Asianet Suvarna News Asianet Suvarna News

ಹರ್ಮ'ನ್'ಪ್ರೀತ್ ಸಿಡಿಲಬ್ಬರದ ಬ್ಯಾಟಿಂಗ್: ವಿಶ್ವಕಪ್ ಫೈನಲ್'ಗೆ ಭಾರತದ ವನಿತೆಯರು

ನಾಯಕಿ ಮಿಥಾಲಿ ಜೊತೆಯೊಂದಿಗೆ ಆಟ ಆರಂಭಿಸಿದ ಮಧ್ಯಮ ಕ್ರಮಾಂಕದ ಆಟಗಾರ್ತಿ ಹರ್ಮ'ನ್'ಪ್ರೀತ್ ಕೌರ್ ಮೊದಮೊದಲು ಕೌರ್ ನಿಧಾನಗತಿಯಲ್ಲಿ ಆಟವಾಡಿದರೂ ನಂತರ ಬ್ಯಾಟ್ ಬೀಸಲು ಶುರು ಮಾಡಿದರು. ಆಸ್ಟ್ರೇಲಿಯಾದ ಯಾವುದೇ ಬೌಲರ್'ಗಳು ಕೌರ್ ಆರ್ಭಟವನ್ನು ತಡೆಯಲು ಸಾಧ್ಯವಾಗಲಿಲ್ಲ.

Women world cup India won by 36 runs

ಡರ್ಬಿ(ಜು.20): ಪಂಜಾಬ್ ಹುಡುಗಿ ಹರ್ಮ'ನ್'ಪ್ರೀತ್ ಕೌರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡದ ವನಿತೆಯರು ಇಂಗ್ಲೆಂಡ್'ನಲ್ಲಿ ನಡೆಯುತ್ತಿರುವ 2017ರ ವಿಶ್ವ'ಕಪ್'ನ ಸೆಮಿ'ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯ ತಂಡವನ್ನು  36 ರನ್'ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ.

ಮಳೆಯಿಂದಾಗಿ 3 ಗಂಟೆ ತಡವಾಗಿ ಆಟ ಆರಂಭವಾಗಿ ಪಂದ್ಯವನ್ನು 42 ಓವರ್'ಗಳಿಗೆ ಇಳಿಸಲಾಯಿತು. ಟಾಸ್ ಗೆದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ದುಕೊಂಡರು. 10 ಓವರ್'ಗಳಾಗುವಷ್ಟರಲ್ಲಿ ಸ್ಮೃತಿ ಮಂದಾನ ಹಾಗೂ ಪೂನಮ್ ರಾವತ್ ವಿಕೇಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ನಂತರ ಶುರುವಾದದ್ದು ಕೌರ್ ಸ್ಫೋಟಕ ಆಟ

ನಾಯಕಿ ಮಿಥಾಲಿ ಜೊತೆಯೊಂದಿಗೆ ಆಟ ಆರಂಭಿಸಿದ ಮಧ್ಯಮ ಕ್ರಮಾಂಕದ ಆಟಗಾರ್ತಿ ಹರ್ಮ'ನ್'ಪ್ರೀತ್ ಕೌರ್ ಮೊದಮೊದಲು ಕೌರ್ ನಿಧಾನಗತಿಯಲ್ಲಿ ಆಟವಾಡಿದರೂ ನಂತರ ಬ್ಯಾಟ್ ಬೀಸಲು ಶುರು ಮಾಡಿದರು. ಆಸ್ಟ್ರೇಲಿಯಾದ ಯಾವುದೇ ಬೌಲರ್'ಗಳು ಕೌರ್ ಆರ್ಭಟವನ್ನು ತಡೆಯಲು ಸಾಧ್ಯವಾಗಲಿಲ್ಲ.

90 ಎಸೆತಗಳಲ್ಲಿ ವೃತ್ತಿ ಜೀವನದ 3ನೇ ಶತಕ ಸಿಡಿಸಿದ ಕೌರ್, ಆನಂತರ ಭರ್ಜರಿ ಆಟವಾಡಲು ಆರಂಭಿಸಿದರು. ಕೇವಲ 115 ಚಂಡುಗಳಲ್ಲಿ 171 ರನ್ ಬಾರಿಸಿ ಅಜೇಯರಾಗುಳಿದರು. ಹರ್ಮನ್ ಅಬ್ಬರದ ಬ್ಯಾಟಿಂಗ್'ನಲ್ಲಿ 20 ಆಕರ್ಷಕ  ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್'ಗಳಿದ್ದವು.

