Asianet Suvarna News Asianet Suvarna News

ಇವಿಎಂ ಬಗ್ಗೆ ಅನುಮಾನ ಬೇಡ: ಸುಪ್ರೀಂಕೋರ್ಟ್

ಇವಿಎಂ ಬದಲು ಮರಳಿ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಈ ಸಲಹೆ ನೀಡಿದ ನ್ಯಾ.ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ, 'ಚುನಾವಣಾ ಪ್ರಕ್ರಿಯೆ ಪವಿತ್ರವಾದದ್ದು. ಅದರ ಪಾವಿತ್ರ್ಯತೆ ಕಾಪಾಡಿ. ಯಾರಿಗೂ ಕೂಡ ಅವರ ನಿರೀಕ್ಷೆಯಂತೆ ಕೆಲಸ ನಡೆಯುತ್ತಿಲ್ಲ ಎನ್ನುವ ಆತಂಕವನ್ನು ಮೂಡಿಸಬೇಡಿ ಎಂದು ಕಿವಿ ಮಾತು ಹೇಳಿದ ಸುಪ್ರೀಂಕೋರ್ಟ್

Do not doubt about EVM Says Supreme Court grg
Author
First Published Apr 19, 2024, 10:44 AM IST

ನವದೆಹಲಿ(ಏ.19):  ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕುರಿತು ಪದೇ ಪದೇ ಅನುಮಾನ ವ್ಯಕ್ತವಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಎಲ್ಲದರ ಬಗ್ಗೆಯೂ ಕೋ ಅನುಮಾನ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಅತಿಯಾದ ಅನುಮಾನ ಕೂಡಾ ದೊಡ್ಡ ಜೊತೆಗೆ ಪದೇ ಪದೇ ಇಂಥ ನಿಲವು ವ್ಯಕ್ತಪಡಿಸಿದರೆ ಜನರಲ್ಲೂ ಗೊಂದಲ ಸೃಷ್ಟಿಯಾಗುತ್ತದೆ. ಚುನಾವಣಾ ಆಯೋಗ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಮೆಚ್ಚುವ ಕೆಲಸ ಮಾಡಿ ಎಂದು ಸಲಹೆ ನೀಡಿದೆ.

ಇವಿಎಂ ಬದಲು ಮರಳಿ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಈ ಸಲಹೆ ನೀಡಿದ ನ್ಯಾ.ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ, 'ಚುನಾವಣಾ ಪ್ರಕ್ರಿಯೆ ಪವಿತ್ರವಾದದ್ದು. ಅದರ ಪಾವಿತ್ರ್ಯತೆ ಕಾಪಾಡಿ. ಯಾರಿಗೂ ಕೂಡ ಅವರ ನಿರೀಕ್ಷೆಯಂತೆ ಕೆಲಸ ನಡೆಯುತ್ತಿಲ್ಲ ಎನ್ನುವ ಆತಂಕವನ್ನು ಮೂಡಿಸಬೇಡಿ ಎಂದು ಕಿವಿ ಮಾತು ಹೇಳಿತು. 

ಲೋಕಸಭಾ ಚುನಾವಣೆ 2024: ಅಣುಕು ಪರೀಕ್ಷೆ ವೇಳೆ ಬಿಜೆಪಿಗೆ 1 ಮತ ಹೆಚ್ಚು ನೀಡಿದ ಇವಿಎಂ?

ಪದೇ ಪದೇ ಛೀಮಾರಿ ಹಾಕಿದರೂ ಕೂಡ ಈ ರೀತಿಯ ಅರ್ಜಿ ಸಲ್ಲಿಸಿ ಮತದಾರರ ಪ್ರಜಾಪ್ರಭುತ್ವ ಆಯ್ಕೆಯನ್ನುತಮಾಷೆಯನ್ನಾಗಿನೋಡಲಾಗುತ್ತಿದೆ. ಚುನಾವಣಾ ಆಯೋಗ ಒಳ್ಳೆಯ ಕೆಲಸ ಮಾಡಿದರೆ ಪ್ರಶಂಶಿಸಬೇಕು. ಸುಮ್ಮನೆ ಅನುಮಾನ ಪಟ್ಟರೆ ಜನರಿಗೂಗೊಂದಲ ಸೃಷ್ಟಿಯಾಗುತ್ತದೆ. ಮತದಾನದ ಮೇಲೆಯೂ ಪರಿಣಾಮ ಬೀಳಲಿದೆ' ಎಂದು ನ್ಯಾಯಪೀಠ ಹೇಳಿತು.

Follow Us:
Download App:
  • android
  • ios