Asianet Suvarna News Asianet Suvarna News

ನಿಮ್ಮ ಪೋಸ್ಟ್ ಅರ್ಥೈಸಿಕೊಂಡು ಸೂಸೈಡ್ ಮಾಡುವುದನ್ನು ತಪ್ಪಿಸಲಿದೆ ಫೇಸ್'ಬುಕ್, ಟ್ವಿಟರ್!

ಜಗತ್ತಿನ ಎರಡು ಅತಿದೊಡ್ಡ ಸಾಮಾಜಿಕ ಜಾಲಾತಾಣಗಳು ಇದೀಗ ತನ್ನ ಬಳಕೆದಾರರ ಮಾನಸಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡುತ್ತಿವೆ. ಇದಕ್ಕಾಗಿ ಫೇಸ್'ಬುಕ್ ಸೂಸೈಡ್'ನಂತಹ ಅಪರಾಧ ತಡೆಯಲು ಹಾಗೂ ಟ್ವಿಟರ್ ಅಣಕಿಸುವ ಟ್ರಾಲಿಂಗ್'ನ್ನು ಬಂದ್ ಮಾಡಲು ಹೊಸ ಫೀಚರ್ಸ್'ನ್ನು ಪರಿಚಯಿಸಲಿದೆ.

Facebook artificial intelligence spots suicidal users

 

ಜಗತ್ತಿನ ಎರಡು ಅತಿದೊಡ್ಡ ಸಾಮಾಜಿಕ ಜಾಲಾತಾಣಗಳು ಇದೀಗ ತನ್ನ ಬಳಕೆದಾರರ ಮಾನಸಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡುತ್ತಿವೆ. ಇದಕ್ಕಾಗಿ ಫೇಸ್'ಬುಕ್ ಸೂಸೈಡ್'ನಂತಹ ಅಪರಾಧ ತಡೆಯಲು ಹಾಗೂ ಟ್ವಿಟರ್ ಅಣಕಿಸುವ ಟ್ರಾಲಿಂಗ್'ನ್ನು ಬಂದ್ ಮಾಡಲು ಹೊಸ ಫೀಚರ್ಸ್'ನ್ನು ಪರಿಚಯಿಸಲಿದೆ.

ಆತ್ಮಹತ್ಯೆಯನ್ನು ತಡೆಯಲು ಫೇಸ್'ಬುಕ್ ಮೊದಲ ಬಾರಿ 'ಆರ್ಟಿಫಿಶಲ್ ಇಂಟಲಿಜನ್ಸ್'ನ್ನು ಪ್ರಯೋಗ ಮಾಡಲಿದೆ. ನಿಮ್ಮ ಟೈಮ್'ಲೈನ್ ಪೋಸ್ಟ್'ನಿಂದ ನೀವು ಮಾನಸಿಕ ಒತ್ತಡ ಅಥವಾ ಆತ್ಮಹತ್ಯೆಗೆ ಯತ್ನಿಸುತ್ತಿದ್ದೀರಾ ಎಂಬುವುದು ಫೇಸ್'ಬುಕ್'ಗೆ ತಿಳಿಯಲಿದೆ. ಒಂದು ವೇಳೆ ನಿಮಗೆ ನೀವು ಕೆಡುಕುಂಟು ಮಾಡಲಿದ್ದೀರಿ ಎಂಬುವುದು ಫೇಸ್'ಬುಕ್'ಗೆ ತಿಳಿದರೆ ಆ ಕೂಡಲೇ ಅದು 'ಕಮ್ಯನಿಟಿ ಆಪರೇಷನ್' ವಿಭಾಗಕ್ಕೆ ಈ ಕುರಿತಾಗಿ ಸಂದೇಶ ರವಾನಿಸಲಿದೆ.

ಒಂದು ಬಾರಿ ಸಂದೇಶ ರವಾನೆಯಾಯಿತೆಂದರೆ ನಿಮ್ಮ ಪೋಸ್ಟ್ ಫ್ಲ್ಯಾಗ್ ಆಗುವುದಲ್ಲದೆ, ಫೇಸ್'ಬುಕ್'ನ ಮಾನಿಟರಿಂಗ್ ಟೀಂ ಹಾಗೂ ನಿಮ್ಮ ಮಿತ್ರರ ಟೈಮ್'ಲೈನ್'ನಲ್ಲಿ ಹೈಲೈಟ್ ಆಗುತ್ತದೆ. ಬಳಿಕ ನಿಮ್ಮ ಅಕೌಂಟ್'ಗೆ ಸಹಾಯವಾಣಿಯ ನೋಟಿಫಿಕೇಷನ್ಸ್ ಬರಲಾರಂಬಿಸುತ್ತವೆ. ಇಲ್ಲಿ ಹೆಲ್ಪ್ ಲೈನ್ ನಂಬರ್, ಮಿತ್ರ ಸಲಹೆ ಪಡೆಯಲು ಸೂಚಿಸಲಾಗುತ್ತದೆ. ಈ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಫೇಸ್'ಬುಕ್ ಪ್ರಯತ್ನಿಸಲಿದೆ.

