Asianet Suvarna News Asianet Suvarna News

ಕನಕ ನಡೆಗೆ ಅನುಮತಿ ನೀಡದ ಉಡುಪಿ ಜಿಲ್ಲಾಡಳಿತ

ಶ್ರೀ ಕೃಷ್ಣಮಠ ಮತ್ತೊಮ್ಮೆ ವೈಚಾರಿಕ ಸಂಘರ್ಷಕ್ಕೆ ಕಾರಣವಾಗಿದೆ. ನಾಳೆ ಯುವ ಬ್ರಿಗೇಡ್ ನೇತೃತ್ವದಲ್ಲಿ ಕನಕ ನಡೆ ಹೆಸರಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿತ್ತು. ಆದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನಿರಾಕರಿಸಿದೆ.

District Administration Reject to permission for Kanaka Nade

ಉಡುಪಿ (ಅ.22):  ಶ್ರೀ ಕೃಷ್ಣಮಠ ಮತ್ತೊಮ್ಮೆ ವೈಚಾರಿಕ ಸಂಘರ್ಷಕ್ಕೆ ಕಾರಣವಾಗಿದೆ. ನಾಳೆ ಯುವ ಬ್ರಿಗೇಡ್ ನೇತೃತ್ವದಲ್ಲಿ ಕನಕ ನಡೆ ಹೆಸರಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿತ್ತು. ಆದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನಿರಾಕರಿಸಿದೆ.

 ಒಂದು ವೇಳೆ ಕನಕ ನಡೆ ಆಯೋಜನೆಯಾದ್ರೆ ಅದಕ್ಕೆ ಪ್ರತಿಯಾಗಿ ಸ್ವಾಭಿಮಾನಿ ಜಾಥಾ ನಡೆಸುವುದಾಗಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ಎಚರಿಸಿದ್ದವು. ಇದರಿಂದ ಸಂಘರ್ಷವಾಗಬಹುದು ಎನ್ನುವ ಕಾರಣಕ್ಕೆ ಎರಡೂ ಕಾರ್ಯಕ್ರಮಕ್ಕೆ ಅನುಮತಿಸ ನಿರಾಕರಿಸಲಾಗಿದೆ. ಆದರೆ ಯುವ ಬ್ರಿಗೇಡ್ ಕಾರ್ಯಕರ್ತರು ಇದೊಂದು ಪೂರ್ವಯೋಜಿತ ಕಾರ್ಯಕ್ರಮ ಇದಕ್ಕೂ ಚಲೋ ಉಡುಪಿಗೂ ಸಂಬಂಧವಿಲ್ಲ ಅಂತ ಹೇಳ್ತಿದ್ದಾರೆ. ಆದರೆ ದಲಿತರು ನಡೆದ ಬೀದಿಯನ್ನು ಸ್ವಚ್ಚಗೊಳಿಸೋದು ಅಂದ್ರೆ ಅದು ಸಂಘಟಿತ ಅಸ್ಪ್ರಶ್ಯತಾ ಆಚರಣೆ ಅನ್ನೋದು ಪ್ರಗತಿಪರರ ವಾದ.

ಈ ನಡುವೆ ಪೇಜಾವರ ಸ್ವಾಮೀಜಿ ಚಲೋ ಉಡುಪಿ ನಡೆದ ಬೀದಿಗಳನ್ನು ಸ್ವಚ್ಛ ಮಾಡಬೇಡಿ ಇದು ಅಪಾರ್ಥಕ್ಕೆ ಕಾರಣವಾಗುತ್ತೆ ಅಂತ ಕನಕ ನಡೆಯ ಆಯೋಜಕ ಚಕ್ರವರ್ತಿ ಸೂಲಿಬೆಲೆಗೆ ತಿಳಿಸಿದ್ದಾರೆ. ಆದರೆ ಅನುಮತಿ ನಿರಾಕರಿಸಿರೋದ್ರಿಂದ ಕಾರ್ಯಕ್ರಮ ರದ್ದಾಗುತ್ತೋ ಅಥವಾ ಮಠದ ಆವರಣಕ್ಕೆ ಸೀಮಿತವಾಗಿ ಕಾರ್ಯಕ್ರಮ ನಡೆಸಲಾಗುತ್ತೋ ಕಾದು ನೋಡಬೇಕು.

Follow Us:
Download App:
  • android
  • ios