Asianet Suvarna News Asianet Suvarna News

ಎಲ್ಲವನ್ನೂ ಇಂಟರ್ನೆಟ್‌ನಲ್ಲಿ ಸರ್ಚ್‌‌ ಮಾಡ್ತೀರಾ? ನಿಮಗೂ ಈ ರೋಗ ಕಾಡ್ಬಹುದು..

ಖಾಯಿಲೆ ಬಂದಾಗ ಆಸ್ಪತ್ರೆಗೆ ಓಡುವ ಕಾಲ ಈಗಿಲ್ಲ. ಮೊದಲು ಮೊಬೈಲ್‌ ಹಿಡಿದು ಇಂಟರ್ನೆಟ್‌ ನಲ್ಲಿ ಸರ್ಚ್‌ ಮಾಡುವ ಜನರು, ವೈದ್ಯರಿಗಿಂತ ಹೆಚ್ಚು ತಿಳಿದಂತೆ ಆಡ್ತಾರೆ. ಯಾವ ರೋಗಕ್ಕೆ ಯಾವ ಮದ್ದು ಎಂಬುದು ಇಂಟರ್ನೆಟ್‌ ಮೂಲಕವೇ ತಿಳಿಯುತ್ತಾರೆ. ನಿಮಗೂ ಈ ಅಭ್ಯಾಸ ಇದ್ರೆ ಈ ಸುದ್ದಿ ಓದಿ.
 

Habit Of Searching Everything On Internet Can Be A Sign Of Idiot Syndrome Know About It roo
Author
First Published May 6, 2024, 11:51 AM IST

ಈಗ ನಮ್ಮ ಅಂಗೈನಲ್ಲಿ ವಿಶ್ವ ಇದೆ. ಅರೆ ಕ್ಷಣದಲ್ಲಿ ಯಾವ ಮೂಲೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಪತ್ತೆ ಮಾಡಬಹುದು. ಕಳೆದು ಹೋದ ಸ್ನೇಹಿತರಿಂದ ಹಿಡಿದು ಯಾವ ಖಾಯಿಲೆಗೆ ಯಾವ ಮಾತ್ರೆ ಎನ್ನುವವರೆಗೆ ಎಲ್ಲ ಮಾಹಿತಿ ನಮಗೆ ಇಂಟರ್ನೆಟ್‌ ನಲ್ಲಿ ಲಭ್ಯವಾಗುತ್ತದೆ. ಇದು ಅನೇಕರಿಗೆ ಲಾಭ ನೀಡಿದ್ರೆ ಮತ್ತೆ ಕೆಲವರಿಗೆ ಇದ್ರಿಂದ ಅವರಿಗೆ ಅರಿವಿಲ್ಲದೆ ನಷ್ಟವಾಗುತ್ತಿದೆ. 

ಮೊಬೈಲ್‌ (Mobile) ನಲ್ಲಿಯೇ ಎಲ್ಲ ಮಾಹಿತಿ ಸಿಗುವ ಕಾರಣ ಬಹುತೇಕ ಜನರು ಖಾಯಿಲೆ ಕಾಣಿಸಿಕೊಳ್ತಿದ್ದಂತೆ ವೈದ್ಯರ ಬಳಿ ಹೋಗುವ ಬದಲು ಇಂಟರ್ನೆಟ್‌ (Internet) ಆನ್‌ ಮಾಡ್ತಾರೆ. ಇಂಟರ್ನೆಟ್‌ ನಲ್ಲಿ ತಮಗೆ ಕಾಡ್ತಿರುವ ಲಕ್ಷಣಗಳನ್ನು ಟೈಪ್‌ ಮಾಡಿ, ಯಾವ ಖಾಯಿಲೆ (Disease) ಲಕ್ಷಣ ಇದು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡ್ತಾರೆ. ಬರೀ ಖಾಯಿಲೆ ಗುರುತಿಸೋದು ಮಾತ್ರವಲ್ಲದೆ ಅದಕ್ಕೆ ಮನೆ ಮದ್ದು ಅಥವಾ ಔಷಧಿಯನ್ನು ತಾವೇ ತೆಗೆದುಕೊಳ್ಳುತ್ತಾರೆ. ಯಾವುದೇ ವ್ಯಕ್ತಿಗೆ ಜ್ವರ ಬರಲಿ ಇಲ್ಲ ಕೆಮ್ಮ ಬರಲು ಆತ ಮೊದಲು ಇಂಟರ್ನೆಟ್‌ ನಲ್ಲಿ ಹೇಳಿರುವ ಎಲ್ಲ ಮನೆ ಮದ್ದು ಅಥವಾ ಔಷಧಿಗಳ ಪ್ರಯೋಗ ಮಾಡ್ತಾನೆ. ಒಂದ್ವೇಳೆ ಈ ಯಾವುದೇ ಔಷಧಿ ಪರಿಣಾಮ ಬೀರಿಲ್ಲ ಎಂದಾಗ ವೈದ್ಯರ ಬಳಿ ಹೋಗ್ತಾನೆ. ನೀವೂ ಸಣ್ಣಪುಟ್ಟದರಿಂದ ಹಿಡಿದು ದೊಡ್ಡ ರೋಗದವರೆಗೆ ಯಾವುದೇ ರೋಗ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗದೆ ಇಂಟರ್ನೆಟ್‌ ಮೊರೆ ಹೋಗ್ತಿದ್ದರೆ ಈಗ್ಲೇ ಎಚ್ಚೆತ್ತುಕೊಳ್ಳಿ. ನೀವು ಈಡಿಯಟ್ ಸಿಂಡ್ರೋಮ್ ಗೆ ಒಳಗಾಗಿರುವ ಸಾಧ್ಯತೆ ಇದೆ. ನಾವಿಂದು ಈಡಿಯಟ್ ಸಿಂಡ್ರೋಮ್ ಎಂದರೇನು, ಅದರ ಅಡ್ಡಪರಿಣಾಮ ಹಾಗೂ ಪರಿಹಾರದ ಬಗ್ಗೆ ಮಾಹಿತಿ ನೀಡ್ತೇವೆ.

