Asianet Suvarna News Asianet Suvarna News

ಲೆಜೆಂಡ್ ಕ್ರಿಕೆಟರ್ ಆದಮೇಲೆ ಕೊಹ್ಲಿ ಹೆಗಲೇರಿದೆಯಾ ಬ್ಯಾಡ್‌ಲಕ್?

ಎಂ ಎಸ್ ಧೋನಿ ಕ್ಯಾಪ್ಟನ್ಸಿಯಲ್ಲಿ 2014ರಿಂದ 16ವರೆಗೆ ಮೂರು ಐಸಿಸಿ ಟ್ರೋಫಿಯನ್ನಾದ್ರೂ ಭಾರತ ಗೆಲ್ಲಲಿಲ್ಲ. 2017ರಿಂದ 2021ರವರೆಗೆ ವಿರಾಟ್ ನಾಯಕತ್ವದಲ್ಲಿ 4 ಐಸಿಸಿ ಟೂರ್ನಿ ಆಡಿದ್ರೂ ಅಲ್ಲೂ ನಿರಾಸೆ. ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಮೂರು ಐಸಿಸಿ ಟೂರ್ನಿಯಲ್ಲೂ ವಿಫಲ. ಈ ಎಲ್ಲಾ ಟೂರ್ನಿಯಲ್ಲೂ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

Virat Kohli bad luck after he become legendry Cricketer all fans need to know kvn
Author
First Published Nov 25, 2023, 2:08 PM IST

ಬೆಂಗಳೂರು(ನ.25): ವಿರಾಟ್ ಕೊಹ್ಲಿ ಆಟಗಾರನಾಗಿ ಸಕ್ಸಸ್ ಕಂಡಷ್ಟು, ಲೆಜೆಂಡ್ ಕ್ರಿಕೆಟರ್ ಆಗಿ ಕಾಣಲಿಲ್ವಾ..? ಸಾಮಾನ್ಯ ಆಟಗಾರನಾಗಿದ್ದಾಗ ಎರಡು ಐಸಿಸಿ ಟ್ರೋಫಿ ಗೆದ್ದ ತಂಡದ ಆಟಗಾರನಾಗಿದ್ದರು. ಆದ್ರೆ ಲೆಜೆಂಡ್ ಕ್ರಿಕೆಟರ್ ಆದ್ಮೇಲೆ ಒಂದೂ ಐಸಿಸಿ ಟ್ರೋಫಿ ಹಿಡಿಯಲಿಲ್ಲ. ಬ್ಯಾಡ್ ಲಕ್ ಅವರ ಬೆನ್ನೇರಿದೆ.

ವಿರಾಟ್ ಕೊಹ್ಲಿ ಸದ್ಯ ವರ್ಲ್ಡ್ ಕ್ರಿಕೆಟ್‌ನ ನಂಬರ್ 1 ಪ್ಲೇಯರ್. ಆಟದಲ್ಲೂ, ದುಡ್ಡಿನಲ್ಲೂ, ಪಾಪ್ಯುಲಾರಿಟಿಯಲ್ಲೂ ಕಿಂಗ್ ಕೊಹ್ಲಿಯನ್ನು ಬೀಟ್ ಮಾಡೋರೇ ಇಲ್ಲ. 2008ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ವಿರಾಟ್, ಐದಾರು ವರ್ಷ ಸಾಮಾನ್ಯ ಆಟಗಾರನಾಗಿದ್ದರು. ಆದ್ರೆ 2014ರ ಬಳಿಕ ವಿರಾಟ್ ವರ್ಲ್ಡ್ ಕ್ರಿಕೆಟ್ನಲ್ಲಿ ತಮ್ಮದೇ ಆದ ಚಾಪು ಮೂಡಿಸಲು ಶುರು ಮಾಡಿದ್ರು. ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ, ರನ್ ಶಿಖರವೇರಿದ್ರು. ಅಲ್ಲಿಂದ ಲೆಜೆಂಡ್ ಕ್ರಿಕೆಟ್ ಲಿಸ್ಟ್ಗೆ ಸೇರಿದ್ರು.

ಡಿಸೆಂಬರ್ 09ರಂದು ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು; ಇಲ್ಲಿದೆ RCB ರೀಟೈನ್ ಮಾಡಿಕೊಂಡ ಡೀಟೈಲ್ಸ್

2014ರಿಂದ ವಿರಾಟ್ ಕೊಹ್ಲಿ ಕೆರಿಯರ್ ಚೇಂಜ್ ಆಯ್ತು. ಅವರು ಉತ್ತಮ ಪ್ರದರ್ಶನ ನೀಡಿದ್ರೂ ಟೀಂ ಇಂಡಿಯಾ  ಮಾತ್ರ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ. ಕಳೆದ 10 ವರ್ಷದಲ್ಲಿ 10 ಐಸಿಸಿ ಟೂರ್ನಿಗಳನ್ನಾಡಿರುವ ಭಾರತೀಯರು, ಐದು ಫೈನಲ್, ನಾಲ್ಕು ಸೆಮಿಫೈನಲ್, ಒಂದು ಟೂರ್ನಿಯಲ್ಲಿ ಲೀಗ್ನಿಂದ ಹೊರಬಿದ್ದಿದ್ದಾರೆ. ಈ ಎಲ್ಲಾ ಟೂರ್ನಿಯಲ್ಲೂ ವಿರಾಟ್, ವಿರಾಟ ರೂಪ ತಾಳಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಆದ್ರೂ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.

