Asianet Suvarna News Asianet Suvarna News

Hassan Obscene Video Case: ಜಾಮೀನು ಅರ್ಜಿ ಹಿಂಪಡೆದ ಹೆಚ್.ಡಿ.ರೇವಣ್ಣ

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿಯನ್ನು ಹೆಚ್‌ ಡಿ ರೇವಣ್ಣ ಕೋರ್ಟ್‌ನಿಂದ ಹಿಂದಕ್ಕೆ  ಪಡೆದಿದ್ದಾರೆ.

Hassan Obscene Video Case HD Revanna withdrew the anticipatory  bail application gow
Author
First Published May 3, 2024, 11:53 AM IST

ಬೆಂಗಳೂರು (ಮೇ.03): ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಹೆಚ್.ಡಿ.ರೇವಣ್ಣ ಪರ ವಕೀಲ ಮೂರ್ತಿ ಡಿ ನಾಯ್ಕ್  ಹಾಜರಾಗಿದ್ದರು. ಎಸ್ಐಟಿ ಪರವಾಗಿ ಎಸ್ಪಿಪಿ ಜಗದೀಶ್ ವಾದ ಮಂಡನೆಗೆ ಬಂದಿದ್ದರು.

ಡಿಕೆಶಿ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್, ಸಿದ್ದರಾಮಣ್ಣ ನೀವು ಸ್ವಲ್ಪ ಹುಷಾರಾಗಿರಿ ಎಂದ ರಾಜೂಗೌಡ!

ವಿಚಾರಣೆ ವೇಳೆ ಸೆಕ್ಷನ್ 376 ಸೇರ್ಪಡೆ ಮಾಡಿಲ್ಲ ಎಂದು ಎಸ್ಐಟಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಗ ಸೆಕ್ಷನ್‌ 376 ಅಲ್ಲದೆ ಬೇರೆ ಯಾವುದಾದರೂ ನಾನ್ ಬೇಲೆಬಲ್ ಸೆಕ್ಷನ್ ಹಾಕ್ತಾರಾ ತಿಳಿಸಬೇಕು ಎಂದು ರೇವಣ್ಣ ಪರ ವಕೀಲರು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಎಸ್ಪಿಪಿ ಜಗದೀಶ್, ಈವರೆಗೆ ಯಾವುದೇ ನಾನ್ ಬೇಲೆಬಲ್ ಸೆಕ್ಷನ್ ಹಾಕಿಲ್ಲ ಎಂದು ಹೇಳಿದರು. ಹೀಗಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರೇವಣ್ಣ ಪರ ವಕೀಲರು ಹಿಂಪಡೆದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ: ರಾಹುಲ್‌ ಗಾಂಧಿ

ಹೆಚ್‌ ಡಿ ರೇವಣ್ಣ ವಿರುದ್ಧ ಎಸ್‌ಐಟಿ ಯಾವುದೇ ಅತ್ಯಾಚಾರ ಪ್ರಕರಣ ದಾಖಲು ಮಾಡಿಲ್ಲ. ಜಾಮೀನು ರಹಿತ ಪ್ರಕರಣಗಳು ದಾಖಲಿಸದ ಕಾರಣ.  ಸದ್ಯ ಬಂಧನ ಭೀತಿಯಿಂದ ಹೆಚ್‌ ಡಿ ರೇವಣ್ಣ ಪಾರಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಎಸ್‌ಐಟಿ ವಿಚಾರಣೆಗೆ ರೇವಣ್ಣ ಗೈರಾಗಿದ್ದಾರೆ.
 

Follow Us:
Download App:
  • android
  • ios