Asianet Suvarna News Asianet Suvarna News

ಹಚ್ಚಿಕೊಂಡಷ್ಟು ಸುಲಭವಲ್ಲ ನೇಲ್ ಪಾಲಿಶ್ ತಯಾರಿಸೋದು, ಬಣ್ಣದ ಜಗತ್ತಿನ ಸುತ್ತೊಂದು ಸುತ್ತಿ

ಒಂದೊಂದು ಹೆಣ್ಣು ಮಗಳ ಹತ್ರ ನಾಲ್ಕರಿಂದ ಐದು ವೆರೈಟಿ ನೇಲ್ ಪಾಲಿಶ್ ಇದ್ದೇ ಇರುತ್ತೆ. ಅದು ಗಟ್ಟಿಯಾಯ್ತು ಅಂತಾ ಮತ್ತೊಂದಿಷ್ಟು ನೇಲ್ ಪಾಲಿಶ್ ಖರೀದಿ ಮಾಡ್ತೇನೆ ಇರ್ತಾರೆ. ಈ ನೇಲ್ ಪಾಲಿಶ್ ತಯಾರಿಸೋದು ಹೇಗೆ ಎಂಬ ಕುತೂಹಲ ನಿಮಗೂ ಇದ್ರೆ ಈ ವಿಡಿಯೋ ನೋಡಿ.
 

Nail Polish Making In Factory Viral Video How Nail Polish Made In Factory Video roo
Author
First Published Apr 15, 2024, 2:47 PM IST

ಹುಡುಗಿಯರ ಸೌಂದರ್ಯವರ್ಧಕದಲ್ಲಿ ನೇಲ್ ಪಾಲಿಶ್ ಸ್ಥಾನ ಪಡೆದಿದೆ. ಕಬೋರ್ಡ್ ನಲ್ಲಿ, ಹ್ಯಾಂಡ್ ಬ್ಯಾಗ್ ನಲ್ಲಿ ನೇಲ್ ಪಾಲಿಶ್ ಇರ್ಲೇಬೇಕು. ಡ್ರೆಸ್ ಗೆ ತಕ್ಕಂತೆ ನೇಲ್ ಪಾಲಿಶ್ ಬದಲಿಸುವ ಹುಡುಗಿಯರು, ಉಗುರಿನ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಆಸಕ್ತಿಯಿಂದ ಒಂದೊಂದು ಉಗುರಿಗೆ ಒಂದೊಂದು ಬಣ್ಣ ಹಚ್ಚಿಕೊಂಡು ಫ್ಯಾಷನ್ ಮಾಡುವ ಮಹಿಳೆಯರಿದ್ದಾರೆ. ಅದೇನೇ ಇರಲಿ, ಅಂಗಡಿಯಲ್ಲಿ ಅಥವಾ ಆನ್ಲೈನ್ ನಲ್ಲಿ ಸಿಗುವ ನೇಲ್ ಪಾಲಿಶ್ ಖರೀದಿ ಮಾಡಿ, ಅದನ್ನು ಉಗುರಿಗೆ ಹಚ್ಚಿಕೊಳ್ಳೋದು ಮಾತ್ರ ಮಹಿಳೆಯರಿಗೆ ಗೊತ್ತು. ಪುರುಷರು ಇದು ಹುಡುಗಿಯರ ಉತ್ಪನ್ನ ಎನ್ನುವ ಕಾರಣಕ್ಕೆ ಅದ್ರ ಸುದ್ದಿಗೆ ಹೋಗೋದಿಲ್ಲ. ಆದ್ರೆ ಈ ನೇಲ್ ಪಾಲಿಶ್ ಹೇಗೆ ತಯಾರಾಗುತ್ತೆ ಎನ್ನುವುದು ನಿಮಗೆ ಗೊತ್ತಾ?. ನೇಲ್ ಪಾಲಿಶ್ ಹಚ್ಚಿಕೊಂಡಷ್ಟು ಸುಲಭವಾಗಂತೂ ನೇಲ್ ಪಾಲಿಶ್ ತಯಾರಿಸೋಕೆ ಆಗಲ್ಲ. ಅದಕ್ಕೊಂದಿಷ್ಟು ಪ್ರೊಸೆಸ್ ಇದೆ. ಹಾಗೆ ಪ್ರತಿ ಬಾಟಲಿಗೆ ನೇಲ್ ಪಾಲಿಶ್ ತುಂಬುವಾಗ ತಾಳ್ಮೆ ಕೂಡ ಬೇಕು. 

