Asianet Suvarna News Asianet Suvarna News

ಕೂಲ್ ಬೆಂಗಳೂರಲ್ಲಿ ಎಸಿ ಬಳಸಬೇಕಾಗಿ ಬರ್ಬೋದು ಅಂದ್ಕೊಂಡೇ ಇರ್ಲಿಲ್ಲ, ಮಹಿಳೆಯ ಪೋಸ್ಟ್ ವೈರಲ್

ಬೆಂಗಳೂರು ಅಂದ್ರೆ ಕೂಲ್‌ ಕೂಲ್‌ ವೆದರ್‌..ಒಂದು ಕಾಲದಲ್ಲಿ ಸಿಲಿಕಾನ್‌ ಸಿಟಿ ಇಲ್ಲಿನ ತಂಪಾದ ವಾತಾವರಣಕ್ಕೆ ಹೆಸರುವಾಸಿಯಾಗಿತ್ತು. 'ನೋ ಸೀಲಿಂಗ್ ಫ್ಯಾನ್' ನಗರ ಎಂದೇ ಪ್ರಸಿದ್ಧವಾಗಿತ್ತು. ಆದ್ರೆ ಈಗ ಸಿಕ್ಕಾಪಟ್ಟೆ ಬಿಸಿಲಿನಿಂದ ಬೆಂಗಳೂರಿನ ಸ್ಥಿತಿ ಶೋಚನೀಯವಾಗಿದೆ. ಈ ಬಗ್ಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿರೋ ಪೋಸ್ಟ್ ವೈರಲ್ ಆಗಿದೆ.

Never Thought I Would Need An AC, Womans Post On Bengalurus Harsh Summer Strikes A Chord Vin
Author
First Published May 3, 2024, 10:01 AM IST

ಬೆಂಗಳೂರು ಅಂದ್ರೆ ಕೂಲ್‌ ಕೂಲ್‌ ವೆದರ್‌..ಒಂದು ಕಾಲದಲ್ಲಿ ಸಿಲಿಕಾನ್‌ ಸಿಟಿ ಇಲ್ಲಿನ ತಂಪಾದ ವಾತಾವರಣಕ್ಕೆ ಹೆಸರುವಾಸಿಯಾಗಿತ್ತು. ದೇಶದ ವಿವಿಧೆಡೆಯಿಂದ ಜನರು ಸೆಟಲ್‌ ಆಗಲೆಂದೇ ಈ ನಗರಕ್ಕೆ ಬಂದಿದ್ದರು. ಮಾತ್ರವಲ್ಲ ಸಿಕ್ಕಾಪಟ್ಟೆ ಲಿವಿಂಗ್ ಕಾಸ್ಟ್‌, ಟ್ರಾಫಿಕ್ ಜಾಮ್‌ ಹೀಗೆ ಹಲವು ಸಮಸ್ಯೆಯಿದ್ರೂ ಹೆಚ್ಚಿನ ಜನರು ಈ ನಗರದಲ್ಲಿ ಇರಲು ಬಯಸೋದು ಇಲ್ಲಿನ ಕೂಲ್‌ ವೆದರ್ ಇಷ್ಟಪಟ್ಟಿರೋ ಕಾರಣವೇ. ಆದ್ರೆ ಅಂಥಾ ಬೆಂಗಳೂರಲ್ಲಿ ಈಗ ಸುಡು ಸುಡು ಬಿಸಿಲು..ಮನೆಯಿಂದ ಹೊರಬರೋಕು ಸಾಧ್ಯವಾಗದಷ್ಟು ಧಗೆ..

ಒಂದು ಕಾಲದಲ್ಲಿ ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ಈಗ ತೀವ್ರ ನೀರಿನ ಸಮಸ್ಯೆ ಮತ್ತು ಅಸಾಮಾನ್ಯವಾದ ಬೇಸಿಗೆಯನ್ನು ಎದುರಿಸುತ್ತಿದೆ. ಈ ಹಿಂದೆ ತಣ್ಣಗಾಗಲು ಫ್ಯಾನ್‌ಗಳ ಅಗತ್ಯವಿದ್ದ ನಗರದ ನಿವಾಸಿಗಳು ಈಗ ಬಿಸಿಲನ್ನು ತಣಿಸಲು ಕೂಲರ್‌, ಹವಾನಿಯಂತ್ರಣಗಳನ್ನು ಖರೀದಿಸಲು ಹರಸಾಹಸ ಪಡುತ್ತಿದ್ದಾರೆ. ಇದರ ಮಧ್ಯೆ, ನಗರದಲ್ಲಿ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಬೆಂಗಳೂರಿನ ಮಹಿಳೆಯೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಬಿಸಿಲ ಧಗೆ ಮಧ್ಯೆ ಸ್ವಲ್ಪ ರಿಲ್ಯಾಕ್ಸ್‌..ಟ್ರಾಫಿಕ್ ಸಿಗ್ನಲ್‌ನಲ್ಲಿ ಗ್ರೀನ್ ರೂಫ್ ಹಾಕಿದ ಸರ್ಕಾರ, ವೀಡಿಯೋ ವೈರಲ್‌

