Asianet Suvarna News Asianet Suvarna News

ಹ್ಯಾಟ್ರಿಕ್ ಗೆಲುವು ಸಾಧಿಸಿದ ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಈ ಬಾರಿಯ ಐಪಿಎಲ್‌ನ ಫಸ್ಟ್ ಹಾಫ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ, ಸೆಕೆಂಡ್ ಹಾಫ್ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡ್ತಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಆ ಮೂಲಕ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಹಾಗಂತ, RCB ಪ್ಲೇ ಆಫ್ ಎಂಟ್ರಿ ಸುಲಭವಲ್ಲ. ಪವಾಡ ನಡೆದ್ರೆ, ಮಾತ್ರ ಅದು ಸಾಧ್ಯವಾಗಲಿದೆ.  

RCB qualification scenario Can Faf Du Plessis side make it to playoffs after win against Gujarat Titans kvn
Author
First Published May 6, 2024, 2:48 PM IST

ಬೆಂಗಳೂರು(ಮೇ.06) ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕಾದಾಟ ರಣರೋಚಕವಾಗಿದೆ. ಈವರೆಗೂ ಯಾವ ತಂಡವೂ ಅಧಿಕೃತವಾಗಿ ಪ್ಲೇ ಆಫ್‌ಗೆ  ಎಂಟ್ರಿ ನೀಡಿಲ್ಲ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಎಂಟ್ರಿ ಲೆಕ್ಕಚಾರ ಜೋರಾಗಿದೆ. ಬನ್ನಿ ಹಾಗಾದ್ರೆ, RCB  ಪ್ಲೇ ಆಫ್‌ ಎಂಟ್ರಿ ಲೆಕ್ಕಾಚಾರವೇನು ಅನ್ನೋದನ್ನ ನೋಡ್ಕೊಂಡು ಬರೋಣ 

ಪ್ಲೇ ಆಫ್‌ಗೆ ಎಂಟ್ರಿ ನೀಡುತ್ತಾ  ಫಾಫ್ ಡು ಪ್ಲೆಸಿಸ್ ಪಡೆ..?

ಈ ಬಾರಿಯ ಐಪಿಎಲ್‌ನ ಫಸ್ಟ್ ಹಾಫ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ, ಸೆಕೆಂಡ್ ಹಾಫ್ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡ್ತಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಆ ಮೂಲಕ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಹಾಗಂತ, RCB ಪ್ಲೇ ಆಫ್ ಎಂಟ್ರಿ ಸುಲಭವಲ್ಲ. ಪವಾಡ ನಡೆದ್ರೆ, ಮಾತ್ರ ಅದು ಸಾಧ್ಯವಾಗಲಿದೆ.  

IPL 2024 ಸನ್‌ರೈಸರ್ಸ್‌ಗೆ ಮುಂಬೈ ಟೆಸ್ಟ್‌: ಗೆದ್ದರೆ ಆರೆಂಜ್‌ ಆರ್ಮಿ ಪ್ಲೇ-ಆಫ್‌ಗೆ ಹತ್ತಿರ

ಪವಾಡ ನಡೆದ್ರೆ ಮಾತ್ರ ನಾಕೌಟ್ ಹಂತಕ್ಕೆ ಪ್ರವೇಶ ಸಾಧ್ಯ..!  