ಇನ್ಸ್ಟಾಗ್ರಾಮ್ ನ ಅಭಿಷೇಕ್ (@thefoodiehat) ಹೆಸರಿನ ಖಾತೆಯಲ್ಲಿ ಅನೇಕ ಕಾರ್ಖಾನೆ (Factory) ವಿಡಿಯೋಗಳು ಪೋಸ್ಟ್ ಆಗ್ತಿರುತ್ತವೆ. ಈ ಬಾರಿ ಅಭಿಷೇಕ್, ನೇಲ್ ಪಾಲಿಶ್ ಫ್ಯಾಕ್ಟರಿ ವಿಡಿಯೋ (Video) ವನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಅವರು ನೇಲ್ ಪಾಲಿಶ್ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಚಿಕ್ಕದಾಗಿ ತೋರಿಸಿದ್ದಾರೆ. ಅದಕ್ಕೆ ಯಾವೆಲ್ಲ ಕೆಮಿಕಲ್, ಬಣ್ಣ ಬಳಕೆಯಾಗುತ್ತೆ ಎನ್ನುವುದು ವಿಡಿಯೋದಲ್ಲಿ ಇಲ್ಲ.

ಹಣ ಸೇವ್ ಮಾಡೋದು ಹೇಗೆ ಅನ್ನೋರಿಗೆ ಇಲ್ಲಿದೆ ಐಡಿಯಾ, ಬಿಟ್ಟ ಆಹಾರ ತಿಂದೇ ದುಡ್ಡು ಮಾಡ್ಕೊಂಡ ವ್ಯಕ್ತಿ!

ನೇಲ್ ಪಾಲಿಶನ್ನು ಮೊದಲು ಒಂದು ಬಕೆಟ್ ಗೆ ಹಾಕಲಾಗುತ್ತದೆ. ನಂತ್ರ ಮಜ್ಜಿಗೆ ಕಡೆದಂತೆ ಅದನ್ನು ಕಡೆದು ದ್ರಾವಣ ಸಿದ್ಧಪಡಿಸಲಾಗುತ್ತದೆ. ಈ ದ್ರಾವಣವನ್ನು ಒಂದು ಸಣ್ಣ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಲಾಗುತ್ತದೆ. ಇದರ ನಂತರ ಅದನ್ನು ಸಣ್ಣ ಗಾಜಿನ ಬಾಟಲಿಗಳಲ್ಲಿ ಕೈಯಿಂದ ತುಂಬಿಸಲಾಗುತ್ತದೆ. ಗಾಜಿನ ಬಾಟಲಿ ಮುಚ್ಚಳ ಮುಚ್ಚಿ ಅದನ್ನು ಪ್ಯಾಕ್ ಮಾಡಲಾಗುತ್ತದೆ.     

ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಸಂಪೂರ್ಣ ವೈರಲ್ ಆಗಿದೆ. ಈ ವಿಡಿಯೋ 1.5 ಕೋಟಿ ವೀಕ್ಷಣೆ ಪಡೆದಿದೆ. ಅನೇಕರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಎಷ್ಟು ಕೆಮಿಕಲ್ ಬೆರೆಸಲಾಗಿದೆ ಎಂಬುದನ್ನು ತೋರಿಸಿಲ್ಲ ಎಂದು ಒಬ್ಬರು ಹೇಳಿದ್ರೆ ಮತ್ತೊಬ್ಬರು ಅಲ್ಲಿ ಯಾವ ವಾಸನೆ ಬರುತ್ತೆ ಎಂಬುದನ್ನು ನಾವು ಊಹಿಸಬಲ್ಲೆವು ಎಂದಿದ್ದಾರೆ. ಮತ್ತೊಬ್ಬರು ಇದೇ ಮೊದಲ ಬಾರಿ ನೇಲ್ ಪಾಲಿಶ್ ನ ಇಷ್ಟೊಂದು ಖಾಲಿ ಬಾಟಲಿ ನೋಡಿದ್ದಾಗಿ ಹೇಳಿದ್ದಾರೆ. ನೇಲ್ ಪಾಲಿಶ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ರಲ್ಲಿರುವ ಕೆಮಿಕಲ್ ಅಡ್ಡಪರಿಣಾಮ ಬೀರುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.  

