'ಸನ್ನಿ'ಗೆ ಅಭಿನಂದನೆ ಸಲ್ಲಿಸಿದ ಸುದೀಪ್
entertainment
By Suvarna Web Desk | 11:22 AM Monday, 20 March 2017

ಅಮೆರಿಕಾದ ನ್ಯೂಯಾರ್ಕ್'ನಲ್ಲಿ ಆಕಾಡೆಮಿಕ್ ಆಗಿ ಸಿನಿಮಾ ಅಧ್ಯಯನ ಮಾಡುತ್ತಿರುವ ಸಂಚಿತ್

ಸ್ಯಾಂಡಲ್'ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ತಮ್ಮ ಪ್ರೀತಿಯ 'ಸನ್ನಿ'ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸುದೀಪ್ ಅವರ ಸೋದರಿ ಸುಜಾತ ಅವರ ಪುತ್ರ ಸಂಚಿತ್ ಇತ್ತೀಚಿಗಷ್ಟೆ 'ಒಂದಾನೊಂದು ದಿನ' ಎಂಬ ಕಿರು ಚಿತ್ರ ನಿರ್ದೇಶಿಸಿ ಯೂಟ್ಯೂಬ್'ನಲ್ಲಿ ಬಿಡುಗಡೆ ಮಾಡಿದ್ದರು.

ಈ ಕಿರುಚಿತ್ರವನ್ನು ಕೆಲವೇ ದಿನಗಳಲ್ಲಿ 50 ಸಾವಿರ ಮಂದಿ ವೀಕ್ಷಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಇಷ್ಟು ಜನ ವೀಕ್ಷಿಸಿರುವುದಕ್ಕೆ ಸೋದರ ಮಾವ ಸುದೀಪ್ ಅವರು ಸಂಚಿತ್ ಸಾಧನೆಯ ಬಗ್ಗೆ ಟ್ವಿಟರ್'ನಲ್ಲಿ ಅಭಿನಂದಿಸಿದ್ದಾರೆ. ಅಮೆರಿಕಾದ ನ್ಯೂಯಾರ್ಕ್'ನಲ್ಲಿ ಆಕಾಡೆಮಿಕ್ ಆಗಿ ಸಿನಿಮಾ ಅಧ್ಯಯನ ಮಾಡುತ್ತಿರುವ ಸಂಚಿತ್ ತಮ್ಮ ಅಧ್ಯಯನದ ಭಾಗವಾಗಿ 'ಒಂದಾನೊಂದು ದಿನ' ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ.

ತಾಯಿ ಮತ್ತು ಮಗಳ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಟಿಯರಾದ ಶ್ರದ್ದಾ ಶ್ರೀನಾಥ್ ಹಾಗೂ ಸುಧಾ ಬೆಳವಾಡಿ ನಟಿಸಿದ್ದಾರೆ.  

Show Full Article