7 ವರ್ಷದ ಹುಡುಗಿ ಕೆಲಸ ಬೇಕೆಂದು ಗೂಗಲ್ ಸಿಇಒ'ಗೆ ಅರ್ಜಿ ಸಲ್ಲಿಸಿದಾಗ ಪಿಚ್ಚೈ ಕೊಟ್ಟ ಉತ್ತರ ಹೀಗಿತ್ತು
technology
By Suvarna Web Desk | 05:17 PM Thursday, 16 February 2017

ಪಿಚ್ಚೈ ಬಾಲಕಿಯ ಪತ್ರಕ್ಕೆ ಕೌಶಲ್ಯಮತಿಯಾಗಿ ಉತ್ತರ ನೀಡಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ(ಫೆ.16): ಇಂಗ್ಲೆಂಡಿನ ನಿವಾಸಿ 7 ವರ್ಷದ ಕ್ಲೋಯ್ ಬ್ರಿಡ್ಜ್ವಾಟರ್ ಎಂಬ ಹುಡುಗಿ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರಿಗೆ ಕೆಲಸ ಬೇಕೆಂದು ಪತ್ರ ಬರೆದಿದ್ದಳು. ಪಿಚ್ಚೈ ಬಾಲಕಿಯ ಪತ್ರಕ್ಕೆ ಕೌಶಲ್ಯಮತಿಯಾಗಿ ಉತ್ತರ ನೀಡಿದ್ದಾರೆ.

ಅವರು ಬಾಲಕಿಗೆ ಏನಂತ ಉತ್ತರ ಕೊಟ್ಟರು ಗೊತ್ತೆ' ಶ್ರಮವಹಿಸಿ ಕೆಲಸ ನಿರ್ವಹಿಸಿ ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊ' ಎಂದಿದ್ದಾರೆ. ಅಂದರೆ ಉತ್ತಮ ಅಂಕಗಳೊಂದಿಗೆ ನಿನ್ನ ಶಾಲಾ ಜೀವನವನ್ನು ಪೂರ್ಣಗೊಳಿಸಿಕೊಂಡರೆ ತಾನಾಗಿಯೇ ನಿನ್ನ ಕನಸು ಈಡೇರುತ್ತದೆ. ಗೂಗಲ್ ಸಂಸ್ಥೆಗೆ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಕನಿಷ್ಠ ಪದವಿಯನ್ನು ಪೂರೈಸಿರಬೇಕು.

7 ವರ್ಷದ ಕ್ಲೋಯ್ ಬ್ರಿಡ್ಜ್ವಾಟರ್ ತನ್ನ ವಯಸ್ಸು, ವಿದ್ಯಾಭ್ಯಾಸ, ಹವ್ಯಾಸ ಕುಟುಂಬದ ವಿವರದೊಂದಿಗೆ ಗೂಗಲ್ ಸಿಇಒ ಪಿಚ್ಚೈ ಅವರಿಗೆ ಕೆಲಸ ಬೇಕೆಂದು ಪತ್ರ ಬರೆದಿದ್ದಳು.

Show Full Article