ಸ್ವಂತ ಉದ್ಯಮ ಪ್ರಾರಂಭಿಸಲು ಬಹುರಾಷ್ಟ್ರೀಯ ಕಂಪನಿಯ ಉನ್ನತ ಹುದ್ದೆ ತೊರೆದ ಈತ, ಈಗ 200 ಕೋಟಿಯ ಒಡೆಯ!

 ನೀವೂ ಶುರು ಮಾಡಿ ನೇಲ್ ಪಾಲಿಶ್ ಕಾರ್ಖಾನೆ  : ನೇಲ್ ಪಾಲಿಶ್ ಕಾರ್ಖಾನೆ ಶುರು ಮಾಡೋದು ಕಠಿಣ ಕೆಲಸವೇನಲ್ಲ. ನೇಲ್ ಪಾಲಿಶ್ ಗೆ ಅಗತ್ಯವಿರುವ ಕಚ್ಚಾ ವಸ್ತುಗಳು ನಿಮಗೆ ಲಭ್ಯವಿದೆ. ಆದ್ರೆ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಿ ನೀವು ಅದನ್ನು ತಯಾರಿಸಬೇಕಾಗುತ್ತದೆ. ನೇಲ್ ಪಾಲಿಶ್ ಕಾರ್ಖಾನೆಗೆ ಕೆಲ ಯಂತ್ರಗಳು ಹಾಗೂ ಒಪ್ಪಿಗೆಯ ಅಗತ್ಯವಿರುತ್ತದೆ. ನೇಲ್ ಪಾಲಿಶ್ ತಯಾರಿಸುವ ಬಗ್ಗೆ ಜ್ಞಾನವಿಲ್ಲ ಎನ್ನುವವರು ಅದ್ರ ಬಗ್ಗೆ ತರಬೇತಿ ಪಡೆದು ನೇಲ್ ಪಾಲಿಶ್ ತಯಾರಿಸಬಹುದು. ಮಾರುಕಟ್ಟೆಯಲ್ಲಿ ಈಗಾಗಲೇ ಅನೇಕ ಕಂಪನಿಗಳಿರುವ ಕಾರಣ ಅವರ ಜೊತೆ ಪೈಪೋಟಿ ಒಡ್ಡುವಂತಹ ನೆಲ್ ಪಾಲಿಶ್ ಗಳನ್ನು ನೀವು ತಯಾರಿಸಬೇಕು. ಇಲ್ಲಿ ಗುಣಮಟ್ಟ ಮುಖ್ಯವಾಗುತ್ತದೆ. ಅದ್ರ ಜೊತೆ ಮಾರುಕಟ್ಟೆ, ಜಾಹೀರಾತಿಗೂ ನೀವು ಮಹತ್ವ ನೀಡಿದಲ್ಲಿ ಸುಲಭವಾಗಿ ನೇಲ್ ಪಾಲಿಶ್ ಮಾರಾಟ ಮಾಡಬಹುದು.  ಐದು ಲಕ್ಷ ರೂಪಾಯಿ ಹೂಡಿಕೆ ಮಾಡಿಯೂ ನೀವು ಈ ಬ್ಯುಸಿನೆಸ್ ಆರಂಭಿಸಬಹುದು. 

Follow Us:
Download App:
  • android
  • ios