Asianet Suvarna News Asianet Suvarna News

ಜಿಯೋ ನಿದ್ದೆಗೆಡಿಸಲು ಭಾರತಕ್ಕೆ ಲಗ್ಗೆಯಿಟ್ಟ ಚೀನಾದ 'ಆಲಿಬಾಬಾ ಗ್ರೂಪ್'

ಅಂಬಾನಿಯ ರಿಲಾಯನ್ಸ್ ಜಿಯೋ ಬಳಿಕ ಇದೀಗ ಚೀನಾದ 'ಆಲಿಬಾಬಾ' ಕಂಪೆನಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಅಲೆ ಎಬ್ಬಿಸಲು ಸಜ್ಜಾಗಿದೆ.

Alibaba Thinking To Provide Free Internet Connection To Indians

ನವದೆಹಲಿ(ಫೆ.09): ಅಂಬಾನಿಯ ರಿಲಾಯನ್ಸ್ ಜಿಯೋ ಬಳಿಕ ಇದೀಗ ಚೀನಾದ 'ಆಲಿಬಾಬಾ' ಕಂಪೆನಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಅಲೆ ಎಬ್ಬಿಸಲು ಸಜ್ಜಾಗಿದೆ.

ಈ ಆಲಿಬಾಬಾ ಕಂಪೆನಿ ಭಾರತದಲ್ಲಿ ಉಚಿತ ಇಂಟರ್'ನೆಟ್ ಕನೆಕ್ಷನ್ ನೀಡುವ ಯೋಜನೆಯೊಂದನ್ನು ರೂಪಿಸುತ್ತಿದೆ. ಭಾರತದಲ್ಲಿ ಈಗಾಗಲೇ ಈ ಕಂಪೆನಿ ಯುಸಿ ವೆಬ್ ಹೆಸರಿನಲ್ಲಿ ಇಂಟರ್'ನೆಟ್ ಸಾಫ್ಟ್ವೇರ್ ಹಾಗೂ ಸರ್ವಿಸ್ ಪ್ರೊವೈಡ್ ಮಾಡುತ್ತಿದೆ.

ಆಲಿಬಾಬಾ ಕಂಪೆನಿಯ ಬಿಸ್'ನೆಸ್ ಓವರ್'ಸೀಸ್ ಅಧ್ಯಕ್ಷ ಜಾಕ್ ಹುವಾಂಗ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಬಳಕೆದಾರರಿಗೆ ಕಡಿಮೆ ದರದಲ್ಲಿ ಉತ್ತಮ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸದ್ಯ ಈ ಕಂಪೆನಿ ಭಾರತೀಯ ಟೆಲಿಕಾಂ ಕಂಪೆನಿಗಳು ನೀಡುತ್ತಿರುವ ಉಚಿತ ಅಂತರ್ಜಾಲ ವ್ಯವಸ್ಥೆ ನೀಡುವ ಕುರಿತಾಗಿ ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಗಮನಿಸಬೇಕಾದ ವಿಚಾರವೆಂದರೆ ಅಲಿಬಾಬಾ ಗ್ರೂಪ್ ಮಾತ್ರ ಇಂತಹ ಯೋಜನೆ ಹೊಂದಿರುವ ಮೊದಲ ಕಂಪೆನಿಯಲ್ಲ. ಯಾಕೆಂದರೆ ಈ ಮೊದಲು ಫೇಸ್'ಬುಕ್, internet.org ಹಾಗೂ ಫ್ರೀ ವೆಬ್'ಸೈಟ್ ಪ್ರಾಜೆಕ್ಟ್ ಮಾಧ್ಯಮಗಳಲ್ಲಿ ಇಂತಹುದೇ ಒಂದು ಯೋಜನೆಯನ್ನು ಪರಿಚಯಿಸುತ್ತೇವೆ ಎಂಬ ಹೇಳಿಕೆ ನೀಡಿತ್ತು.

Follow Us:
Download App:
  • android
  • ios