ಎಂ ಎಸ್ ಧೋನಿ ಕ್ಯಾಪ್ಟನ್ಸಿಯಲ್ಲಿ 2014ರಿಂದ 16ವರೆಗೆ ಮೂರು ಐಸಿಸಿ ಟ್ರೋಫಿಯನ್ನಾದ್ರೂ ಭಾರತ ಗೆಲ್ಲಲಿಲ್ಲ. 2017ರಿಂದ 2021ರವರೆಗೆ ವಿರಾಟ್ ನಾಯಕತ್ವದಲ್ಲಿ 4 ಐಸಿಸಿ ಟೂರ್ನಿ ಆಡಿದ್ರೂ ಅಲ್ಲೂ ನಿರಾಸೆ. ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಮೂರು ಐಸಿಸಿ ಟೂರ್ನಿಯಲ್ಲೂ ವಿಫಲ. ಈ ಎಲ್ಲಾ ಟೂರ್ನಿಯಲ್ಲೂ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಪಾಕ್ ವಿರುದ್ಧ ಡಬಲ್ ಶಾಕ್
 
ಭಾರತೀಯ ಕ್ರಿಕೆಟ್ ಫ್ಯಾನ್ಸ್, ಯಾರ ವಿರುದ್ಧ ಸೋತ್ರೂ ಸುಮ್ಮನಿರುತ್ತಾರೆ. ಆದ್ರೆ ಬದ್ಧವೈರಿ ಪಾಕಿಸ್ತಾನ ವಿರುದ್ಧ ಮಾತ್ರ ಗೆಲ್ಲಲೇಬೇಕು. ಆದ್ರೆ ಕೊಹ್ಲಿ ನಾಯಕತ್ವದಲ್ಲೇ ಪಾಕ್ ವಿರುದ್ಧ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಸೋತು ಕಪ್ ಗೆಲ್ಲೋದ್ರಿಂದ ಟೀಂ ಇಂಡಿಯಾ ವಂಚಿತವಾಗಿತ್ತು.

'ಅಪ್ಪ ರೂಂನಲ್ಲಿದ್ದಾರೆ, ಇನ್ನೊಂದು ತಿಂಗಳಲ್ಲಿ....': ರೋಹಿತ್ ಶರ್ಮಾ ಮಗಳು ಸಮೈರಾ ಮುದ್ದಾದ ವಿಡಿಯೋ ವೈರಲ್..!

ಇನ್ನು 2021ರ ಟಿ20 ವಿಶ್ವಕಪ್ನಲ್ಲೂ ಪಾಕ್ ವಿರುದ್ಧ ಭಾರತ ಸೋತಿತ್ತು. ವರ್ಲ್ಡ್‌ಕಪ್ ಇತಿಹಾಸದಲ್ಲೇ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋತಿದ್ದು ಇದೇ ಮೊದಲು, ಅದೇ ಕೊನೆ. ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತವನ್ನ ಸೋಲಿಸಿದ ಮೊದಲ ನಾಯಕ ಅನ್ನೋ ಅಪಕೀರ್ತಿಗೆ ಕೊಹ್ಲಿ ಒಳಗಾಗಿದ್ದಾರೆ.

ಐಪಿಎಲ್‌ನಲ್ಲೂ ಕೊಹ್ಲಿ ರನ್ ಹೊಳೆ, ಅಲ್ಲೂ ಕೈಹಿಡಿಯಲಿಲ್ಲ ಅದೃಷ್ಟ..!

IPLನಲ್ಲಿ ಆರ್ಸಿಬಿ ಪರ 2008ರಿಂದ ವಿರಾಟ್ ಕೊಹ್ಲಿ ಆಡುತ್ತಿದ್ದರೂ ಅವರಿಗೆ ಕ್ಯಾಪ್ಸನ್ಸಿ ಪಟ್ಟ ಸಿಕ್ಕಿದ್ದು, 2013ರಲ್ಲಿ. 2013ರಿಂದ 2021ರವರೆಗೆ ಅಂದ್ರೆ 9 ವರ್ಷಗಳ ಕಾಲ ಆರ್ಸಿಬಿ ನಾಯಕರಾಗಿದ್ದರು. 2016ರ ಐಪಿಎಲ್‌ನಲ್ಲಿ ಐದು ಶತಕ ಸಹಿತ 973 ರನ್ ಬಾರಿಸಿದ್ದರು. ಒಂದು ಆವೃತ್ತಿಯ ಐಪಿಎಲ್ನಲ್ಲಿ ಅತಿಹೆಚ್ಚು ರನ್ ಹೊಡೆದ ದಾಖಲೆಯನ್ನೂ ಮಾಡಿದ್ರು.

ಆರ್ಸಿಬಿ ಪರ 16 ಆವೃತ್ತಿಗಳನ್ನ ಆಡಿ, ಎಲ್ಲಾ ಸೀಸನ್ನಲ್ಲೂ ರನ್ ಹೊಡೆದಿದ್ದಾರೆ. ಕ್ಯಾಪ್ಟನ್ ಸಹ ಆಗಿದ್ದರು. ಆದ್ರೆ ಆರ್ಸಿಬಿ ಮಾತ್ರ ಇದುವರೆಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಇದಕ್ಕೆ ಹೇಳಿದ್ದು, ವಿರಾಟ್ ಕೊಹ್ಲಿ ಲೆಜೆಂಡ್ ಕ್ರಿಕೆಟರ್ ಆದ್ರೂ ಅವರಿಗೆ ಅದೃಷ್ಟವಿಲ್ಲ ಅಂತ. ಆಟಗಾರನಾಗಿ ಸಕ್ಸಸ್ ಕಂಡಷ್ಟು, ಲೆಜೆಂಡ್ ಆಗಿ, ನಾಯಕನಾಗಿ ಸಕ್ಸಸ್ ಕಾಣಲಿಲ್ಲ. ನಿಜಕ್ಕೂ ಬ್ಯಾಡ್ ಲಕ್ ಕೊಹ್ಲಿ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios