Asianet Suvarna News Asianet Suvarna News

ರಾಜಧಾನಿಯಲ್ಲಿ ಲವ್ ಜಿಹಾದ್ ತಲ್ಲಣ, ಪ್ರೀತಿ ನಿರಾಕರಿಸಿದ ಬಾಲಕಿ ಕೈಗೆ ಸಿಗದೇ ಆಕೆ ತಾಯಿಗೆ ಗುಂಡಿಕ್ಕಿದ ಆರೋಪಿ!

ಕರ್ನಾಟಕದಲ್ಲಿ ನೇಹಾ ಹೀರೆಮಠ ಹತ್ಯೆ ಬಳಿಕ ಸಾಲು ಸಾಲು ಲವ್ ಜಿಹಾದ್ ಆರೋಪಗಳು ಹಾಗೂ ಹತ್ಯೆಗಳು ವರಿದಿಯಾಗುತ್ತಿದೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ 15 ವರ್ಷದ ಬಾಲಕಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆಕೆಯ ಮನೆಗೆ ನುಗ್ಗಿ ಹತ್ಯೆಗೆ ಮುಂದಾದ ಆರೋಪಿ, ಆಕೆ ಸಿಗದಾಗ, ಬಾಲಕಿ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ನಡೆದಿದೆ.
 

Love Jihad Minority Community boy Shot dead mother of Hindu girl for rejects Proposal in Delhi ckm
Author
First Published Apr 27, 2024, 4:08 PM IST

ಜಹಾಂಗೀರ್‌ಪುರಿ(ಏ.27)  ಲೋಕಸಭಾ ಚುನಾವಣೆ ಕಾವಿನ ನಡುವೆ ಲವ್ ಜಿಹಾದ್ ಪ್ರಕರಣಗಳು ತೀವ್ರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಕರ್ನಾಟಕದ ನೇಹಾ ಹೀರೆಮಠ್ ಹತ್ಯೆ ಪ್ರಕರಣದ ಬಳಿ ಸಾಲು ಸಾಲು ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಲವ್ ಜಿಹಾದ್ ಹತ್ಯೆ ನಡೆದಿರುವ ಆರೋಪ ಕೇಳಿಬಂದಿದೆ. ಮುಸ್ಲಿಮ್ ಸಮುದಾಯದ 18 ವರ್ಷದ ಯುವಕ ಜಹಾಂಗೀರ್‌ಪುರಿ ನಾರ್ತ್‌ವೆಸ್ಟ್‌ನ ಹಿಂದೂ ನಿವಾಸಿಯಾಗಿರುವ 15 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಭಯಭೀತಗೊಂಡ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಮುಸ್ಲಿಮ್ ಯುವಕ, ಬಾಲಕಿಯನ್ನು ಹತ್ಯೆ ಮಾಡಲು ಗೆಳೆಯರ ಜೊತೆ ಆಕೆಯ ಮನೆಗೆ ನುಗ್ಗಿದ್ದಾನೆ. ಈ ವೇಳೆ ಬಾಲಕಿ ಮನೆಯಲ್ಲಿ ಇಲ್ಲದ ಕಾರಣ ಆಕೆಯ ತಾಯಿಗೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಹಾಸ್ಟೆಲ್‌ನಲ್ಲಿ ನಿಂತು ಓದುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯ ಹಿಂದೆ ಬಿದ್ದ ಈ ಮುಸ್ಲಿಮ್ ಯುವಕ, ಕಾಲೇಜು, ರಸ್ತೆಗಳಲ್ಲಿ ಈಕೆಗೆ ಕಿರುಕುಳ ನೀಡಿದ್ದಾನೆ. ಯವಕನ ಕಾಟ ತಾಳಲಾರದೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಇತ್ತ ಪೋಷಕರು ಮುಸ್ಲಿಮ್ ಯುವಕನಿಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಹಾಸ್ಟೆಲ್‌ನಿಂದ ಬಿಡಿಸಿದ್ದಾರೆ. ಇತ್ತ ಪೊಲೀಸರಿಗೂ ಈ ಕುರಿತು ಪೋಷಕರು ಮಾಹಿತಿ ನೀಡಿದ್ದಾರೆ. ಮುಸ್ಲಿಮ್ ಯುವಕ ವಿದ್ಯಾರ್ಥಿಯಾಗಿರುವ ಕಾರಣ ಎಫ್ಐಆರ್‌ಗಿಂತ ಬುದ್ಧಿವಾದ ಹೇಳುವಂತೆ ಪೊಲೀಸರಿಗೆ ಪೋಷಕರು ಮನವಿ ಮಾಡಿದ್ದಾರೆ. 

ಅನಾಮಧೇಯ ವ್ಯಕ್ತಿಗಳು ನಮ್ಮ ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ; ನೇಹಾ ತಂದೆ ನಿರಂಜನ ಹಿರೇಮಠ ಆತಂಕ

ಬಾಲಕಿ ಹಾಗೂ ಪೋಷಕರ ವಿರುದ್ದ ಮುಸ್ಲಿಮ್ ಯುವಕ ಆಕ್ರೋಶ ಹೆಚ್ಚಾಗಿದೆ. ಪ್ರೀತಿ ನಿರಾಕರಿಸಿ, ಪೋಷಕರಿಗೆ ತಿಳಿಸಿದ ಬಾಲಕಿಯನ್ನು ಹತ್ಯೆ ಮಾಡಲು ಆರೋಪಿ ಮುಂದಾಗಿದ್ದಾನೆ.  ಇದಕ್ಕಾಗಿ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬಾಲಕಿಯ ಮನೆಗೆ ನುಗ್ಗಿದ್ದಾನೆ. ಆದರೆ ಈತನ ಬೆದರಿಕೆ ಅರಿತಿದ್ದ ಪೋಷಕರು ಬಾಲಕಿಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಮನೆಯಲ್ಲಿ ತಾಯಿ ಹಾಗೂ ಆಪ್ತ ಸಂಬಂಧಿಕರು ಮಾತ್ರ ಇದ್ದರು. ಬಾಲಕಿ ಕೈಗೆ ಸಿಗದಾಗ, ಆರೋಪಿಯ ಆಕ್ರೋಶ ಹೆಚ್ಚಾಗಿದೆ. ಬಾಲಕಿ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಹತ್ಯೆ ಮಾಡಿ ಆರೋಪಿ ಹಾಗೂ ಆತನ ಸಹಚರರು ಪರಾರಿಯಾಗಿದ್ದಾರೆ. ಇತ್ತ ತೀವ್ರ ಗಾಯಗೊಂಡು ಕುಸಿದು ಬಿದ್ದ ಬಾಲಕಿ ತಾಯಿಯನ್ನು ಬಾಬು ಜಗಜೀವನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆ ದಾಖಲಿಸುವ ಮೊದಲೇ ಬಾಲಕಿ ತಾಯಿ ಮೃತಪಟ್ಟಿದ್ದಾರೆ. ಇತ್ತ ಬಾಲಕಿ ಆಘಾತಗೊಂಡಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪಿಸ್ತೂಲ್ ಫೋಟೋ ಹಾಕಿದ್ದ. ಆದರೂ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಜೈಲಲ್ಲಿರುವ ಫಯಾಜ್‌ ಮೊಬೈಲ್‌ನಲ್ಲಿನ ಫೋಟೋ ಲೀಕ್‌ ಆಗಿದ್ದು ಹೇಗೆ?: ಜೋಶಿ
 

Follow Us:
Download App:
  • android
  • ios