Asianet Suvarna News Asianet Suvarna News

ನಾಯಕನೇ ನಾಯಕಿಯಾಗೂ ಅಭಿನಯಿಸಿದ ಈ ಚಿತ್ರ ಬಾಲಿವುಡ್‌ನ ಮೊದಲ ಬಾಕ್ಸಾಫೀಸ್ ಹಿಟ್!

ಈ ಚಿತ್ರದಲ್ಲಿ ನಾಯಕ ಪಾತ್ರಧಾರಿಯೇ ನಾಯಕಿಯ ವೇಷ ಧರಿಸಿ ನಟಿಸಿದ್ದರು. ರಾಮ ಹಾಗೂ ಸೀತೆ ಇಬ್ಬರ ಪಾತ್ರವನ್ನೂ ಒಬ್ಬರೇ ನಿರ್ವಹಿಸಿದ್ದರು. ಥಿಯೇಟರ್‌ನಲ್ಲಿ ಬರೋಬ್ಬರಿ 23 ವಾರಗಳ ಕಾಲ ಓಡಿದ ಈ ಚಿತ್ರ ಬಾಲಿವುಡ್‌ನ ಮೊದಲ ಬ್ಲಾಕ್‌ಬಸ್ಟರ್.

Indias first box office hit had same actor play hero-heroine ran for 23 weeks skr
Author
First Published Apr 16, 2024, 1:22 PM IST

ಭಾರತೀಯ ಚಲನಚಿತ್ರಗಳು 1913ರಲ್ಲಿ ರಾಜಾ ಹರಿಶ್ಚಂದ್ರನೊಂದಿಗೆ ಪ್ರಾರಂಭವಾದವು ಮತ್ತು ಈ ಚಲನಚಿತ್ರಗಳ ವಾಣಿಜ್ಯ ಅಂಶವು ಮೊದಲ ಕೆಲವು ವರ್ಷಗಳವರೆಗೆ ಯಾರಿಗೂ ತಿಳಿದಿರಲಿಲ್ಲ. ಆದರೆ, ಇದೇ ಚಿತ್ರ ನಿರ್ಮಿಸಿದ ದಾದಾಸಾಹೇಬ್ ಫಾಲ್ಕೆ ಅವರು 1917 ರಲ್ಲಿ ತಮ್ಮ ಎರಡನೇ ಚಲನಚಿತ್ರ 'ಲಂಕಾ ದಹನ್' ನಿರ್ಮಿಸುವಾಗ ಅವರಿಗೆ ಚಿತ್ರದ ವಾಣಿಜ್ಯ ಲೆಕ್ಕಾಚಾರಗಳು ಒಂದಿಷ್ಟು ಅರಿವಿಗೆ ಬಂದಿದ್ದವು. ಅದರ ಪರಿಣಾಮ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲ ಬರೋಬ್ಬರಿ 23 ವಾರಗಳ ಕಾಲ ಓಡಿತು ಮತ್ತು ಬಾಲಿವುಡ್‌ನ ಮೊದಲ ಬಾಕ್ಸಾಫೀಸ್ ಹಿಟ್ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಯಿತು.

100 ದಿನಗಳ ಕಾಲ ಈ ಚಿತ್ರ ಓಡಿತ್ತು. ಈ ಓಟಿಟಿ ಯುಗದಲ್ಲಿ ಕೇವಲ 10 ದಿನ, 25 ದಿನ ಥಿಯೇಟರ್‌ನಲ್ಲಿ ಚಿತ್ರ ಓಡುವುದೇ ಯಶಸ್ಸು ಎಂದು ನೋಡುತ್ತಿರುವಾಗ 25 ವಾರಗಳ ಕಾಲ ಚಿತ್ರ ಓಡುವುದೆಂದರೆ ಸುಮ್ಮನೆಯಲ್ಲ. 

ಈ ಚಿತ್ರದ ಒಂದು ವಿಶೇಷವೆಂದರೆ ಇದರಲ್ಲಿ ರಾಮನ ಪಾತ್ರಧಾರಿಯಾಗಿ ಅಭಿನಯಿಸಿದ ನಟನೇ ಸೀತೆಯ ಪಾತ್ರಧಾರಿಯಂತೆಯೂ ವೇಷಭೂಷಣ ಧರಿಸಿ ನಟಿಸಿದ್ದು!


