Asianet Suvarna News Asianet Suvarna News

ಜಿಯೋ-ಏರ್'ಟೆಲ್'ಗೆ ಪ್ರತಿತಂತ್ರ: ವಿಲೀನವಾದ ಐಡಿಯಾ ಹಾಗೂ ವೊಡಾಫೋನ್, ಇನ್ನಷ್ಟು ಆಫರ್'ಗಳು !

ಈಗ ಇವೆಲ್ಲವುಗಳನ್ನು ಸೆಡ್ಡುಹೊಡಿಯಲು ಭಾರತೀಯ ಕಂಪನಿ ಐಡಿಯಾ ಹಾಗೂ ಬ್ರಿಟೀಷ್ ಮೂಲದ ಕಂಪನಿ ವೊಡಾಫೋನ್ ಇಂಡಿಯಾ ವಿಲೀನವಾಗಿವೆ.

Idea and Vodafone India Announce Merger

ಮುಂಬೈ(ಮಾ.20): ಭಾರತೀಯ ಟೆಲಿಕಾಂ ರಂಗದಲ್ಲಿ ದಿನದಿಂದ ದಿನಕ್ಕೆ ಹೊಸ ಅಲೆಗಳು ಸೃಷ್ಟಿಯಾಗುವ ಸೂಚನೆ ಕಾಣುತ್ತಿವೆ. ಸರಿ ಸುಮಾರು 6 ತಿಂಗಳು ಇಂಟರ್'ನೆಟ್, ಕರೆ ಹಾಗೂ ಎಸ್'ಎಂಎಸ್'ಗಳನ್ನು ಉಚಿತವಾಗಿ ಘೋಷಿಸಿದ ಜಿಯೋ ಅತೀ ಕಡಿಮೆ ಅವಧಿಯಲ್ಲಿ ಕೋಟ್ಯಂತರ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿತ್ತು.

ಮುಂದಿನ ಒಂದು ವರ್ಷಗಳ ಕಾಲ ಕಡಿಮೆ ಬೆಲೆಗಳಿಗೆ ಹಲವು ಆಫರ್'ಗಳನ್ನು ಘೋಷಿಸಿದೆ. ಏರ್'ಟೆಲ್ ಕೂಡ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಹೊಸ ರೀತಿಯ ಪ್ಲ್ಯಾನ್'ಗಳನ್ನು ಪರಿಚಯಿಸಿದೆ. ಈಗ ಇವೆಲ್ಲವುಗಳನ್ನು ಸೆಡ್ಡುಹೊಡಿಯಲು ಭಾರತೀಯ ಕಂಪನಿ ಐಡಿಯಾ ಹಾಗೂ ಬ್ರಿಟೀಷ್ ಮೂಲದ ಕಂಪನಿ ವೊಡಾಫೋನ್ ಇಂಡಿಯಾ ವಿಲೀನವಾಗಿವೆ.

ಇವೆರೆಡು ಸಂಸ್ಥೆಗಳು ವಿಲೀನವಾಗಿರುವುದರಿಂದ 40 ಕೋಟಿ ಗ್ರಾಹಕರು 2 ಸಂಸ್ಥೆಗಳಿಗೆ ಚಂದಾದಾರರಾದಂತಾಗಿದೆ. ಅತೀ ಶೀಘ್ರದಲ್ಲಿಯೇ ಜಿಯೋ ಹಾಗೂ ಏರ್'ಟೆಲ್'ಗೆ ಪ್ರತಿತಂತ್ರವಾಗಿ ಹಲವು ಕ್ರಾಂತಿಕಾರಕ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆಯಂತೆ.

ಐಡಿಯಾ ಕೂಡ ಮುಂದಿನ ಏಪ್ರಿಲ್ 1, 2017 ರಿಂದ ಉಚಿತ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ರೋಮಿಂಗ್ ಕರೆಗಳನ್ನು ಒದಗಿಸಿದೆ. ದೇಶದಾತ್ಯಂತವಿರುವ 4 ಲಕ್ಷ ಪಟ್ಟಣ ಹಾಗೂ ಗ್ರಾಮಗಳಲ್ಲಿರುವ 20 ಕೋಟಿ 2ಜಿ,3ಜಿ ಹಾಗೂ 4ಜಿ ಐಡಿಯಾ ನೆಟ್'ವರ್ಕ್ ಬಳಕೆದಾರರರಿಗೆ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಕರೆಗಳಿಗೆ ಶುಲ್ಕವಿರುವುದಿಲ್ಲ. ಎಸ್'ಎಂಎಸ್ ಸಹ ದೇಶದಾದ್ಯಂತ ಉಚಿತವಾಗಿರುತ್ತದೆ. ಈ ಸೌಲಭ್ಯ ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಇಬ್ಬರು ಗ್ರಾಹಕರಿಗೂ ಅನ್ವಯವಾಗುತ್ತದೆ.        

ಅಂತರ ರಾಷ್ಟ್ರೀಯ ರೋಮಿಂಗ್  ದಿನಕ್ಕೆ 400 ಔಟ್ ಗೋಯಿಂಗ್ ಕರೆ, 100 ಎಸ್'ಎಂಎಸ್ ಹಾಗೂ 3ಜಿಬಿವರೆಗೂ ಉಚಿತವಿರುತ್ತದೆ. ಅನಂತರ ಕಡಿಮೆ ಹಣಕ್ಕೆ ಶುಲ್ಕ ವಿಧಿಸಲಾಗುತ್ತದೆ.

Follow Us:
Download App:
  • android
  • ios