20 ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿರುವ ಈಕ್ವಿಟಿ ಸಂಶೋಧಕಿ ಪ್ರೇರಣಾ ನಿರೀಕ್ಷಾ ಅಮ್ಮಣ್ಣ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ, 'ನಮ್ಮ ಬೆಂಗಳೂರಿಗರು ಇನ್ನು ಮುಂದೆ ನಗರದ ಕೂಲ್‌ ಹವಾಮಾನದ ಬಗ್ಗೆ ಹೆಮ್ಮೆಪಡುವಂತಿಲ್ಲ. ಇಷ್ಟು ವರ್ಷಗಳಿಂದ ನಗರದಲ್ಲಿ ಇದ್ದರೂ ನನಗೆ ಎಂದೂ ಎಸಿ ಬೇಕು ಅನಿಸಿರಲ್ಲಿಲ್ಲ. ಯಾವತ್ತಾದರೂ ಅದರ ಅಗತ್ಯ ಬರಬಹುದು ಎಂದು ಸಹ ಭಾವಿಸಿರಲ್ಲಿಲ್ಲ' ಎಂದು ಬರೆದುಕೊಂಡಿದ್ದಾರೆ. 'ನಾವು ರಾಜಸ್ಥಾನದಲ್ಲಿ ಇದ್ದೇವೆಯೇ. ಪ್ರತಿ ವರ್ಷ ಬೇಸಿಗೆ ಹಿಂದಿನ ವರ್ಷಕ್ಕಿಂತ ಕಠಿಣವಾಗಿರುತ್ತದೆ. ಶಾಖವು ಅಸಹನೀಯವಾಗಿದೆ' ಎಂದು ಬರೆದುಕೊಂಡು ಮಲಗುವ ಕೋಣೆಯಲ್ಲಿ ಅಳವಡಿಸಲಾದ ಎಸಿ ಪೋಟೋವನ್ನು ಹಂಚಿಕೊಂಡಿದ್ದಾರೆ.

ಆಕೆಯ ಪೋಸ್ಟ್‌ಗೆ ಅನೇಕ ಬೆಂಗಳೂರಿಗರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ನಾನು ಈ ಏರ್ ಕೂಲರ್ ಅನ್ನು 2016ರಲ್ಲಿ ಬೆಂಗಳೂರಿನಲ್ಲಿ ಖರೀದಿಸಿದೆ. ಏಕೆಂದರೆ ನನ್ನ ಕೋಣೆಗೆ ಸರಿಯಾಗಿ ಸೂರ್ಯನ ಬೆಳಕು ಬೀಳುತ್ತಿತ್ತು. ಆದರೆ 2016-17 ರ ಬೇಸಿಗೆಯ ನಂತರ ಅದನ್ನು ಎಂದಿಗೂ ಬಳಸಲಿಲ್ಲ, 8 ವರ್ಷಗಳ ನಂತರ ಈಗ ಅದನ್ನು ಮೊದಲ ಬಾರಿಗೆ ಆನ್ ಮಾಡಿದೆ.ಎಸಿ ಶೀಘ್ರದಲ್ಲೇ ಬೇಕಾಗಬಹುದು' ಎಂದು ಬರೆದುಕೊಂಡಿದ್ದಾರೆ.

ರಾಜ್ಯದ 25 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ರಾಯಚೂರಲ್ಲಿ 46.7 ಡಿಗ್ರಿ ದಾಖಲು

ಮತ್ತೊಬ್ಬರು, '1970ರ ದಶಕದಲ್ಲಿ ಬೆಂಗಳೂರು ಸ್ವರ್ಗವಾಗಿತ್ತು, ಈಗ ಅದು ನರಕವಾಗಿ ಅಭಿವೃದ್ಧಿಗೊಂಡಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಹೌದು, ಕಳೆದ 4 ದಶಕಗಳಲ್ಲಿ ಸರಾಸರಿ ಜಾಗತಿಕ ತಾಪಮಾನವು ಸುಮಾರು 1*C ಹೆಚ್ಚಾಗಿದೆ ಮತ್ತು ಜಾಗತಿಕ ತಾಪಮಾನವು 1850 ರಿಂದ ದಾಖಲಾದ ನಂತರ 2023 ಅತ್ಯಂತ ಬೆಚ್ಚಗಿನ ವರ್ಷವಾಗಿದೆ. ಜಾಗತಿಕ ತಾಪಮಾನ ಏರಿಕೆಯ ಸಂಭವನೀಯ ಫಲಿತಾಂಶವಾಗಿದೆ' ಎಂದು ಬರೆದಿದ್ದಾರೆ.

ಇನ್ನೊಬ್ಬ ವ್ಯಕ್ತಿ, '1952ರಲ್ಲಿ, ನನ್ನ ತಂದೆ ಬೆಂಗಳೂರಿನಲ್ಲಿ ಏರ್ ಫೋರ್ಸ್ ಏರ್‌ಮ್ಯಾನ್ ಆಗಿ ತರಬೇತಿ ಪಡೆಯುತ್ತಿದ್ದಾಗ, ಅದು ಭಾರತದಲ್ಲಿ 'ನೋ ಸೀಲಿಂಗ್ ಫ್ಯಾನ್' ನಗರ ಎಂದು ಪ್ರಸಿದ್ಧವಾಗಿತ್ತು. ಆದರೆ ಈಗ ಇಲ್ಲಿನ ಬಿಸಿಲು ವಿಪರೀತವಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಪ್ರಕಾರ, ಬೆಂಗಳೂರಿನಲ್ಲಿ ಬಿಸಿ ಮತ್ತು ಶುಷ್ಕ ಹವಾಮಾನವು ಮೇ 5ರ ವರೆಗೆ ಮುಂದುವರಿಯುವ ಸಾಧ್ಯತೆಯಿದೆ.

Follow Us:
Download App:
  • android
  • ios