 

ಲಂಕಾದಹನ್
ರಾಮಾಯಣದ ಸಂಚಿಕೆಯನ್ನು ಆಧರಿಸಿದ ಚಲನಚಿತ್ರವು ದೊಡ್ಡ ವಾಣಿಜ್ಯ ಯಶಸ್ಸನ್ನು ಗಳಿಸಿತು. ಚಿತ್ರಮಂದಿರಗಳಲ್ಲಿ 23 ವಾರಗಳ ಕಾಲ ಓಡಿತು, 100 ದಿನಗಳಿಗಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಕಳೆದ ಮೊದಲ ಭಾರತೀಯ ಚಲನಚಿತ್ರವಾಯಿತು. ಆದರೆ, ಲಂಕಾ ದಹನ್ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ನಿಜವಾದ ದಾಖಲೆ ಇಲ್ಲ. ಆದಾಗ್ಯೂ, ಚಿತ್ರದ ಪ್ರಭಾವವು ದೊಡ್ಡದಾಗಿತ್ತು. ಆ ಕಾಲದ ವರದಿಗಳು ಬಾಂಬೆಯಲ್ಲಿ ಪ್ರದರ್ಶನದ ಸಮಯದಲ್ಲಿ, ಶ್ರೀರಾಮನು ತೆರೆಗೆ ಬಂದಾಗ ವೀಕ್ಷಕರು ತಮ್ಮ ಬೂಟುಗಳನ್ನು ತೆಗೆಯುತ್ತಾರೆ ಎಂದು ಹೇಳುತ್ತದೆ. 
ಎಲ್ಲಾ ಶೋಗಳು ಸೋಲ್ಡ್ ಔಟ್ ಆದ ಕಾರಣ ಟಿಕೆಟ್ ಗಾಗಿ ಟಿಕೆಟ್ ಕೌಂಟರ್ ಗಳಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ಚಿತ್ರ ಇತಿಹಾಸಕಾರ ಅಮೃತ್ ಗಂಗರ್ ಹೇಳಿದ್ದಾರೆ. ಟಿಕೆಟ್ ಕೌಂಟರ್‌ನಿಂದ ನಾಣ್ಯಗಳನ್ನು ಥಿಯೇಟರ್‌ನಿಂದ ಸಾಗಿಸಲು ಎತ್ತಿನ ಗಾಡಿಗಳು ಬೇಕಾಗಿದ್ದವು!

ಭಾರತದ ಅತ್ಯಂತ ಶ್ರೀಮಂತ ಮುಸ್ಲಿಂ ಮಹಿಳೆ ಈಕೆ; 27,773 ಕೋಟಿ ಮೌಲ್ಯದ ಕಂಪನಿ ಒಡತಿ!
 

ಒಬ್ಬರೇ ನಟ ರಾಮ ಮತ್ತು ಸೀತೆಯಾಗಿದ್ದೇಕೆ?
ನಟನೆಯನ್ನು ಗೌರವಾನ್ವಿತ ವೃತ್ತಿ ಎಂದು ಪರಿಗಣಿಸದ ಯುಗದಲ್ಲಿ ಲಂಕಾ ದಹನ್ ನಿರ್ಮಿಸಲಾಯಿತು. ಹೆಚ್ಚಿನ ಪ್ರದರ್ಶನ ಕಲೆಗಳನ್ನು ನಾಗರಿಕ ಜನರ ಮಾನದಂಡಗಳ ಕೆಳಗೆ ಪರಿಗಣಿಸಲಾಗಿತ್ತು. ಆದ್ದರಿಂದ ಉತ್ತಮ ಕುಟುಂಬದ ಮಹಿಳೆಯರಿಗೆ ಆಗ ನಟಿಸಲು ಅವಕಾಶವಿರಲಿಲ್ಲ. ಮತ್ತು ಲಂಕಾ ದಹನ್ ಧಾರ್ಮಿಕ ಚಿತ್ರವಾಗಿರುವುದರಿಂದ, ಸೀತೆಯ ಪಾತ್ರಕ್ಕೆ ವೃತ್ತಿಪರ ನಟಿಯನ್ನು ಪಡೆದರೆ ವೀಕ್ಷಕರು ಸೀತೆಯ ಪಾವಿತ್ರ್ಯ ಹಾಳಾಯಿತು ಎಂದು ಗಲಾಟೆ ಎಬ್ಬಿಸುವ ಸಂಭವವಿತ್ತು. ಹಾಗಾಗಿ ಕೊನೆಯಲ್ಲಿ, ಅಣ್ಣಾ ಸಾಳುಂಕೆ ಈ ಚಿತ್ರದಲ್ಲಿ ರಾಮ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದರು, ಭಾರತೀಯ ಚಿತ್ರರಂಗಕ್ಕೆ ಮೊದಲ ದ್ವಿಪಾತ್ರವನ್ನು ನೀಡಿದರು.

Follow Us:
Download App:
  • android
  • ios