Asianet Suvarna News Asianet Suvarna News

ಮತ್ತೆ ಬಂಪರ್: ಜಿಯೋ'ನಿಂದ ತಿಂಗಳಿಗೆ 100 ಜಿಬಿ ಉಚಿತ ಡಾಟಾ

ಮೊದಲನೆ ಹಂತದಲ್ಲಿ ದೆಹಲಿ,ಮುಂಬೈ,ಜಾಮ್ನ'ನಗರ್,ಪುಣೆ ಹಾಗೂ ಚೆನ್ನೈ ಮಾತ್ರ ಅನುಷ್ಟಾನಗೊಳಿಸಲಾಗಿದೆ

Reliance Jio to offer 100 GB free data 100 Mbps speed at JioFibre launch

ಮುಂಬೈ(ಮೇ.10): ಭಾರತೀಯ ಟೆಲಿಕಾಂ ಇತಿಹಾಸದಲ್ಲಿ  ಹೊಸ ಇತಿಹಾಸ ಸೃಷ್ಟಿಸಿದ ಮುಖೇಶ್ ಅಂಬಾನಿ ಒಡೆತನದ  ರಿಲಾಯನ್ಸ್ ಜಿಯೋ ಈಗ ಮತ್ತೊಂದು ದಾಖಲೆ ಮಾಡಲು ಹೊರಟಿದೆ.

6 ತಿಂಗಳು ಡಾಟಾ,ಕರೆ ಹಾಗೂ ಎಸ್'ಎಂಎಸ್ ಸೇರಿದಂತೆ ಹಲವು ಆಫರ್ ನೀಡಿ ತದ ನಂತರ ಪುನಃ 3 ತಿಂಗಳ ಕಾಲ 303+99 ರೂ.ಗಳಿಗೆ ಅದೇ ಉಚಿತ ಸೇವೆಗಳನ್ನು ವಿಸ್ತರಿಸಿದೆ.

ಮೊಬೈಲ್ ಬಳಕೆದಾರರ ನಂತರ ಮನೆಗಳ ಕಂಪ್ಯೂಟರ್'ಗಳಿಗೆ(ಪಿಸಿ) ಒದಗಿಸುವ ಬ್ರಾಡ್'ಬ್ಯಾಂಡ್ ಸೇವೆ ಎಫ್'ಟಿಟಿ'ಹೆಚ್ (ಫೈಬರ್ ಟು ದ ಹೋಮ್) ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಸದ್ಯ ಎಫ್'ಟಿಟಿ'ಹೆಚ್ ಸೇವೆ ಮೊದಲನೆ ಹಂತದಲ್ಲಿ ದೆಹಲಿ,ಮುಂಬೈ,ಜಾಮ್ನ'ನಗರ್,ಪುಣೆ ಹಾಗೂ ಚೆನ್ನೈ ಮಾತ್ರ ಅನುಷ್ಟಾನಗೊಳಿಸಲಾಗಿದೆ. ದೇಶದಾದ್ಯಂತ ಅಧಿಕೃತವಾಗಿ ಜಾರಿಗೊಳಿಸದ ನಂತರ ಎಲ್ಲಡೆ ಈ ಸೇವೆ ಲಭ್ಯವಾಗಲಿದೆ.

ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಕಾರಣ ಬ್ರಾಡ್'ಬ್ಯಾಂಡ್ ಸೇವೆ ಎಫ್'ಟಿಟಿ'ಹೆಚ್ ಪಡೆಯುವ ಗ್ರಾಹಕರಿಗೆ ತಿಂಗಳಿಗೆ 100 ಎಂಬಿ'ಪಿಎಸ್ ವೇಗದಲ್ಲಿ 100 ಜಿಬಿ ಉಚಿತ ಡಾಟಾವನ್ನು 90 ದಿನಗಳ ಕಾಲ ನೀಡಲಾಗುತ್ತದೆ. ತಿಂಗಳಲ್ಲಿ 100 ಜಿಬಿ ಬಳಸಿದ ನಂತರ 1 ಎಂ'ಬಿಪಿ'ಎಸ್ ವೇಗದಲ್ಲಿ ಮತ್ತು 100 ಜಿಬಿ ಉಚಿತ ಡಾಟಾ ಸೇವೆಯನ್ನು ಬಳಸಿಕೊಳ್ಳಲು ಅವಕಾಶವಿದೆ. ಅಳವಡಿಕೆ ಶುಲ್ಕ 4500 ರೂ. ದರ ವಿಧಿಸಲಾಗಿದ್ದು, ಸೇವೆಯನ್ನು ಮುಂದುವರಿಸಲಾಗಿದಿದ್ದರೆ ಹಣವನ್ನು ವಾಪಸ್ ನೀಡಲಾಗುತ್ತದೆ.      

Follow Us:
Download App:
  • android
  • ios