Asianet Suvarna News Asianet Suvarna News

ನಾಲ್ಕು ನಿಮಿಷ ಬಾಲಕರಾಮನ ಹಣೆಯ ಮೇಲೆ ಸೂರ್ಯ ತಿಲಕ, ರಾಮನವಮಿ ಸಂಭ್ರಮಕ್ಕೆ ಅಯೋಧ್ಯೆ ಸಿದ್ದ!

ರಾಮನವಮಿಯ ದಿನ ಮಧ್ಯಾಹ್ನ 12 ಗಂಟೆಗೆ ಶ್ರೀರಾಮನ ಜನಿಸಿದ್ದ. ಈಗ ಅದೇ ದಿನ ಸೂರ್ಯನ ಕಿರಣಗಳು ರಾಮಲಲ್ಲಾನ ಹಣೆಯ ಮೇಲೆ ಬೀಳಲಿದೆ. ರಾಮನ ಸೂರ್ಯ ಅಭಿಷೇಕವನ್ನು ವಿಜ್ಞಾನದ ಸೂತ್ರದ ಪ್ರಕಾರ ಮಾಡಲಾಗುತ್ತದೆ. ಈ ಬಗ್ಗೆ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದು, ಇತ್ತೀಚೆಗೆ ಇದರ ಪ್ರಯೋಗವೂ ಯಶಸ್ವಿಯಾಗಿದೆ.
 

ayodhya ram navami celebration Ram Lalla Surya Tilak  Sun rays will fall on head for 4 minutes san
Author
First Published Apr 16, 2024, 8:34 PM IST

ಅಯೋಧ್ಯೆ (ಏ.16): ಈ ಬಾರಿಯ ರಾಮನವಮಿ ಸಂಭ್ರಮ ವಿಶೇಷ. ಅದಕ್ಕೆ ಕಾರಣ, ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಅರ್ಥಾತ್‌ ಬಾಲಕರಾಮನ ಪ್ರಾಣಪ್ರತಿಷ್ಠೆಯಾಗಿದೆ. ಏಪ್ರಿಲ್‌ 17ರ ರಾಮನವಮಿಯಂದು (Rama Navami) ಇದೇ ಮೊದಲ ಬಾರಿಗೆ ಬಾಲರಾಮನ ಮೂರ್ತಿಯ ಹಣೆಯ ಮೇಲೆ ಸೂರ್ಯ ತಿಲಕವನ್ನು ಇಡಲಾಗುತ್ತದೆ. ಹಾಗಾಗಿ ಇಡೀ ಅಯೋಧ್ಯೆ ರಾಮನವಮಿಯಂದು (Ayodhya Ram Mandir) ಸಂಭ್ರಮದಿಂದ ನಲಿದಾಡುತ್ತಿದೆ. ರಾಮಲಲ್ಲಾಗೆ ಸೂರ್ಯ ತಿಲಕವನ್ನು ಇಡುವ ನಿಟ್ಟಿನಲ್ಲಿ ಈಗಾಗಲೇ ಅಭ್ಯಾಸವನ್ನೂ ಮಾಡಲಾಗಿದ್ದು, ಬೇಕಾದ ಸಿದ್ದತೆಗಳನ್ನೂ ಸಂಪೂರ್ಣವಾಗಿ ಮಾಡಲಾಗಿದೆ. ಮೂಲಗಳ ಪ್ರಕಾರ ನಾಲ್ಕು ನಿಮಿಷಗಳ ಕಾಲ ಬಾಲಕರಾಮನ ಹಣೆಯ ಮೇಲೆ ಸೂರ್ಯತಿಲಕ ಮೂಡಲಿದೆ. ಇತ್ತೀಚೆಗೆ ವಿಜ್ಞಾನಿಗಳ ಇದರ ಪರೀಕ್ಷಾರ್ಥ ಪ್ರಯೋಗವನ್ನೂ ಮಾಡಿದ್ದು, ಸೂರ್ಯತಿಲಕ ಯಶಸ್ವಿಯಾಗಿ ಮೂಡಿಬಂದಿದೆ.

