣಾ ಆಯೋಗಕ್ಕೆ ಉತ್ತರಿಸುವಂತೆ ನೋಟಿಸ್‌ನಲ್ಲಿ ಹೇಳಿದೆ.

ಮಾತಿನ ಭರದಲ್ಲಿ ನಾಯಕರು ನೀಡುವ ಹೇಳಿಕೆ ವಿವಾದಕ್ಕೀಡಾಗುತ್ತಿದೆ. ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ 77 ಉಲ್ಲಂಘನೆ ಮಾಡಿದ್ದಾರೆ ಅನ್ನೋ ಆರೋಪ ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೇಳಿಬಂದಿದೆ. ಸೆಕ್ಷನ್ 77 ಅಡಿಯಲ್ಲಿ ಧರ್ಮ, ಭಾಷೆ, ಸಮುದಾಯ, ಜಾತಿ, ವಿಭಜನೆ, ದ್ವೇಷ ಭಾಷಣದ ಮೂಲಕ ವಿವಾದ, ಆತಂಕ ಹಾಗೂ ಸೌಹಾರ್ಧತೆ ಕೆಡುವುದು ನಿಮಯಕ್ಕೆ ವಿರುದ್ದವಾಗಿದೆ. ಈ  ನಿಯಮ ಉಲ್ಲಂಘಿಸಿರುವ ಆರೋಪಕ್ಕೆ ಚುನಾವಣಾ ಆಯೋಗ ಇದೀಗ  ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿದೆ.

ಕಾಂಗ್ರೆಸ್‌ಗೆ ಶಾಕ್ ನೀಡಿದ ಆಯೋಗ, 2 ದಿನ ಚುನಾವಣಾ ಪ್ರಚಾರದಿಂದ ಸುರ್ಜೆವಾಲ ಬ್ಯಾನ್!

ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್ವಾರದಲ್ಲಿನ ಸಮಾವೇಶದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದರು. ಈ ವೇಳೆ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನ್‌ಮೋಹನ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿದ್ದರು. ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸ್ಲಿಮರಿಗೆ ಎಂದು ಮನ್‌ಮೋಹನ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ ಎಂದು ಮೋದಿ ಹೇಳಿದ್ದರು. ಈ ಭಾರಿ ವಿವಾದಕ್ಕೆ ಕಾರಣಾಗಿತ್ತು.

ಇತ್ತ ರಾಹುಲ್ ಗಾಂಧಿ ಕೇರಳದ ಕೊಟ್ಟಾಯಂನಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಬಿದೆಪಿ ಒಂದು ರಾಷ್ಟ್ರ. ಒಂದು ಚುನಾವಣೆ, ಒಂದು ಭಾಷೆ ಮಾಡಲು ಹೊರಟಿದೆ. ಕೇರಳದವರು ಮಲೆಯಾಳನಂನಲ್ಲಿ ಮಾತನಾಡುತ್ತಾರೆ, ತಮಿಳನಾಡಿನಲ್ಲಿ ತಮಿಳು. ಆದರೆ ಬಿಜೆಪಿ ಒಂದು ಭಾಷೆ ಜಾರಿಗೆ ತಂದರೆ  ಆಯಾ ರಾಜ್ಯದ ಜನರು ಸಂವಹನ ಹೇಗೆ? ಬಿಜೆಪಿಗೆ ಸ್ಥಳೀಯ ಭಾಷೆ, ಸಂಪ್ರದಾಯದ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ ಈ ಭಾಷಣದ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿತ್ತು.

ಏ.29ಕ್ಕೆ ಪ್ರಧಾನಿ ಮೋದಿ ಹೊಸಪೇಟೆಗೆ ಆಗಮನ; ಎಸ್‌ಪಿಜಿ ತಂಡದಿಂದ ಭದ್ರತೆ ಪರಿಶೀಲನೆ
 

Follow Us:
Download App:
  • android
  • ios