ಕೋವಿಡ್ ವ್ಯಾಕ್ಸಿನ್ ಅಡ್ಡ ಪರಿಣಾಮ, ಶ್ರೇಯಸ್ ತಲ್ಪಾಡೆ ಕಾರ್ಡಿಯಾಕ್ ಅರೆಸ್ಟ್‌ ಹಿಂದಿದ್ಯಾ ಲಸಿಕೆ ಎಫೆಕ್ಟ್?

ಈಡಿಯಟ್ ಸಿಂಡ್ರೋಮ್ ಎಂದರೇನು? : ಇಂಟರ್ನೆಟ್ ಡಿರೈವ್ಡ್ ಇನ್ಫಾರ್ಮೇಶನ್ ಅಬ್ಸ್ಟ್ರಕ್ಟಿಂಗ್ ಟ್ರೀಟ್ಮೆಂಟ್ ಅನ್ನು ಈಡಿಯಟ್ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ಮಾನಸಿಕ ಸ್ಥಿತಿಗೆ ಸಂಬಂಧಿಸಿದ್ದು. ಇದ್ರಲ್ಲಿ ವ್ಯಕ್ತಿ ವೈದ್ಯರಿಗಿಂತ ಇಂಟರ್ನೆಟ್‌ ಮೇಲೆ ಹೆಚ್ಚು ನಂಬಿಕೆ ಹೊಂದಿರುತ್ತಾನೆ. ಇಂಟರ್ನೆಟ್‌ ಸಹಾಯದಿಂದ ತನ್ನ ರೋಗಕ್ಕೆ ಚಿಕಿತ್ಸೆ ಪಡೆಯುವ ಪ್ರಯತ್ನ ನಡೆಸುತ್ತಾನೆ. 

ಈಡಿಯಟ್ ಸಿಂಡ್ರೋಮ್‌ ಲಕ್ಷಣ (Symptoms of Idiot Syndrome) : ಇದ್ರ ಮೊದಲ ಲಕ್ಷಣ ಅಂದ್ರೆ ವ್ಯಕ್ತಿ ವೈದ್ಯರ ಮಾತು ಮತ್ತು ಚಿಕಿತ್ಸೆ ಮೇಲೆ ನಂಬಿಕೆ ಕಳೆದುಕೊಳ್ತಾನೆ. ಪ್ರತಿಯೊಂದಕ್ಕೂ ಇಂಟರ್ನೆಟ್‌ ಸಹಾಯ ಪಡೆಯುತ್ತಾನೆ. ತನಗೆ ಕಾಡ್ತಿರುವ ರೋಗ ಲಕ್ಷಣ ಕಡಿಮೆ ಆಗದೆ ಹೋದಾಗ ಅದನ್ನು ಗಂಭೀರ ಖಾಯಿಲೆ ಎಂದು ನಂಬುವ ವ್ಯಕ್ತಿ ಅದರಿಂದ ಖಿನ್ನತೆಗೆ ಒಳಗಾಗ್ತಾನೆ. ಆತನಿಗೆ ಸದಾ ಚಿಂತೆ ಕಾಡಲು ಶುರುವಾಗುತ್ತದೆ.

