Asianet Suvarna News Asianet Suvarna News

ಯಶಸ್ವಿ ಜೈಸ್ವಾಲ್ ರಾಯಲ್‌ ಆಟಕ್ಕೆ ಮುಂಬೈ ಇಂಡಿಯನ್ಸ್‌ ಕಂಗಾಲು

ಮೊದಲು ಬ್ಯಾಟ್‌ ಮಾಡಿದ ಮುಂಬೈ, ತಿಲಕ್‌ ವರ್ಮಾ ಹಾಗೂ ನೇಹಲ್‌ ವಧೇರಾ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 179 ರನ್‌ ಕಲೆಹಾಕಿತು. ಗುರಿ ದೊಡ್ಡದಿದ್ದರೂ ರಾಜಸ್ಥಾನದ ಅಬ್ಬರದ ಮುಂದೆ ಈ ಮೊತ್ತ ತುಂಬಾ ಸಣ್ಣದಾಗಿ ಕಂಡುಬಂತು. ತಂಡ 18.4 ಓವರಲ್ಲೇ ಗೆಲುವಿನ ದಡ ಸೇರಿತು.

IPL 2024 Yashasvi Jaiswal Sandeep Sharma Guide RR To Huge Victory Over Mumbai Indians kvn
Author
First Published Apr 23, 2024, 6:18 AM IST

ಜೈಪುರ: ಈ ಬಾರಿ ಐಪಿಎಲ್‌ನಲ್ಲಿ ಮಾಜಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತಂಡದ ಓಟಕ್ಕೆ ಬ್ರೇಕ್‌ ಹಾಕಲು ಸದ್ಯಕ್ಕೆ ಯಾವ ತಂಡದಿಂದಲೂ ಕಷ್ಟಸಾಧ್ಯ ಎಂಬಂತಾಗಿದೆ. ತನ್ನ ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಮತ್ತೆ ಅಬ್ಬರಿಸಿದ ರಾಜಸ್ಥಾನ, ಸೋಮವಾರ ಮುಂಬೈ ಇಂಡಿಯನ್ಸ್‌ ವಿರುದ್ಧ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್‌ರ ಸ್ಫೋಟಕ ಆಟದ ಮುಂದೆ ನಲುಗಿದ ಮುಂಬೈ ಟೂರ್ನಿಯಲ್ಲಿ 5ನೇ ಸೋಲನುಭವಿಸಿದರೆ, ರಾಜಸ್ಥಾನ 8ರಲ್ಲಿ 7 ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಇನ್ನಷ್ಟು ಹತ್ತಿರವಾಗಿದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ, ತಿಲಕ್‌ ವರ್ಮಾ ಹಾಗೂ ನೇಹಲ್‌ ವಧೇರಾ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 179 ರನ್‌ ಕಲೆಹಾಕಿತು. ಗುರಿ ದೊಡ್ಡದಿದ್ದರೂ ರಾಜಸ್ಥಾನದ ಅಬ್ಬರದ ಮುಂದೆ ಈ ಮೊತ್ತ ತುಂಬಾ ಸಣ್ಣದಾಗಿ ಕಂಡುಬಂತು. ತಂಡ 18.4 ಓವರಲ್ಲೇ ಗೆಲುವಿನ ದಡ ಸೇರಿತು.

ಸಂದೀಪ್ ಶರ್ಮಾಗೆ 5 ವಿಕೆಟ್ ಗೊಂಚಲು; ರಾಜಸ್ಥಾನಕ್ಕೆ ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್

ಪವರ್‌-ಪ್ಲೇನಲ್ಲಿ 61 ರನ್‌ ಸೇರಿಸಿದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್‌ ಬಟ್ಲರ್‌ ಮೊದಲ ವಿಕೆಟ್‌ಗೆ 74 ರನ್‌ ಕಲೆಹಾಕಿದರು. 35 ರನ್ ಗಳಿಸಿದ್ದ ಬಟ್ಲರ್‌ಗೆ ಚಾವ್ಲಾ ಪೆವಿಲಿಯನ್‌ ಹಾದಿ ತೋರಿದ ಬಳಿಕ ಜೈಸ್ವಾಲ್‌ಗೆ ನಾಯಕ ಸಂಜು ಸ್ಯಾಮ್ಸನ್‌ ಜೊತೆಯಾದರು. ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಜೈಸ್ವಾಲ್‌60 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್‌ನೊಂದಿಗೆ 104 ರನ್‌ ಸಿಡಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಸ್ಯಾಮ್ಸನ್‌ ಔಟಾಗದೆ 38 ರನ್‌ ಗಳಿಸಿದರು.

