Asianet Suvarna News Asianet Suvarna News

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ 'ಸಾವು'?: ಪ್ರಸಿದ್ಧ ವಾಹಿನಿಯಲ್ಲಿ ಬ್ರೇಕಿಂಗ್ ನ್ಯೂಸ್

ಯುರೋಪಿಯನ್ ನ್ಯೂಸ್ ನೆಟ್'ವರ್ಕ್ ತಮ್ಮ ವಾಹಿನಿಯಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮೃತಪಟ್ಟಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಈ ಬ್ರೇಕಿಂಗ್ ಸುದ್ದಿಯಿಂದ ಬಾಲಿವುಡ್'ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಬುಧವಾರದಂದು ಬಾಲಿವುಡ್ ಕಿಂಗ್ ಖಾನ್'ಗೆ ಪೊಲೀಸ್ ಅಧಿಕಾರಿಗಳಿಂದ, ಅಭಿಮಾನಿಗಳು ಹಾಗೂ ಮಿತ್ರರಿಂದ ಕರೆಗಳ ಸುರಿಮಳೆಯಾಗಿದೆ.  

shah rukh khan new victim of death hoax european news network says he died in air crash

ನವದೆಹಲಿ(ಜೂ.01): ಯುರೋಪಿಯನ್ ನ್ಯೂಸ್ ನೆಟ್'ವರ್ಕ್ ತಮ್ಮ ವಾಹಿನಿಯಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮೃತಪಟ್ಟಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಈ ಬ್ರೇಕಿಂಗ್ ಸುದ್ದಿಯಿಂದ ಬಾಲಿವುಡ್'ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಬುಧವಾರದಂದು ಬಾಲಿವುಡ್ ಕಿಂಗ್ ಖಾನ್'ಗೆ ಪೊಲೀಸ್ ಅಧಿಕಾರಿಗಳಿಂದ, ಅಭಿಮಾನಿಗಳು ಹಾಗೂ ಮಿತ್ರರಿಂದ ಕರೆಗಳ ಸುರಿಮಳೆಯಾಗಿದೆ.  

ವಾಸ್ತವವಾಗಿ ಯುರೋಪಿಯನ್ ನ್ಯೂಸ್ ನೆಟ್'ವರ್ಕ್'ನ ಇಐಇ ಪಾಯಸ್ ಟಿವಿಯೊಂದು 'ಖಾಸಗಿ ಪ್ಲೇನ್'ನಲ್ಲಿ (ಗಲ್ಫ್ ಸ್ಟ್ರೀಟ್ ಜಿ 550 ಜೆಟ್) ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪ್ಲೇನ್ ಕ್ರಾಶ್ ಸಂಭವಿಸಿ ಬಾಲಿವುಡ್ ನಟ ಶಾರುಖ್ ಖಾನ್ ಸೇರಿದಂತೆ 7 ಮಂದಿ ಸಾವನ್ನಪ್ಪಿರುವುದಾಗಿ' ಬ್ರೇಕಿಂಗ್ ನ್ಯೂಸ್ ಒಂದನ್ನು ಪ್ರಸಾರ ಮಾಡಿದ್ದರು. ಈ ಸುದ್ದಿಯಲ್ಲಿ ಶಾರುಖ್ ಪ್ಲೇನ್ ಹತ್ತಿರುವುದರಿಂದ ಹಿಡಿದು ಪ್ಯಾರಿಸ್'ಗೆ ತೆರಳಿರುವ ತನಕದ ಪ್ರತಿಯೊಂದು ವಿವರವನ್ನು ನೀಡಲಾಗಿತ್ತು. ಈ ಸುದ್ದಿ ಆಲಿಸಿದ ಶಾರುಖ್ ಖಾನ್ ವಿದೇಶದಲ್ಲಿರುವ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

ಈ ವಿಚಾರವಾಗಿ ವರದಿ ಮಾಡಿರುವ ಮುಂಬಯಿ ಮಿರರ್ 'ಇಂತಹುದ್ದೊಂದು ಸುದ್ದಿ ಹಬ್ಬುತ್ತಿದ್ದಂತೆಯೇ, ನಿಜಾಂಶ ತಿಳಿದುಕೊಳ್ಳಲು ಮುಂಬೈನ ಜಂಟಿ ಆಯುಕ್ತ ದೇವನ್ ಭಾರತಿ ಕೂಡಾ ಶಾರುಖ್ ಖಾನ್'ರವರ ತಂಡವನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಾಹಿತಿ ನೀಡಿದ ತಂಡ ಶಾರುಖ್ ಖಾನ್'ಗೇ ಏನೂ ಆಗಿಲ್ಲ ಹಾಗೂ ಅವರು ಮುಂಬೈನಲ್ಲೇ ಇದ್ದಾರೆ ಎಂದು ತಿಳಿಸಿರುವುದಾಗಿ' ಸುದ್ದಿಯಲ್ಲಿ ತಿಳಿಸಿದೆ. ಇನ್ನು ಈ ಸುದ್ದಿ ವೀಕ್ಷಿಸಿದ ಅಭಿಮಾನಿಗಳೂ ಕಿಂಗ್ ಖಾನ್'ಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಕೆಲ ದಿನಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ  ಸೆಲೆಬ್ರಿಟಿಗಳ ಸಾವಿನ ಸುದ್ದಿ ವೈರಲ್ ಆಗುತ್ತಿವೆ. ಇವುಗಳಲ್ಲಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಹಾಗೂ ಹಿಂದಿ ಸೀರಿಯಲ್ ನಟಿ ಶ್ವೇತಾ ತಿವಾರಿ ಸೇರಿದಂತೆ ನಟರಾದ ಅಂಶುಮಾನ್ ಖುರಾನಾ, ಶಶಿ ಕಪೂರ್ ಸಾವಿನ ಕುರಿತಾದ ತಪ್ಪು ಸಂದೇಶಗಳು ರವಾನೆಯಾಗಿದ್ದವು.

ಕೃಪೆ: NDTv

Follow Us:
Download App:
  • android
  • ios