Asianet Suvarna News Asianet Suvarna News

IPL 2024 ಇನ್ನಿಂಗ್ಸ್ ನಡುವೆ ಗಂಭೀರ್ ಆಲಿಂಗಿಸಿ ಮಾತನಾಡಿದ ಕೊಹ್ಲಿ, ಗೊಂದಲದಲ್ಲಿ ಫ್ಯಾನ್ಸ್!

ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದ ರೋಚಕತೆ ಹೆಚ್ಚಲು ಮುಖ್ಯ ಕಾರಣ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ರೈವಲ್ರಿ. ಪಂದ್ಯಕ್ಕೂ ಮೊದಲು ಹಳೇ ಕಿತ್ತಾಟ, ಮುಸುಕಿನ ಗುದ್ದಾಟವೇ ಭಾರಿ ಸದ್ದು ಮಾಡಿತ್ತು. ಆದರೆ ಪಂದ್ಯದ ನಡುವೆ ಕೊಹ್ಲಿ ಹಾಗೂ ಗಂಭೀರ್ ಆಲಿಂಗಿಸಿಕೊಂಡು ನಗು ನಗುತ್ತಾ ಮಾತನಾಡಿದ್ದಾರೆ. ಈ ನಡೆ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ.
 

IPL 2024 Virat Kohli and Gautam Gamhir hugged each other during RCB vs KKR Chinnaswamy ckm
Author
First Published Mar 29, 2024, 9:24 PM IST

ಬೆಂಗಳೂರು(ಮಾ.29) ಐಪಿಎಲ್ ಟೂರ್ನಿಯಲ್ಲಿ ಹಲವು ರೋಚಕ ಸನ್ನಿವೇಶಗಳಿವೆ. ಈ ಪೈಕಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ವೈರತ್ವ ಭಾರಿ ಸಂಚಲನ ಸೃಷ್ಟಿಸಿದೆ. ಐಪಿಎಲ್ ಟೂರ್ನಿಯ ಇವರಿಬ್ಬರ ಮುಖಾಮುಖಿಯಲ್ಲಿ ಕಿತ್ತಾಟ, ಸ್ಲೆಡ್ಜಿಂಗ್ ನಡೆದಿದ್ದೇ ಹೆಚ್ಚು. ಹಳೇ ಘಟನೆಗಳ ನೆನೆಪಿಸಿಕೊಂಡು ಅಭಿಮಾನಿಗಳು ಇಂದಿನ ಪಂದ್ಯಕ್ಕೆ ಸಜ್ಜಾಗಿದ್ದರು. ಪಂದ್ಯ ಆರಂಭಕ್ಕೂ ಮೊದಲು ಕೊಹ್ಲಿ ಹಾಗೂ ಗಂಭೀರ್ ನಡುವಿನ ಕಿತ್ತಾಗಳೇ ಸದ್ದು ಮಾಡಿತ್ತು. ಆದರೆ ಇನ್ನಿಂಗ್ಸ್ ನಡುವೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಆಲಿಂಗಿಸಿಕೊಂಡು ನಗು ನಗುತ್ತಾ ಮಾತನಾಡಿದ್ದಾರೆ. ಈ ನಡೆ ಅಭಿಮಾನಿಗಳನ್ನು ಕೊಂದಲಕ್ಕೆ ಸಿಲುಕಿಸಿದೆ.

