Asianet Suvarna News Asianet Suvarna News

'ಅತಿಯಾದ ಪೆಸ್ಟಿಸೈಡ್‌..' ಎವರೆಸ್ಟ್‌ ಫಿಶ್‌ ಕರಿ ಮಸಾಲಾ ವಿರುದ್ಧ ಸಿಂಗಾಪುರ ಕ್ರಮ!

ಮಾನವ ಬಳಕೆಗೆ ಯೋಗ್ಯವಲ್ಲದ ಮಟ್ಟದಲ್ಲಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಅಂಶಗಳು ಈ ಮಸಾಲಾ ಪದಾರ್ಥದಲ್ಲಿ ಕಂಡುಬಂದಿದೆ ಎಂದು ಸಿಂಗಾಪುರದ ಫುಡ್‌ ಏಜೆನ್ಸಿ ಕಂಡುಹಿಡಿದಿದೆ.

Everest Fish Curry Masala Has excess pesticide content Singapore recalls san
Author
First Published Apr 19, 2024, 12:52 PM IST


ನವದೆದೆಹಲಿ (ಏ.19): ಭಾರತದಿಂದ ಆಮದು ಮಾಡಿಕೊಳ್ಳಲಾದ ಮಸಾಲೆ ತಯಾರಕ ಕಂಪನಿ ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಫುಡ್‌ ಏಜೆನ್ಸಿ ಸೂಚನೆ ನೀಡಿದೆ. ಏಪ್ರಿಲ್‌ 18 ರಂದು ಸಿಂಗಾಪುರ ಫುಡ್‌ ಏಜೆನ್ಸಿ ಈ ಪ್ರಕಟಣೆ ನೀಡಿದೆ. ಎವರೆಸ್ಟ್‌ ಫಿಶ್‌ ಕರಿ ಮಸಾಲಾದಲ್ಲಿ ಅತಿಯಾದ ಪೆಸ್ಟಿಸೈಡ್‌ ಅಂದರೆ, ಕೀಟನಾಶಕ ಪದಾರ್ಥವಿದ್ದು ಇದು ಮಾನವ ಬಳಕೆಗೆ ಅನುಮತಿಸುವ ಮಿತಿಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ. ಹಾಂಗ್ ಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರವು ಎವರೆಸ್ಟ್‌ ಫಿಶ್‌ ಕರಿ ಮಸಾಲಾವನ್ನು ಹಿಂಪಡೆಯುವ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹೇಳಿಕೆ ತಿಳಿಸಿದೆ. ಮಾನವ ಬಳಕೆಗೆ ಯೋಗ್ಯವಲ್ಲದ ಮಟ್ಟದಲ್ಲಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಸಂಸ್ಥೆ ಪತ್ತೆ ಮಾಡಿದೆ ಎಂದು ತಿಳಿಸಲಾಗಿದೆ. ಎವರೆಸ್ಟ್‌ ಫಿಶ್‌ ಮಲಾಸಾ ಭಾರತದಲ್ಲಿ ಪ್ರಖ್ಯಾತ ಪ್ರಾಡಕ್ಟ್‌ ಆಗಿದೆ. ಇಂದಿಗೂ ಭಾರತದಲ್ಲಿ ಬಹುತೇಕ ಅಡುಗೆ ಮನೆಯಲ್ಲಿ ಇದನ್ನು ಬಳಸುತ್ತಾರೆ.

ಸಿಂಗಾಪುರ್ ಫುಡ್ ಏಜೆನ್ಸಿ (ಎಸ್‌ಎಫ್‌ಎ) ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಉತ್ಪನ್ನಗಳನ್ನು ಹಿಂಪಡೆಯಲು ಆಮದುದಾರರಾದ ಎಸ್ಪಿ ಮುತ್ತಯ್ಯ ಮತ್ತು ಸನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಂಸ್ಥೆ ನಿರ್ದೇಶಿಸಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಮತ್ತು ಸೂಕ್ಷ್ಮಜೀವಿಯ ಮಾಲಿನ್ಯವನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳಿಗೆ ಮಾತ್ರವೇ ಇದನ್ನು ಬಳಸಲಾಗುತ್ತದೆ ಎಂದು ಎಸ್‌ಎಫ್‌ಎ ಹೇಳಿದೆ. "ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೈಡ್ ಅನ್ನು ಮಸಾಲೆ ಪದಾರ್ಥಗಳನ್ನು ಬೆಳೆಸುವ ವೇಳೆ ಕ್ರಿಮಿನಾಶಕದಲ್ಲಿ ಬಳಸಲು ಅನುಮತಿಸಲಾಗಿದೆ" ಎಂದು ಎಸ್‌ಎಫ್‌ಎ ತಿಳಿಸಿದೆ.

ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್‌ ಮಿಶ್ರಣ ಮಾಡಿದ ಪದಾರ್ಥವನ್ನು ಸೇವನೆ ಮಾಡುವುದರಿಂದ ತಕ್ಷಣಕ್ಕೆ ಯಾವುದೇ ಅಪಾಯಗಳು ಎದುರಾಗುವುದಿಲ್ಲ. ಆದರೆ, ದೀರ್ಘಕಾಲದಲ್ಲಿ ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ಹೇಳಿದೆ. "ಆಹಾರ ಸೇವನೆಯಿಂದ ತಕ್ಷಣದ ಅಪಾಯವಿಲ್ಲ. ಆದ್ದರಿಂದ, ಈ ವಸ್ತುವಿಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು" ಎಂದು ಎಸ್‌ಎಫ್‌ಎ ತಿಳಿಸಿದೆ.

ಶಿಶು ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಪತ್ತೆ; ನೆಸ್ಲೆ ಇಂಡಿಯಾ ಷೇರು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

"ಈ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಅದನ್ನು ಸೇವಿಸದಂತೆ ಸೂಚಿಸಲಾಗಿದೆ. ಒಳಗೊಂಡಿರುವ ಉತ್ಪನ್ನಗಳನ್ನು ಸೇವಿಸಿದವರು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು" ಎಂದು ಎಸ್‌ಎಫ್‌ಎ ಮಾಹಿತಿ ನೀಡಿದೆ. ಇನ್ನು ಸಿಂಗಾಪುರ ಫುಡ್‌ ಏಜೆನ್ಸಿಯ ಈ ಪ್ರಕಟಣೆಯ ಬಗ್ಗೆ ಎವರೆಸ್ಟ್‌ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಹಾರ ಪ್ರಿಯರಿಗೆ ಶಾಕ್‌ ಕೊಟ್ಟ Nestle ಆಂತರಿಕ ವರದಿ: ತಿನ್ನೋ ಫುಡ್‌ ಎಷ್ಟು ಸೇಫ್?

Everest Fish Curry Masala Has excess pesticide content Singapore recalls san

Follow Us:
Download App:
  • android
  • ios