Asianet Suvarna News Asianet Suvarna News

ಇಂದು, ಎಂದೆಂದು ನಿಮ್ಮ ಜೊತೆ ನಾವಿದ್ದೇವೆ; ಟೀಂ ಇಂಡಿಯಾ ಧೈರ್ಯ ತುಂಬಿದ ಪ್ರಧಾನಿ ಮೋದಿ!

ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸೋಲಿನ ಆಘಾತದಲ್ಲಿರುವ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ಧೈರ್ಯ ತುಂಬಿದ್ದಾರೆ.

Played with great spirit brought immense pride to nation PM Modi send message to Team India ckm
Author
First Published Nov 19, 2023, 10:16 PM IST

ಅಹಮ್ಮದಾಬಾದ್(ನ.19) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ 6ನೇ ಬಾರಿಗೆ ಚಾಂಪಿಯನ್ ಆಗಿದೆ. ಭಾರತ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಗೆಲುವು ದಾಖಲಿಸಿ ಟ್ರೋಫಿ ಗೆದ್ದುಕೊಂಡಿದೆ. ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಟ್ರೋಫಿ ಕೈಚೆಲ್ಲಿದೆ. ಟೀಂ ಇಂಡಿಯಾದ ಸೋಲು ಭಾರತೀಯರಿಗೆ ನೋವು ತರಿಸಿದೆ. ಆದರೆ ಭಾರತ ತಂಡದ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ, ಇಂದು, ಎಂದೆಂದು ನಿಮ್ಮ ಜೊತೆ ನಾವಿದ್ದೇವೆ. ಅತ್ಯುತ್ತಮ ಹೋರಾಟ ನೀಡಿದ್ದೀರಿ ಎಂದು ಧೈರ್ಯ ತುಂಬಿದ್ದಾರೆ.

ಟೀಂ ಇಂಡಿಯಾ ಸೋಲಿನ ಆಘಾತ ಅನುಭವಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಧೈರ್ಯದ ನುಡಿಗಳನ್ನಾಡಿದ್ದಾರೆ. ಟೀಂ ಇಂಡಿಯಾ, ವಿಶ್ವಕಪ್ ಟೂರ್ನಿಯಲ್ಲಿ ನೀವು ತೋರಿದ ಪ್ರದರ್ಶನ, ನಿಮ್ಮ ಪ್ರತಿಭೆ, ಗುರಿ ಗಮನಸೆಳೆಯಿತು. ಅತ್ಯುತ್ತಮ ಉತ್ಸಾಹದಿಂದ ಆಡಿ ದೇಶಕ್ಕೆ ಹೆಮ್ಮೆ ತಂದಿದ್ದೀರಿ. ಇಂದು, ಎಂದೆಂಂದು ಯಾವಾಗಲು ನಿಮ್ಮೊಂದಿಗೆ ಇರುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.  

 

 

ತಿಣುಕಾಡಿ ಫೈನಲ್ ಪ್ರವೇಶಿಸಿ ಚಾಂಪಿಯನ್ ಆದ ಆಸ್ಟ್ರೇಲಿಯಾ, ಭಾರತಕ್ಕೆ 2003ರಂತೆ 23ರಲ್ಲೂ ಸೋಲು!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟೀಂ ಇಂಡಿಯಾ ಆಟಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದರೆ. ಇಡೀ ಟೂರ್ನಿಯಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿದೆ. ಗೆಲ್ಲಲಿ, ಸೋಲಲಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಮುಂದಿನ ಬಾರಿ ಖಂಡಿತ ನಾವು ಗೆಲ್ಲುತ್ತೇವೆ. ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

 

 

ಟೀಂ ಇಂಡಿಯಾ ಪ್ರದರ್ಶನದ ಕುರಿತು ಮಾಜಿ ಕ್ರಿಕೆಟಿಗ, ಎನ್‌ಸಿಎ ಚೇರ್ಮೆನ್ ವಿವಿಎಸ್ ಲಕ್ಷ್ಮಣ್ ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಫಲಿತಾಂಶದಿಂದ ಹಾರ್ಟ್ ಬ್ರೇಕ್ ಆಗಿದೆ. ಆದರೆ ರೋಹಿತ್ ಶರ್ಮಾ ಸೈನ್ಯ ತಲೆಬಾಗಿಸುವ ಅಗತ್ಯವಿಲ್ಲ. ತಲೆ ಎತ್ತಿ ನಿಲ್ಲುವ ಪ್ರದರ್ಶನ ನೀಡಿದ್ದೀರಿ. ಒಂದು ಸೋಲಿನಿಂದ ತಂಡವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ರೋಹಿತ್ ನಿರಾಶೆಗೊಂಡಿದ್ದಾನೆ. ಆದರೆ ಕಳೆದ 7 ವಾರ ರೋಹಿತ್ ಹಾಗೂ ಬಾಯ್ಸ್ ಹೇಗೆ ಆಡಿದ್ದಾರೆ ಅನ್ನೋದು ಅತೀವ ಹೆಮ್ಮೆ ಇದೆ. ಗೆದ್ದ ಆಸ್ಟ್ರೇಲಿಯಾಗೆ ಅಭಿನಂದನೆಗಳು ಎಂದು ಲಕ್ಷ್ಮಣ್ ಹೇಳಿದ್ದಾರೆ.  

ವಿಶ್ವಕಪ್‌ನಲ್ಲಿ ಭಾರತದ ಸೋಲಿನ ಬೆನ್ನಲ್ಲೇ 'ತಂಡದಲ್ಲಿ ಮೀಸಲಾತಿ ಬೇಕು..' ಎಂದ ಚೇತನ್‌ ಅಹಿಂಸಾ!
 

Follow Us:
Download App:
  • android
  • ios