Asianet Suvarna News Asianet Suvarna News

ಮೊಬೈಲ್ ಫೋನ್ ಚಾರ್ಜ್ ಮಾಡುವ ಮುಂಚೆ ಈ 10 ವಿಷಯಗಳನ್ನು ತಿಳಿದುಕೊಳ್ಳಿ

ಮೊಬೈಲ್ ಬ್ಯಾಟರಿ ಸೇರಿದಂತೆ ಪ್ರತಿಯೊಂದು ಬ್ಯಾಟರಿಗಳಿಗೂ ಅದರ ಅವಧಿ ಮುಗಿಯುವ (Expiry Date) ದಿನವಿರುತ್ತದೆ. ನಿಮ್ಮ ದುಬಾರಿ ಸ್ಮಾರ್ಟ್ ಫೋನ್’ಗಳ ಬ್ಯಾಟರಿ ಬಾಳಿಕೆ ನೀವದನ್ನು ಹೇಗೆ ಬಳಸುತ್ತೀರಿ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದುದರಿಂದ ನಿಮ್ಮ ಫೋನ್’ಗಳನ್ನು ಚಾರ್ಜ್ ಮಾಡುವ ಮುಂಚೆ ಈ 10 ವಿಷಯಗಳನ್ನು ಗಮನಿಸಿ.

10 things you should never do while charging your smartphone
  1. ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರ್’ನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್’ಗಳು ಇತರ ಚಾರ್ಜರ್’ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್’ಗೆ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ.  
  2. ಹಣ ಉಳಿಸಲು ಅಗ್ಗದ/ಕಳಪೆ ಚಾರ್ಜರ್’ಗಳನ್ನು ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್’ಗಳಿಂದ ನಿಮ್ಮ ಫೋನ್ ಶಾಶ್ವತವಾಗಿ ಹಾಳಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.  
  3. ಚಾರ್ಜ್ ಮಾಡುವ ವೇಳೆ ಫೋನ್ ಮೇಲಿರುವ ರಕ್ಷಣಾ ಕವಚ (Protective Case )ವನ್ನು ತೆಗೆಯಿರಿ. ಚಾರ್ಜ್ ಆಗುವ ಸಮಯದಲ್ಲಿ ಫೋನ್ ಬ್ಯಾಟರಿಗಳು ಬಿಸಿಯಾಗುವುದು ಸಾಮಾನ್ಯ. ಆ ಬಿಸಿ ಕಡಿಮೆಯಾಗಲು ನೀವು ಅಳವಡಿಸಿರುವ ರಕ್ಷಣಾ ಕವಚಗಳು ತಡೆಯಾಗಬಹುದು.
  4. ಯಾವಾಗಲೂ ತ್ವರಿತ (Fast) ಚಾರ್ಜರ್’ಗಳನ್ನು ಬಳಸುವುದು ನಿಮ್ಮ ಫೋನ್ ಬ್ಯಾಟರಿಗೆ  ಒಳ್ಳೆಯದಲ್ಲ. ಫಾಸ್ಟ್ ಚಾರ್ಜರ್’ನಲ್ಲಿ ಹೆಚ್ಚು ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. ನಿಮ್ಮ ಫೋನ್, ಬ್ಯಾಟರಿ ಸೆಟ್ಟಿಂಗ್’ನಲ್ಲಿ ಸಾಮಾನ್ಯ ಚಾರ್ಜಿಂಗ್ ಆಯ್ಕೆಯನ್ನು ನೀಡಿದ್ದರೆ, ಅದನ್ನು ಬಳಸಿಕೊಳ್ಳಿ. ನಿಮ್ಮ ಫೋನ್ ಬಹಳ ಬಿಸಿಯಾಗಿದ್ದರೆ ಪವರ್ ಬಟನ್ ಆಫ್ ಮಾಡಿಬಿಡಿ. ಫೋನ್ ತಣ್ಣಗಾದ ಬಳಿಕ ಆದನ್ನು ಆನ್ ಮಾಡಿ.
  5. ರಾತ್ರಿಯಿಡೀ ಫೋನನ್ನು ಚಾರ್ಜ್’ಗೆ ಇಡಬೇಡಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸುವುದು.
  6. 3ನೇ ಪಕ್ಷದ ಬ್ಯಾಟರಿ ಆ್ಯಪ್‌’ಗಳನ್ನು ಬಳಸಬೇಡಿ. ಅವು ನಿಮ್ಮ ಫೋನ್ ಬ್ಯಾಟರಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವುಗಳು ಇತರ ಆಪ್’ಗಳನ್ನು ಮುಚ್ಚಿ ಬಿಡುತ್ತವೆ. ಮೂರನೇ ಪಕ್ಷೀಯ ಆ್ಯಪ್‌’ಗಳು ಜಾಹೀರಾತುಗಳನ್ನು ನಿಮ್ಮ ಫೋನ್’ಗೆ ಲೋಡ್ ಮಾಡುವುದಲ್ಲದೇ, ಇತರ ಆ್ಯಪ್‌’ಗಳನ್ನು ನಿಮಗಾಗಿ ಶಿಫಾರಸ್ಸು ಮಾಡುತ್ತಲೇ ಇರುತ್ತವೆ.
  7. ಚಾರ್ಜ್ ಮಾಡುವಾಗ ಕನಿಷ್ಠ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿರಿ.
  8. ಪದೇ ಪದೇ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ. ಮೊಬೈಲ್ ಬ್ಯಾಟರಿ ಶೇ. 20ರಷ್ಟಕ್ಕೆ ಬಂದಾಗ ಮಾತ್ರ ಚಾರ್ಜ್ ಮಾಡಿ. ಪದೇ ಪದೇ ಚಾರ್ಜ್  ಮಾಡುವುದರಿಂದ  ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಫೋನ್ ಬ್ಯಾಟರಿ ಸಂಪೂರ್ಣ ಮುಗಿಯುವವರೆಗೂ ಫೋನ್ ಬಳಸುವುದರಿಂದಲೂ ಬ್ಯಾಟರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
  9. ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಫೋನ್’ಗೆ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.
  10. ಪವರ್ ಬ್ಯಾಂಕ್’ನಲ್ಲಿ ಚಾರ್ಜ್ ಆಗುತ್ತಿರುವಾಗ ಫೋನ್ ಬಳಸುವುದನ್ನು ತಪ್ಪಿಸಿ. ಆ ಸಂದರ್ಭದಲ್ಲಿ ಫೋನ್’ನ ಬಿಸಿಯಾಗುತ್ತದೆ. ಹಾಗೂ ಅದು ಬ್ಯಾಟರಿ ಆಯುಷ್ಯಕ್ಕೆ ಒಳ್ಳೆಯದಲ್ಲ.
Follow Us:
Download App:
  • android
  • ios