ಈಡಿಯಟ್ ಸಿಂಡ್ರೋಮ್‌ಗೆ ಕಾರಣ : ಈಡಿಯಟ್ ಸಿಂಡ್ರೋಮ್‌ ಗೆ ಅನೇಕ ಕಾರಣಗಳಿವೆ. ಅದು ಅನೇಕ ಬಾರಿ ಮೆದುಳಿನಲ್ಲಿನ ರಾಸಾಯನಿಕ ಬದಲಾವಣೆಗಳು ಮತ್ತು ಆನುವಂಶಿಕ ಕಾರಣಗಳಿಂದ (Genetic Reasons) ನಿಮ್ಮನ್ನು ಕಾಡುತ್ತದೆ. ಮಾನಸಿಕ ಸ್ಥಿತಿ (Mental Status) ಕೂಡ ಇದಕ್ಕೆ ಕಾರಣ. ಕೆಲವರು ನಕಾರಾತ್ಮಕ ಭಾವನೆ ಬೆಳೆಸಿಕೊಳ್ತಾರೆ. ವಾಸ್ತವ ಸಮಸ್ಯೆಯಿಂದ ಓಡಿ ಹೋಗುವ ಪ್ರಯತ್ನ ಮಾಡ್ತಾರೆ. ಇದಲ್ಲದೆ ರೋಗಿಗೆ ವೈದ್ಯರಿಂದ ರೋಗದ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಹೋದಲ್ಲಿ ಅಥವಾ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಹೋದಲ್ಲಿ ಜನರು ವೈದ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಳ್ತಾರೆ. ಇಂಟರ್ನೆಟ್‌ ನಲ್ಲಿ ಮಾಹಿತಿಯನ್ನು ಪಡೆಯಲು ಬಯಸ್ತಾರೆ. ಇಂಟರ್ನೆಟ್‌ ನಲ್ಲಿ ಪಡೆದ ಮಾಹಿತಿಯಿಂದಲೇ ಸಣ್ಣ ಖಾಯಿಲೆ ಗುಣಮುಖವಾದಾಗ ಅವರಿಗೆ ಅದ್ರ ಮೇಲೆ ನಂಬಿಕೆ ದುಪ್ಪಟ್ಟಾಗುತ್ತದೆ. ಹಣದ ಕೊರತೆಯೂ ಅನೇಕ ಬಾರಿ ವೈದ್ಯರ ಬಳಿ ಹೋಗುವ ಬದಲು ಇಂಟರ್ನೆಟ್‌ ಮೊರೆ ಹೋಗಲು ಪ್ರೇರಣೆಯಾಗುತ್ತದೆ. 

ಹೃದಯದ ಆರೋಗ್ಯಕ್ಕಾಗಿ ಈ ಎಣ್ಣೆ ಅಡುಗೆಯಲ್ಲಿ ಬಳಸುವುದನ್ನ ತಪ್ಪಿಸಿ

ಈಡಿಯಟ್ ಸಿಂಡ್ರೋಮ್‌ ನಿಂದ ಹೊರಗೆ ಬರೋದು ಹೇಗೆ? : ಈಡಿಯಟ್ ಸಿಂಡ್ರೋಮ್‌ ನಿಂದ ನೀವು ಹೊರಬರುವ ಅವಶ್ಯಕತೆ ಇದೆ. ಇದನ್ನು ನೀವು ಗಂಭೀರವಾಗಿ ಪರಿಗಣಿಸಬೇಕು. ಮೊದಲನೇಯದಾಗಿ ಮೊಬೈಲ್‌ ಬಳಕೆಯನ್ನು ನೀವು ಕಡಿಮೆ ಮಾಡ್ಬೇಕು. ಮೇಲಿನ ಲಕ್ಷಣಗಳು ನಿಮಗೂ ಕಂಡು ಬಂದಲ್ಲಿ ನೀವು ವೈದ್ಯರನ್ನು ಭೇಟಿಯಾಗಿ ಅದಕ್ಕೆ ಚಿಕಿತ್ಸೆ ಪಡೆಯಬೇಕು. ನೀವು ಯಾವುದೇ ಖಾಯಿಲೆಗೆ ತುತ್ತಾಗಿದ್ದರೂ ಮೊದಲು ವೈದ್ಯರನ್ನು ಭೇಟಿಯಾಗಿ. ವೈದ್ಯಕೀಯ ವೆಬ್ಸೈಟ್‌ ನಲ್ಲಿಯೇ ಮಾಹಿತಿಯನ್ನು ಪಡೆಯಿರಿ. ಸರಿಯಾದ ಮಾಹಿತಿ ಇಲ್ಲದೆ ಇಂಟರ್ನೆಟ್‌ ನಲ್ಲಿ ಬಂದ ಎಲ್ಲ ವಿಷ್ಯಗಳನ್ನು ನಂಬಲು ಹೋಗ್ಬೇಡಿ. 

Follow Us:
Download App:
  • android
  • ios