ಈ ಹೊಸ ಫೀಚರ್'ನ್ನು ಅಮೆರಿಕಾದಲ್ಲಿ ಈಗಾಗಲೇ ಪ್ರಯೋಗಿಸಲಾರಂಭಿಸಿದ್ದಾರೆ. ಬುಧವಾರದಂದು ಈ ಕುರಿತಾಗಿ ಮಾತನಾಡಿದ  ಫೇಸ್'ಬುಕ್ ಜನಕ ಜುಕರ್'ಬರ್ಗ್ ಇಂತಹುದ್ದೊಂದು ಹೊಸತನವನ್ನು ಪರಿಚಯಿಸಲು ಜನವರಿಯಲ್ಲಿ ನಡೆದ ಒಂದು ಘಟನೆ ಎಂದು ತಿಳಿಸಿದ್ದಾರೆ. ಈ ಘಟನೆಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಚಲಿಸುತ್ತಿದ್ದ ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು, ಅಲ್ಲದೇ ಇದನ್ನು ಫೇಸ್'ಬುಕ್'ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡಾ ಮಾಡಿದ್ದಳು. ಇದರಿಂದ ಎಚ್ಚೆತ್ತ ಫೇಸ್'ಬುಕ್ ಇಂತಹುದ್ದೊಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

ಇನ್ನು ನಾವು ಮಾಡುವ ಟ್ವೀಟ್'ನ ಮೇಲೆ ಯಾವುದೇ ರೀತಿಯಲ್ಲಿ ಸಂದೇಹ ಹುಟ್ಟಿದರೆ, ಅಣಕಿಸುವ ಟ್ರಾಲಿಂಗ್ ಕಂಡುಬಂದರೆ ಅಂತಹ ಟ್ವೀಟ್'ಗಳನ್ನು ಟ್ವಿಟರ್ ಕೂಡಾ ಡಿಲೀಟ್ ಮಾಡಲಿದೆ.

ಪ್ರಸಾರವಾದ ವರದಿ ಅನ್ವಯ ಹೇಳುವುದಾದರೆ 'ಈ ಎರಡೂ ಕಂಪೆನಿಗಳು ಫಿಲ್ಟರ್ಸ್'ನ್ನು ಪರಿಚಯಿಸಲಿವೆ. ಈ ಮೂಲಕ ಪ್ರೊಫೈಲ್ ಫೋಟೋ, ನಂಬರ್ ಹಾಗೂ ಈ ಮೇಲ್ ವಿಳಾಸ ಇಲ್ಲದ ಅಕೌಂಟ್'ಗಳನ್ನು ಈ ಫಿಲ್ಟರ್'ನಡಿಗೆ ಸೇರಿಕೊಳ್ಳಲಿವೆ. ಇನ್ನು ನೀವು ಫಾಲೋ ಮಾಡದ ಅಕೌಂಟ್'ಗಳನ್ನು ಟ್ಯಾಗ್ ಮಾಡಿ ಪದೇ ಪದೇ ಟ್ವೀಟ್ ಮಾಡುತ್ತೀರಿ ಹಾಗೂ ಇದು ಅಣಕಿಸುವ ಸಂದೇಶವನ್ನು ಹೋಂದಿದ್ದರೆ ನಿಮ್ಮ ಪೋಸ್ಟ್'ಗಳನ್ನು ಗಂಭಿರವಾಗಿ ಪರಿಗಣಿಸಿ ಟ್ರಾಲ್ ಪಟ್ಟಿಗೆ ಸೇರಿಸಲಾಗುತ್ತದೆ.

ಈ ವಿಚಾರವಾಗಿ ಮಾತನಾಡಿದ ಕಂಪೆನಿ 'ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದರೆ ಯಾರಾದರೂ ಪದೇ ಪದೇ ಟ್ವಿಟರ್ ನಿಯಮಗಳನ್ನು ಉಲ್ಲಂಗಿಸುತ್ತಾರೆಂದಾದರೆ ಅವರ ವಿಚಾರಣೆ ನಡೆಸಲು ಹಿಂಜರಿಯುವುದಿಲ್ಲ. ಅಗತ್ಯ ಬಿದ್ದರೆ ಶಿಸ್ತು ಕ್ರಮವನ್ನೂ ಕೈಗೊಳ್ಳುತ್ತೇವೆ' ಎಂದಿದೆ.

Follow Us:
Download App:
  • android
  • ios