ಯೆಸ್, ಆರ್‌ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಇನ್ನೂ ಚಾನ್ಸ್ ಇದೆ. ಆದ್ರೆ, ಅದು ಉಳಿದ ತಂಡಗಳ ಫಲಿತಾಂಶಗಳ ಆಧಾರದ ಮೇಲೆ ನಿರ್ಧಾರ ವಾಗಲಿದೆ. ಲೀಗ್‌ನಲ್ಲಿ RCB ಇನ್ನು ಮೂರು ಪಂದ್ಯಗಳನ್ನ ಆಡಬೇಕಿದೆ. ಈ ಮೂರು ಪಂದ್ಯಗಳನ್ನ ಡು ಪ್ಲೆಸಿಸ್ ಪಡೆ ಗೆಲ್ಲಲೇಬೇಕಿದೆ. ಹಾಗೇನಾದ್ರೂ ಗೆದ್ರೆ, ಒಟ್ಟು 14 ಅಂಕಗಳನ್ನು ಕಲೆಹಾಕಲಿದೆ. ಪಾಯಿಂಟ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಲಿದೆ. ನೆಟ್ ರನ್ ರೇಟ್ ಸಹಾಯದಿಂದ ಪ್ಲೇ ಆಫ್ ಹಂತಕ್ಕೇರ ಬಹುದಾಗಿದೆ. 

ಆದ್ರೆ, ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 3, 4 ಮತ್ತು 5ನೇ ಸ್ಥಾನಗಳಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್ ಜೈಂಟ್ಸ್‌ ತಂಡಗಳು ಈಗಾಗಲೇ 12 ಅಂಕಗಳನ್ನು ಗಳಿಸಿವೆ. ಹೀಗಾಗಿ ಈ ಮೂರು ತಂಡಗಳ ಪಾಯಿಂಟ್ಸ್ 14 ದಾಟಬಾರದು. ಈ ಮೂರು ತಂಡಗಳಲ್ಲಿ ಒಂದು ಟೀಮ್ 14 ಅಂಕಗಳೊಂದಿಗೆ 4ನೇ ಸ್ಥಾನ ಅಲಂಕರಿಸಿದರೆ RCB ತಂಡಕ್ಕೆ ನೆಟ್ ರನ್ ರೇಟ್ ನೆರವಿನೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ.

ಮಹಿಳಾ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ: ಅಕ್ಟೋಬರ್ 6ರಂದು ಭಾರತ vs ಪಾಕ್‌ ಫೈಟ್‌

ಇದರ ನಡುವೆ 10 ಅಂಕಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂದಿನ ಪಂದ್ಯಗಳಲ್ಲಿ 2ಕ್ಕಿಂತ ಹೆಚ್ಚು ಗೆಲುವು ಕಾಣಬಾರದು. ಹಾಗೆಯೇ ಪಂಜಾಬ್ ಕಿಂಗ್ಸ್ ಮುಂದಿನ 3 ಪಂದ್ಯಗಳಲ್ಲಿ ಎರಡಲ್ಲಿ ಸೋಲು ಕಾಣಬೇಕು. ಅಂದರೆ ಪಾಯಿಂಟ್ ಟೇಬಲ್ನಲ್ಲಿ 4ನೇ ಸ್ಥಾನ ಅಲಂಕರಿಸುವ ತಂಡ ಯಾವುದೇ ಕಾರಣಕ್ಕೂ 16 ಅಂಕಗಳನ್ನು ಗಳಿಸಬಾರದು. ಒಂದು ವೇಳೆ ಅಂಕ ಪಟ್ಟಿಯಲ್ಲಿರುವ ಮೊದಲ 4 ತಂಡಗಳು 14ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ರೆ RCBಯ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ. 

ಸನ್‌ರೈಸರ್ಸ್ ಹೈದರಾಬಾದ್  ಮುಂದಿನ 4 ಪಂದ್ಯಗಳಲ್ಲಿ ಕೇವಲ 1 ಜಯ ಮಾತ್ರ ಸಾಧಿಸಬೇಕು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 3 ಮ್ಯಾಚ್‌ಗಳಲ್ಲಿ ಎರಡಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆಲ್ಲಬಾರದು. ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಂದಿನ ಪಂದ್ಯಗಳಲ್ಲಿ 2 ಸೋಲನುಭವಿಸಬೇಕು. ಹೀಗಾದ್ರೆ ಆರ್ಸಿಬಿ ತಂಡವು 14 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios