Asianet Suvarna News Asianet Suvarna News

ಏರ್'ಟೆಲ್'ನಿಂದ ಮೂರು ತಿಂಗಳು ಅನ್'ಲಿಮಿಟೆಡ್ 4ಜಿ ಡೇಟಾ ಆಫರ್ ಬಂದಿದ್ದರೆ ಹುಷಾರ್..!

ಬಹಳಷ್ಟು ಜನರು ಆಫರ್ ಅಂದಕೂಡಲೇ ಕಣ್ಣುಮುಚ್ಚಿಕೊಂಡು ಅಲ್ಲಿರುವ ಲಿಂಕ್ ಕ್ಲಿಕ್ ಮಾಡಿಬಿಡುತ್ತಾರೆ. ಹೀಗೆಯೇ, http://offer-for-all.com ಎಂಬ ಲಿಂಕ್ ಕ್ಲಿಕ್ ಮಾಡಿದರೆ ಏರ್'ಟೆಲ್'ನ ಅಧಿಕೃತ ವೆಬ್'ಸೈಟ್'ಗೆ ಹೋಗುವುದಿಲ್ಲ. ಬದಲಾಗಿ ಬೇರೆಯದೇ ತಾಣಕ್ಕೆ ಕರೆದೊಯ್ಯುತ್ತದೆ.

beware of 3 months unlimited 4g data offer in the name of airtel

ನವದೆಹಲಿ: ಇತ್ತೀಚೆಗೆ ಸಾಕಷ್ಟು ಮೊಬೈಲ್'ಗಳಿಗೆ ಏರ್'ಟೆಲ್ ಹೆಸರಿನಲ್ಲಿ ಹೊಸ ಆಫರ್'ವೊಂದು ಬರುತ್ತಿದೆ. ಮೂರು ತಿಂಗಳ ಕಾಲ ಏರ್'ಟೆಲ್'ನಿಂದ ಅನ್'ಲಿಮಿಟೆಡ್ 4ಜಿ ಡೇಟಾ ನೀಡಲಾಗುತ್ತದೆ ಎಂಬಂತಹ ಸಂದೇಶವೊಂದು ವಾಟ್ಸಾಪ್'ನಲ್ಲಿ ಹರಿದಾಡುತ್ತಿದೆ. ಆದರೆ, ಆ ಸಂದೇಶದಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಬೇರೆಯದೇ ವೆಬ್'ಸೈಟ್'ಗೆ ಹೋಗುತ್ತದೆ. ಗಮನಿಸಿ, ಆ ಸಂದೇಶ ಈ ಕೆಳಕಂಡಂತಿರುತ್ತದೆ.

"LOOT OFFER FOR ALL AIRTEL USER:- Due to Jio, Now Airtel market is down so Airtel is activating Unlimited 4G, 3G data for 3 months. Visit Following link to Activate for airtel 3 months 4G, 3G Pack and enjoy. Visit Now:- http://offer-for-all.com/. Get Airtel free Internet/ and free 300 minutes Local calling every month for next 3 Months. So activate this offer,Thanks, airtel I got Unlimited Data. Dial 123 to Check your balance. *Enjoy Friends*"

ಬಹಳಷ್ಟು ಜನರು ಆಫರ್ ಅಂದಕೂಡಲೇ ಕಣ್ಣುಮುಚ್ಚಿಕೊಂಡು ಅಲ್ಲಿರುವ ಲಿಂಕ್ ಕ್ಲಿಕ್ ಮಾಡಿಬಿಡುತ್ತಾರೆ. ಹೀಗೆಯೇ, http://offer-for-all.com ಎಂಬ ಲಿಂಕ್ ಕ್ಲಿಕ್ ಮಾಡಿದರೆ ಏರ್'ಟೆಲ್'ನ ಅಧಿಕೃತ ವೆಬ್'ಸೈಟ್'ಗೆ ಹೋಗುವುದಿಲ್ಲ. ಬದಲಾಗಿ ಬೇರೆಯದೇ ತಾಣಕ್ಕೆ ಕರೆದೊಯ್ಯುತ್ತದೆ. ಅಲ್ಲಿ, ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ರಾಜ್ಯ ವಿವರ ನೀಡುವಂತೆ ಕೇಳುತ್ತದೆ. ಬಳಿಕ ಆ ಆಫರ್ ಸಾಕಾರಗೊಳ್ಳಲು ನೀವು ಈ ಸಂದೇಶವನ್ನು ನಿಮ್ಮ 8 ವಾಟ್ಸಾಪ್ ಸ್ನೇಹಿತರಿಗೆ ಕಳುಹಿಸಬೇಕೆಂಬ ಕಂಡೀಷನ್ ಹಾಕುತ್ತದೆ.

ಅಷ್ಟೇ ಅಲ್ಲ, ಆ ಲಿಂಕ್'ನಿಂದ ನಿಮ್ಮ ಮೊಬೈಲ್'ಗೆ ಮಾಲ್'ವೇರ್ ಸೇರಿಕೊಳ್ಳುವ ಸಾಧ್ಯತೆ ಇದೆ. ಈ ಮಾಲ್'ವೇರ್ ನಿಮ್ಮ ಮೊಬೈಲ್'ಗೆ ಒಂದಷ್ಟು ಆ್ಯಪ್'ಗಳನ್ನು ಡೌನ್'ಲೋಡ್ ಮಾಡುವಂತೆ ಮಾಡಬಹುದು. ನಿಮ್ಮ ಮೊಬೈಲ್'ನಲ್ಲಿರುವ ಡೇಟಾವನ್ನು ಕದಿಯಬಹುದು. ಹೀಗಾಗಿ, ಎಚ್ಚರದಿಂದಿರಿ ಎಂದು ತಿಳಿಸಬಯಸುತ್ತೇವೆ.

Follow Us:
Download App:
  • android
  • ios