Asianet Suvarna News Asianet Suvarna News

ಭಾರತದ 4 ವಿಕೆಟ್ ಪತನ, 1.3ಲಕ್ಷ ಅಭಿಮಾನಿಗಳಿಂದ ಹನುಮಾನ್ ಚಾಲೀಸ ಪಠಣ ವಿಡಿಯೋ ವೈರಲ್!

ಕಳೆದ 10 ಪಂದ್ಯದಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ ಫೈನಲ್ ಪಂದ್ಯದ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಆರಂಭದಲ್ಲೇ 4 ವಿಕೆಟ್ ಪತನಗೊಳ್ಳುತ್ತಿದ್ದಂತೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1.3ಲಕ್ಷ ಅಭಿಮಾನಿಗಳು ಹನುಮಾನ್ ಚಾಲೀಸ ಪಠಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ICC World Cup 2023 Fans chant Hanuman Chalisa during India vs Australia Final ckm
Author
First Published Nov 19, 2023, 4:45 PM IST

ಅಹಮ್ಮದಾಬಾದ್(ನ.19) ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ವಿಕೆಟ್ ಕಳದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಯಕ ರೋಹಿತ್ ಶರ್ಮಾ, ಶುಬಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಸೇರಿ ನಾಲ್ವರು ಪೆವಿಲಿಯನ್ ಸೇರಿದ್ದಾರೆ. ಟೀಂ ಇಂಡಿಯ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಇದರ ನಡುವೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿನ 1.3 ಲಕ್ಷ ಅಭಿಮಾನಿಗಳು ಹನುಮಾನ್ ಚಾಲೀಸ್ ಪಠಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಕಿಕ್ಕಿರಿದು ತುಂಬಿದೆ. ಬರೋಬ್ಬರಿ 1.3 ಲಕ್ಷ ಅಭಿಮಾನಿಗಳು ಪಂದ್ಯ ವೀಕ್ಷಿಸುತ್ತಿದ್ದಾರೆ. ಸಿಬ್ಬಂದಿಗಳು, ಭದ್ರತಾ ಪಡೆ ಎಲ್ಲರೂ ಸೇರಿದರೆ 1.5 ಲಕ್ಷ ಮಂದಿ. ಮಹತ್ವದ ಪಂದ್ಯದಲ್ಲಿ ಭಾರತ ತಂಡ ಗೆಲುವಿಗೆ ಕ್ರೀಡಾಂಗಣದಲ್ಲಿ ಅಭಿಮಮಾನಿಗಳು ಒಕ್ಕೊರಲಿನಿಂದ ಹನುಮಾನ್ ಚಾಲೀಸ ಮಂತ್ರ ಪಠಿಸಿದ್ದಾರೆ.

7,546 ದಿನದ ಬಳಿಕ ಅಂಕಿ ಸಂಖ್ಯೆ ಜೊತೆ ಗೂಗಲ್ ಹೇಳುತ್ತಿದೆ ಭಾರತಕ್ಕೆ ಟ್ರೋಫಿ!

ಅಭಿಮಾನಿಗಳು ಹನುಮಾನ ಚಾಲೀಸ್ ಪಠಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇತ್ತ ಪ್ರತಿ ಬೌಂಡರಿ ಸಿಕ್ಸರ್ ವೇಳೆಯೂ ಘೋಷಣೆಗಳು ಜೋರಾಗಿದೆ. ವಂದೇ ಮಾತರಂ ಘೋಷಣೆಗಳು ಮೊಳಗಿದೆ. ಕಿಕ್ಕಿರಿದು ತುಂಬಿರುವ ಅಭಿಮಾನಿಗಳನ್ನು ಸೈಲೆಂಟ್ ಮಾಡುವುದೇ ನಮ್ಮ ಗುರಿ ಎಂದು ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದರು. ಈ ಮಾತಿನಂತೆ ಆಸ್ಟ್ರೇಲಿಯಾ ಭಾರತ 4 ವಿಕೆಟ್ ಕಬಳಿಸಿ ಅಭಿಮಾನಿಗಳ ಟೆನ್ಶನ್ ಹೆಚ್ಚಿಸಿದ್ದಾರೆ.

 

 

ತಿಣುಕಾಡಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ, ಮಹತ್ವದ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡುತ್ತಿದೆ. ಇದೀಗ ಭಾರತ ಕನಿಷ್ಠ 270 ರನ್ ಸಿಡಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಆಸ್ಟ್ರೇಲಿಯಾ ವೇಗಿಗಳಿಗೆ ಬೀಳುತ್ತಿದೆ ಎಂದರೆ ಮೊಹಮ್ಮದ್ ಶಮಿ, ಬುಮ್ರಾ ಹಾಗೂ ಸಿರಾಜ್ ಬೆಂಕಿ ಬೌಲಿಂಗ್ ಆಸೀಸ್‌ಗೆ ಕಷ್ಟವಾಗಲಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

WORLD CUP 2023 FINAL: ಏಕಕಾಲದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯಿಂದ ರಾಷ್ಟ್ರಗೀತೆ ಗಾಯನ!

ನಾಯಕ ರೋಹಿತ್ ಶರ್ಮಾ ದಿಟ್ಟ ಹೋರಾಟ ನೀಡಿದರೂ ಬೃಹತ್ ಇನ್ನಿಂಗ್ಸ್ ಬರಲಿಲ್ಲ. 47 ರನ್ ಸಿಡಿಸಿ ಔಟಾದರು. ಶುಬಮನ್ ಗಿಲ್ ಆರಂಭದಲ್ಲೇ ವಿಕೆಟ್ ಕೈಚೆಲ್ಲಿ ನಿರಾಸೆ ಅನುಭವಿಸಿದರು. ಶ್ರೇಯಸ್ ಅಯ್ಯರ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ 54 ರನ್ ಸಿಡಿಸಿದರೂ ಭಾರತದ ಆತಂಕ ದೂರವಾಗಲಿಲ್ಲ. ಕೊಹ್ಲಿ ವಿಕೆಟ್ ಪತನ ಭೀತಿ ಹೆಚ್ಚಿಸಿದೆ. 
 

Follow Us:
Download App:
  • android
  • ios