Food

ರಸಗುಲ್ಲ (ಪಶ್ಚಿಮ ಬಂಗಾಲ)

ಹಾಲಿನಿಂದ ತಯಾರಿಸಲಾಗುವ ಈ ಬಿಳಿ, ಸ್ಪಾಂಜ್ ನಂತಹ ತಿನಿಸನ್ನು ಬಳಿಕ ಸಕ್ಕರೆ ಪಾಕದಲ್ಲಿ ಹಾಕಿಟ್ಟು ತಿನ್ನಲಾಗುತ್ತೆ. ಇದು ಪಶ್ಚಿಮ ಬಂಗಾಲದ ಹೆಮ್ಮೆ. 
 

Image credits: Instagram

ಮೈಸೂರ್ ಪಾಕ್ (ಕರ್ನಾಟಕ)

ತುಪ್ಪ, ಸಕ್ಕರೆ, ಕಡ್ಲೆ ಹಿಟ್ಟಿನಿಂದ ಮಾಡಲಾಗುವ ಈ ಸಿಹಿ ತಿನಿಸು, ಬಾಯಲ್ಲಿ ಹಾಕಿದ ಕೂಡಲೇ ಕರಗಿ ಹೋಗುತ್ತೆ. ಇದರ ರುಚಿಗೆ ಮನಸೋಲದವರೇ ಇಲ್ಲ. 
 

Image credits: Instagram

ಗುಲಾಬ್ ಜಾಮೂನ್ (ಉತ್ತರಪ್ರದೇಶ)

ಖೋಯಾವನ್ನು ಡೀಪ್ ಫ್ರೈ ಮಾಡಿ, ಏಲಕ್ಕಿ ಹಾಕಿದ ಸಕ್ಕರೆ ಸಿರಪ್ ನಲ್ಲಿ ಡಿಪ್ ಮಾಡಿದ ಗುಲಾಬ್ ಜಾಮೂನ್ ಹೆಸರು ಹೇಳೋವಾಗ್ಲೇ ಬಾಯಲ್ಲಿ ನೀರೂರುತ್ತೆ. 
 

Image credits: Instagram

ಮೋದಕ (ಮಹಾರಾಷ್ಟ್ರ)

ಅಕ್ಕಿ ಹಿಟ್ಟಿನಿಂದ ತಯಾರಿಸಿ, ಅದರ ಮಧ್ಯೆ ಬೆಲ್ಲ ಮತ್ತು ತೆಂಗಿನತುರಿ ಸೇರಿಸಿ ಕಡುಬಿನಂತೆ ಬೇಯಿಸಲಾಗುತ್ತೆ. ಇದನ್ನ ಹೆಚ್ಚಾಗಿ ಗಣೇಶ ಚತುರ್ಥಿ ಸಮಯದಲ್ಲಿ ತಯಾರಿಸಲಾಗುತ್ತೆ. 
 

Image credits: Instagram

ಪೂತೆರೆಕುಲು(ಆಂಧ್ರಪ್ರದೇಶ)

ಅಕ್ಕಿ ಹುಡಿ, ಸಕ್ಕರೆ ಮತ್ತು ತುಪ್ಪ ಹಾಕಿ ಮಾಡಲಾಗುವ ಪೇಪರ್ ಗಿಂತ ತೆಳುವಾದ ಲೇಯರ್, ಲೇಯರ್ ಉಳ್ಳ ಈ ಸ್ವೀಟ್ಸ್ ಆಂಧ್ರದ ಸ್ಪೆಷಲ್ ತಿನಿಸಾಗಿದೆ. 
 

Image credits: Instagram

ಜಲೇಬಿ (ರಾಜಸ್ಥಾನ)

ಕ್ರಂಚಿಯಾಗಿರುವ ಈ ಕಾಯಿಲ್ ಆಕಾರದ ಸ್ವೀಟ್ ರಾಜಸ್ಥಾನದ ಸ್ಪೆಷಲ್ ತಿನಿಸಾಗಿದೆ. ಆದರೆ ಇದು ಇಂದು ದೇಶಾದ್ಯಂತ ಜನರ ಫೆವರಿಟ್ ತಿನಿಸು ಅಂದ್ರೆ ತಪ್ಪಾಗಲ್ಲ. 
 

Image credits: Instagram

ಚೆನಾ ಪೋಡ (ಒಡಿಶಾ)

ಬಾಯಲ್ಲಿ ನೀರೂರಿಸುವ ಈ ಸಿಹಿ ತಿನಿಸನ್ನು ಕಾಟೇಜ್ ಚೀಸ್, ಸಕ್ಕರೆ, ಏಲಕ್ಕಿ ಹಾಕಿ ಮಾಡಲಾಗುವ ಈ ತಿನಿಸು ನೀವು ಒಂದು ಬಾರಿಯಾದ್ರೂ ತಿನ್ನಲೇ ಬೇಕು. 
 

Image credits: Instagram
Find Next One