ಕೆಕೆಆರ್ ವಿರುದ್ದ ಭರ್ಜರಿ ಗೆಲವು ದಾಖಲಿಸಿ ಗಂಭೀರ್‌ಗೆ ತಿರುಗೇಟು ನೀಡಲು ಅಭಿಮಾನಿಗಳು ಸಜ್ಜಾಗಿದ್ದರು. ಇತ್ತ ಕೆಕೆಆರ್ ಅಭಿಮಾನಿಗಳು, ತವರಿನಲ್ಲೇ ಆರ್‌ಸಿಬಿ ಸೋಲಿಸಲು ಸಜ್ಜಾಗಿದ್ದರು. ಇದರ ನಡುವೆ ಕೊಹ್ಲಿ ಹಾಗೂ ಗಂಭೀರ್ ಈ ಪಂದ್ಯದಲ್ಲೂ ಸ್ಲೆಡ್ಜಿಂಗ್ ಮಾಡಿಕೊಳ್ಳಲಿದ್ದಾರೆ, ಮತ್ತೊಂದು ರೋಚಕ ಪಂದ್ಯ ಇದಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಸಿದ್ದರು. ಆದರೆ ಅಭಿಮಾನಿಗಳ ಲೆಕ್ಕಾಚಾರ ಉಲ್ಟಾ ಆಗಿದೆ. ಟೈಮ್ ಔಟ್ ನಡುವೆ ಕೊಹ್ಲಿ ಹಾಗೂ ಗಂಭೀರ್ ಆಲಿಂಗಿಸಿ ಮಾತನಾಡಿದ್ದಾರೆ.

ಈ ನಡೆಯಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಮತ್ತೊಂದು ರೋಚಕ ಹೋರಾಟ, ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟಕ್ಕೆ ವೇದಿಕೆ ಸಜ್ಜಾಗಿತ್ತು.ಕೊಹ್ಲಿ ಗಂಭೀರ್ ಹಗ್ ಮಾಡಿ ಮಾತನಾಡಿರುವ ಕಾರಣ ನಮ್ಮ ಸ್ಲೆಡ್ಜಿಂಗ್ ವೇದಿಕೆ ಕುಸಿದು ಬಿದ್ದಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. 

 

 

ನಾವೆಲ್ಲಾ ಮತ್ತೊಂದು ಹೋರಾಟಕ್ಕೆ ರೆಡಿಯಾಗಿದ್ದೇವು. ಆದರೆ ಕೊಹ್ಲಿ ಹಾಗೂ ಗಂಭೀರ್ ಈ ಹೋರಾಟಕ್ಕೆ ತಣ್ಣೀರೆರೆದಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನಾವು ಈ ಗೂಗ್ಲಿಯನ್ನು ಊಹಿಸಿರಲಿಲ್ಲ. ಯುದ್ಧದ ನಿರೀಕ್ಷೆಯಲ್ಲಿದ್ದೇವು ಎಂದು ಕೆಲ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

 

 

ಕೊಹ್ಲಿ ಹಾಗೂ ಗಂಭೀರ್ ಮೈದಾನದಲ್ಲಿ ಕಿತ್ತಾಡಿಕೊಂಡು ಬಾರಿ ಸುದ್ದಿಯಾಗಿದ್ದರು. ಇದಾದ ಬಳಿಕ ಹಲವು ಬಾರಿ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡ ಮೆಂಟರ್ ಆಗಿದ್ದ ವೇಳೆಯೂ ಗಂಭೀರ್, ಆರ್‌ಸಿಬಿ ಅಭಿಮಾನಿಗಳ ವಿರುದ್ಧ ಹರಿಹಾಯ್ದಿದ್ದರು. ಇದು ಬೆಂಗಳೂರು ಅಭಿಮಾನಿಗಳನ್ನು ಕೆರಳಿಸಿತ್ತು. ಈ ರೀತಿಯ ಹಲವು ಕಿತ್ತಾಟಗಳಿಂದಲೇ ಕೊಹ್ಲಿ ಹಾಗೂ ಗಂಭೀರ್ ರೈವಲ್ರಿ ಹೆಚ್ಚಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ಕೊಹ್ಲಿ-ಗಂಭೀರ್ ನಡೆ ಬಿಸಿ ವಾತಾವರಣವನ್ನು ತಿಳಿಗೊಳಿಸಿದೆ.

 

Follow Us:
Download App:
  • android
  • ios