ನಾಯಕಿ ಮಿಥಾಲಿ ರಾಜ್ 61 ಎಸೆತಗಳಲ್ಲಿ 36,  ಕೊನೆಯಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಕೇವಲ 10 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 16 ರನ್ ಬಾರಿಸುವ ಮೂಲಕ ಅಂತಿಮವಾಗಿ ತಂಡದ ಮೊತ್ತವನ್ನು 42 ಓವರ್'ಗಳಲ್ಲಿ 281/4 ರನ್ ಪೇರಿಸಿದರು.

ಗೋಸ್ವಾಮಿ, ಪಾಂಡೆ, ದೀಪ್ತಿ ದಾಳಿಗೆ ನಲುಗಿದ ಕಾಂಗುರೋ'ಗಳು

 281 ರನ್'ಗಳ ಬೃಹತ್ ರನ್ ಬೆನ್ನಟ್ಟಿದ ಆಸ್ಟ್ರೇಲಿಯಾದ ವನಿತೆಯರು 7.2 ಓವರ್'ಗಳಲ್ಲಿ 21 ರನ್'ಗಳಿಗೆ 3 ವಿಕೇಟ್ ಕಳೆದುಕೊಂಡರು. ನಂತರ ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಪೆರ್ರಿ,(38:56 ಎಸೆತ, 3ಬೌಂಡರಿ),ವಿಲ್ಲಾನಿ(75: 58 ಎಸೆತ, 13 ಬೌಂಡರಿ) ಬ್ಲ್ಯಾಕ್'ವೆಲ್(90:56 ಎಸೆತ, 10 ಬೌಂಡರಿ, 3 ಸಿಕ್ಸ್'ರ್) ಉತ್ತಮವಾಗಿ ಆಟವಾಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರೂ ಭಾರತೀಯ ಬೌಲರ್'ಗಳಾದ ಗೋಸ್ವಾಮಿ, ಪಾಂಡೆ, ದೀಪ್ತಿ ಕರಾರುವಕ್ ದಾಳಿಗೆ ಶರಣಾಗಲೇಬೇಕಾಯಿತು.

ಸ್ಪೋಟಕ ಆಟವಾಡುತ್ತಿದ್ದ ವಿಲ್ಲಾನಿಯನ್ನು ಕನ್ನಡತಿ ರಾಜೇಶ್ವರಿ ಪೆವಿಲಿಯನ್'ಗೆ ಕಳಿಸಿದರು.  ಅಂತಿಮವಾಗಿ ಆಸ್ಟ್ರೇಲಿಯಾದ ವನಿತೆಯರು 41.1 ಓವರ್'ಗಳಿಗೆ 245 ರನ್'ಗಳಿಗೆ ಸೋಲನ್ನು ಒಪ್ಪಿಕೊಂಡರು.ಭಾರತದ ಪರ ಗೋಸ್ವಾಮಿ(35/2), ಪಾಂಡೆ(17/2), ದೀಪ್ತಿ(59/2) ಹಾಗೂ ಕನ್ನಡತಿ ರಾಜೇಶ್ವರಿ ಗಾಯಕ್'ವಾಡ್ (62/1) ವಿಕೇಟ್ ಗಳಿಸಿದರು.

ಜು.23ರಂದು ಇಂಗ್ಲೆಂಡ್ ವಿರುದ್ಧದ ನಡೆಯುವ ಫೈನಲ್'ನಲ್ಲಿ  ಪಂದ್ಯದಲ್ಲಿ ಭಾರತದ ವನಿತೆಯರು ಕಪ್'ಗಾಗಿ ಸೆಣಸಲಿದ್ದಾರೆ.    

ಸ್ಕೋರ್:

ಭಾರತ: 281/4(42 ಓವರ್)

ಹರ್ಮನ್ ಪ್ರೀತ್ ಕೌರ್ : 171*

ಮಿಥಾಲಿ ರಾಜ್ : 36

ಎಲ್ವೀಸ್ ವಿಲೀನಿ: 19/1

ಆಸ್ಟ್ರೇಲಿಯಾ: 245/10(41.1)

ಬ್ಲ್ಯಾಕ್'ವೆಲ್: 90

ವಿಲ್ಲಾನಿ:75

ಪೆರ್ರಿ:38

ದೀಪ್ತಿ ಶರ್ಮಾ: 59/3

 ಗೋಸ್ವಾಮಿ(35/2),  

ಪಾಂಡೆ(17/2),

ಭಾರತಕ್ಕೆ 36 ರನ್'ಗಳ ಜಯ

ಪಂದ್ಯ ಶ್ರೇಷ್ಠೆ: ಹರ್ಮನ್ ಪ್ರೀತ್ ಕೌರ್

ಜುಲೈ 23: ಫೈನಲ್ ಪಂದ್ಯ

Follow Us:
Download App:
  • android
  • ios