Asianet Suvarna News Asianet Suvarna News

ಮೈದಾನದಲ್ಲೇ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದಿದ್ದ ಅಭಿಮಾನಿಗೆ ಹಿಗ್ಗಾಮುಗ್ಗ ಥಳಿತ..! ವಿಡಿಯೋ ವೈರಲ್

ಪಂದ್ಯ ನಡೆಯುತ್ತಿರುವಾಗಲೇ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಗಳನ್ನು ವಂಚಿಸಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದೂ ಅಲ್ಲದೇ, ಅಪ್ಪಿಕೊಂಡಿದ್ದರು. ಆ ಬಳಿಕ ಭದ್ರತಾ ಸಿಬ್ಬಂದಿಗಳು ಆ ಕೊಹ್ಲಿಯ ಅಭಿಮಾನಿಯನ್ನು ವಶಕ್ಕೆ ಪಡೆದು ಮೈದಾನದ ಹೊರಗೆ ಕರೆದೊಯ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. 

Virat Kohli Fan Thrashed By Security For Hugging RCB Star Mid match video goes viral kvn
Author
First Published Mar 27, 2024, 4:50 PM IST

ಬೆಂಗಳೂರು(ಮಾ.27): 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಇನ್ನು ಕಳೆದ ಭಾನುವಾರ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ನಡೆಯುತ್ತಿರುವಾಗಲೇ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಗಳನ್ನು ವಂಚಿಸಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದೂ ಅಲ್ಲದೇ, ಅಪ್ಪಿಕೊಂಡಿದ್ದರು. ಆ ಬಳಿಕ ಭದ್ರತಾ ಸಿಬ್ಬಂದಿಗಳು ಆ ಕೊಹ್ಲಿಯ ಅಭಿಮಾನಿಯನ್ನು ವಶಕ್ಕೆ ಪಡೆದು ಮೈದಾನದ ಹೊರಗೆ ಕರೆದೊಯ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. 

ಇನ್ನು ಇದಾದ ಬಳಿಕ ಆ ಅಭಿಮಾನಿಯನ್ನು ಮೈದಾನದಾಚೆ ಕರೆದುಕೊಂಡು ಹೋದ ಬಳಿಕ ಭದ್ರತಾ ಸಿಬ್ಬಂದಿಗಳು ಆ ಅಭಿಮಾನಿಗೆ ಮನಬಂದಂತೆ ಥಳಿಸಿದ್ದಾರೆ. ಅದೇ ಅಭಿಮಾನಿಗೆ ಭದ್ರತಾ ಸಿಬ್ಬಂದಿ ಹೀಗೆ ಬಾರಿಸಿದ್ದಾರೆ ಎಂದು ನೆಟ್ಟಿರೊಬ್ಬರು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

ಪ್ರಣೀತ್ ಎನ್ನುವ ವ್ಯಕ್ತಿಯು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದ್ಯಾವ ರೀತಿಯ ವರ್ತನೆ ಆರ್‌ಸಿಬಿ?. ನಿಮಗೆ ಯಾರ ಮೇಲೂ ಕೈ ಮಾಡುವ ಅಧಿಕಾರ ಇಲ್ಲ. ಹಾಗೆಲ್ಲಾ ಮಾಡುವುದಾದರೇ ಕಾನೂನು ಯಾಕೆ ಹೇಳಿ?. ನೀವು ಆತನನ್ನು ಜೈಲಿಗಟ್ಟಿ ಇಲ್ಲವೇ ದಂಡ ವಸೂಲಿ ಮಾಡಿ, ಆದರೆ ಮೈದಾನದಲ್ಲೇ ಹಲ್ಲೆ ಮಾಡುವುದು ಅಂದರೇನು ಅರ್ಥ. ನೆನಪಿಟ್ಟುಕೊಳ್ಳಿ ಒಮ್ಮೆ ವಿರಾಟ್ ಕೊಹ್ಲಿ ತಂಡ ತೊರೆದರೆಂದರೆ ನಿಮ್ಮನ್ನು ಯಾರೂ ಕೇರ್ ಮಾಡುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಆರಂಭದಲ್ಲೇ ಧೋನಿಗೆ ಗಾಳ ಹಾಕಿದ CSK ಮಾಲೀಕ ಎನ್ ಶ್ರೀನಿವಾಸನ್ ಯಾರು..? ಅವರ ನೆಟ್ ವರ್ತ್ ಎಷ್ಟು ಗೊತ್ತಾ?

 ಟಿ20 ಕ್ರಿಕೆಟ್‌ನಲ್ಲಿ 100ನೇ 50+ ಸ್ಕೋರ್‌: ಕೊಹ್ಲಿ ದಾಖಲೆ

ಪಂಜಾಬ್‌ ಕಿಂಗ್ಸ್ ವಿರುದ್ಧ 77 ರನ್‌ ಸಿಡಿಸಿದ ಕೊಹ್ಲಿ ಟ20 ಕ್ರಿಕೆಟ್‌ನಲ್ಲಿ 100ನೇ 50+ ಸ್ಕೋರ್‌ ಮೈಲುಗಲ್ಲು ಸಾಧಿಸಿದರು. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬ್ಯಾಟರ್‌. ಕೊಹ್ಲಿ 377 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು. ವೆಸ್ಟ್ಇಂಡೀಸ್‌ನ ಕ್ರಿಸ್‌ ಗೇಲ್‌ 110, ಡೇವಿಡ್‌ ವಾರ್ನರ್ 109 ಬಾರಿ ಟಿ20 ಕ್ರಿಕೆಟ್‌ನಲ್ಲಿ 50+ ರನ್ ಗಳಿಸಿದ್ದಾರೆ. 81 ಬಾರಿ ಈ ಸಾಧನೆ ಮಾಡಿರುವ ರೋಹಿತ್‌ ಶರ್ಮಾ ಭಾರತೀಯರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.

ಟಿ20 ಆಟ ಮುಗಿಯಿತು ಎನ್ನುವವರಿಗೆ ನಗು ನಗುತ್ತಲೇ ಛಾಟಿ ಬೀಸಿದ ವಿರಾಟ್ ಕೊಹ್ಲಿ..!

ಬೆಂಗಳೂರಿನ ಎಂ ಚಿನ್ನಸ್ವಾಮಿಯಲ್ಲಿ 25 ಫಿಫ್ಟಿ!

ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನಲ್ಲಿ 25ನೇ ಅರ್ಧಶತಕ ಬಾರಿಸಿದರು. ಇದು ಕ್ರೀಡಾಂಗಣವೊಂದರಲ್ಲಿ ಆಟಗಾರ ಬಾರಿಸಿದ ಗರಿಷ್ಠ ಫಿಫ್ಟಿ. ವಾರ್ನರ್‌ ಹೈದರಾಬಾದ್‌ನಲ್ಲಿ 18, ವಿಲಿಯರ್ಸ್‌ ಚಿನ್ನಸ್ವಾಮಿಯಲ್ಲಿ 16, ರೋಹಿತ್‌ ಶರ್ಮಾ ಮುಂಬೈನ ವಾಂಖೇಡೆಯಲ್ಲಿ 15 ಬಾರಿ ಈ ಸಾಧನೆ ಮಾಡಿದ್ದಾರೆ.
 

Follow Us:
Download App:
  • android
  • ios