ಹೇಗೆ ಮೂಡಲಿದೆ ಸೂರ್ಯತಿಲಕ: ರಾಮನವಮಿಯ ದಿನದಂದು ದೇವಾಲಯದ ಮೂರನೇ ಮಹಡಿಯಲ್ಲಿ ಸ್ಥಾಪಿಸಲಾದ ಮೊದಲ ತರ್ಪಣದ ಮೇಲೆ ಸೂರ್ಯನ ಬೆಳಕು ಬೀಳುತ್ತದೆ. ಇಲ್ಲಿಂದ ಅದು ಪ್ರತಿಫಲಿಸುತ್ತದೆ ಮತ್ತು ಹಿತ್ತಾಳೆಯ ಪೈಪ್ ಅನ್ನು ಪ್ರವೇಶಿಸುತ್ತದೆ. ಹಿತ್ತಾಳೆಯ ಪೈಪ್‌ನಲ್ಲಿ ಸ್ಥಾಪಿಸಲಾದ ಎರಡನೇ ಕನ್ನಡಿಯನ್ನು ತಾಕಿದ ನಂತರ, ಅವು ಮತ್ತೆ 90 ಡಿಗ್ರಿಗಳಲ್ಲಿ ಪ್ರತಿಫಲಿಸುತ್ತದೆ. ನಂತರ, ಹಿತ್ತಾಳೆಯ ಪೈಪ್ ಮೂಲಕ ಹೋಗುವಾಗ, ಈ ಕಿರಣವು ಮೂರು ವಿಭಿನ್ನ ಮಸೂರಗಳ ಮೂಲಕ ಹಾದುಹೋಗುತ್ತದೆ ಮತ್ತು ಉದ್ದವಾದ ಪೈಪ್‌ನ ಗರ್ಭಗುಡಿಯ ಕೊನೆಯಲ್ಲಿ ಸ್ಥಾಪಿಸಲಾದ ಕನ್ನಡಿಗೆ ಹೊಡೆಯುತ್ತದೆ. ಗರ್ಭಗುಡಿಯಲ್ಲಿ ಅಳವಡಿಸಲಾಗಿರುವ ಗಾಜಿನ ಮೇಲೆ ಕಿರಣಗಳು ನೇರವಾಗಿ 75 ಎಂಎಂ ವೃತ್ತಾಕಾರದ ತಿಲಕವನ್ನು ರಾಮಲಲ್ಲಾ ಹಣೆಯ ಮೇಲೆ ಮೂಡಿಸುತ್ತದೆ. ಇದು ನಾಲ್ಕು ನಿಮಿಷಗಳ ಕಾಲ ಹಣೆಯ ಮೇಲೆ ಇರಲಿದೆ ಎಂದು ತಿಳಿಸಲಾಗಿದೆ.

ಬೆಳಕಿನ ಪ್ರತಿಬಿಂಬದ ನಿಯಮದ ಮೂಲಕ ಶ್ರೀರಾಮ ಮಂದಿರದಲ್ಲಿ ಸೂರ್ಯ ಅಭಿಷೇಕ ಮಾದರಿಯನ್ನು ಶ್ರೀ ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಜಂಟಿಯಾಗಿ ಸಿದ್ಧಪಡಿಸಿದ್ದಾರೆ. ಈ ಮಾದರಿಯಲ್ಲಿ, ಸೂರ್ಯನ ಬದಲಿಗೆ, ಬಲ್ಬ್‌ನಿಂದ ಶಕ್ತಿಯನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ವಿವಿಧ ಮಸೂರಗಳ ಮೂಲಕ ಬೆಳಕನ್ನು ಪ್ರತಿಫಲಿಸುವ ಮೂಲಕ ಸೂರ್ಯ ಅಭಿಷೇಕವನ್ನು ಮಾಡಲಾಗುತ್ತಿದೆ. ಈ ಮಾದರಿಯಲ್ಲಿ ಒಂದೇ ವ್ಯತ್ಯಾಸವೆಂದರೆ ಅದರಲ್ಲಿ ಪೈಪ್‌ಗಳನ್ನು ಬಳಸಲಾಗಿಲ್ಲ ಮತ್ತು ಸೂರ್ಯನ ಬದಲು ಬಲ್ಬ್‌ಗಳನ್ನು ಬಳಸಲಾಗಿದೆ.

ರಾಮನವಮಿಗೆ ಸಜ್ಜುಗೊಂಡ ರಾಮಲಲ್ಲಾ : ಶೃಂಗಾರಗೊಂಡ ಅಯೋಧ್ಯೆ ರಾಮಮಂದಿರ

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ. ಸೂರ್ಯ ತಿಲಕ ಬೀಳುವ ನಾಲ್ಕು ನಿಮಿಷದ ಕಾಲ ವಿಗ್ರಹ ಯಾವುದೇ ರೀತಿಯಲ್ಲೂ ಬಿಸಿ ಆಗೋದಿಲ್ಲ. ಸೂರ್ಯತಿಲಕ ಕಾರ್ಯಕ್ರಮ ವೀಕ್ಷಿಸಲು ಪ್ರಸಾರ ಭಾರತಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ ಎಂದು ವರದಿಯಾಗಿದೆ. ಅದಲ್ಲದೆ, ಶ್ರೀರಾಮ ಮಂದಿರದ ಯೂಟ್ಯೂಬ್‌, ಎಕ್ಸ್‌ ಹ್ಯಾಂಡಲ್‌, ಫೇಸ್‌ಬುಕ್‌ ಪೇಜ್‌ನಲ್ಲಿ ಲೈವ್‌ ಇರಲಿದೆ.

ಅಯೋಧ್ಯೆ: ರಾಮಮೂರ್ತಿಯ ಮೇಲೆ ಸೂರ್ಯರಶ್ಮಿ ಪ್ರಯೋಗ ಸಕ್ಸಸ್‌

Follow Us:
Download App:
  • android
  • ios