ವರ್ಮಾ ಫಿಫ್ಟಿ: ಇದಕ್ಕೂ ಮುನ್ನ ಮುಂಬೈನ ತಾರಾ ಬ್ಯಾಟರ್‌ಗಳು ಕೈಕೊಟ್ಟರು. ರೋಹಿತ್‌ 6, ಸೂರ್ಯಕುಮಾರ್‌ 10, ಇಶಾನ್‌ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ಯುವ ಪ್ರತಿಭೆಗಳಾದ ತಿಲಕ್‌ ವರ್ಮಾ ಹಾಗೂ ನೇಹಲ್‌ ವಧೇರಾ ತಂಡದ ಕೈ ಬಿಡಲಿಲ್ಲ. ತಿಲಕ್‌ 45 ಎಸೆತಗಳಲ್ಲಿ 65 ರನ್‌ ಚಚ್ಚಿದರೆ, 24 ಎಸೆತಗಳಲ್ಲಿ 49 ರನ್‌ ಸಿಡಿಸಿದ ನೇಹಲ್‌ ವಧೇರಾ ಅರ್ಧಶತಕದ ಅಂಚಿನಲ್ಲಿ ಎಡವಿದರು. ಸಂದೀಪ್‌ ಶರ್ಮಾ 18 ರನ್‌ಗೆ 5 ವಿಕೆಟ್‌ ಗೊಂಚಲು ಪಡೆದರು.

ICC T20 World Cup 2024: ಭಾರತ ಸಂಭಾವ್ಯ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಸ್ಕೋರ್‌: ಮುಂಬೈ 20 ಓವರಲ್ಲಿ 179/9 (ತಿಲಕ್‌ 65, ನೇಹಲ್‌ 49, ಸಂದೀಪ್‌ 5-18), ರಾಜಸ್ಥಾನ 18.4 ಓವರಲ್ಲಿ 183/1 (ಜೈಸ್ವಾಲ್‌ 104, ಸ್ಯಾಮ್ಸನ್‌ 38*, ಚಾವ್ಲಾ 1-33)

ಮಳೆಗೆ 40 ನಿಮಿಷಸ್ಥಗಿತಗೊಂಡ ಪಂದ್ಯ

ಈ ಬಾರಿ ಐಪಿಎಲ್‌ನಲ್ಲಿ ಮೊದಲ ಬಾರಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ರಾಜಸ್ಥಾನ ತಂಡದ ಬ್ಯಾಟಿಂಗ್‌ ವೇಳೆ 6 ಓವರ್ ಮುಕ್ತಾಯಗೊಂಡಾಗ ಮಳೆ ಸುರಿಯಲಾರಂಭಿಸಿತು. ಸುಮಾರು 10.05ರ ಸುಮಾರಿಗೆ ಆರಂಭಗೊಂಡ ಮಳೆ 10.30ರ ವರೆಗೂ ಸುರಿಯಿತು. ಹೀಗಾಗಿ ಸುಮಾರು 40 ನಿಮಿಷಗಳ ಕಾಲ ಸ್ಥಗಿತಗೊಂಡ ಪಂದ್ಯ 10.45ರ ವೇಳೆಗೆ ಮತ್ತೆ ಆರಂಭಿಸಲಾಯಿತು.

ಐಪಿಎಲ್‌ನಲ್ಲಿ ಚಹಲ್ 200 ವಿಕೆಟ್‌: ಹೊಸ ಮೈಲಿಗಲ್ಲು

ಜೈಪುರ: ಐಪಿಎಲ್‌ ಇತಿಹಾಸದಲ್ಲೇ 200 ವಿಕೆಟ್‌ ಕಿತ್ತ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ರಾಯಲ್ಸ್‌ನ ಯಜುವೇಂದ್ರ ಚಹಲ್‌ ಪಾತ್ರರಾಗಿದ್ದಾರೆ. ಸೋಮವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಪಂದ್ಯದಲ್ಲಿ ಮೊಹಮದ್‌ ನಬಿ ವಿಕೆಟ್‌ ಪಡೆಯುವ ಮೂಲಕ ಚಹಲ್‌ ಈ ಮೈಲಿಗಲ್ಲು ಸಾಧಿಸಿದರು. ಚಹಲ್‌ ಐಪಿಎಲ್‌ನಲ್ಲಿ ಒಟ್ಟು 153 ಪಂದ್ಯಗಳನ್ನಾಡಿದ್ದಾರೆ. ಅತಿ ಹೆಚ್ಚು ವಿಕೆಟ್‌ ಕಿತ್ತವರ ಪಟ್ಟಿಯಲ್ಲಿ ಡ್ವೇಯ್ನ್‌ ಬ್ರಾವೋ(183), ಪಿಯೂಶ್‌ ಚಾವ್ಲಾ(181), ಭುವನೇಶ್ವರ್‌ ಕುಮಾರ್‌(174) ಹಾಗೂ ಅಮಿತ್‌ ಮಿಶ್ರಾ(173) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.
 

Follow Us:
Download App:
  • android
  • ios